ಆರೋಗ್ಯ ವಿಮೆ (ಸಾಂದರ್ಭಿಕ  ಚಿತ್ರ)
ಆರೋಗ್ಯ ವಿಮೆ (ಸಾಂದರ್ಭಿಕ ಚಿತ್ರ)

ಆರೋಗ್ಯ ವಿಮೆ ಯೋಜನೆಗಳಿಗೆ ಗ್ರಹಣ

ರಾಜ್ಯ ಸರ್ಕಾರವು ಎಲ್ಲರಿಗೂ ಆರೋಗ್ಯ ಭಾಗ್ಯ ಕಲ್ಪಿಸಲು ನಾನಾ ಆರೋಗ್ಯ ವಿಮೆ ಯೋಜನೆಗಳಿಗೆ ಚಾಲನೆ ನೀಡಿದೆ. ಆದರೆ ಅದಕ್ಕೆ ರೂಪಿಸಿರುವ...

ಗದಗ: ರಾಜ್ಯ ಸರ್ಕಾರವು ಎಲ್ಲರಿಗೂ ಆರೋಗ್ಯ ಭಾಗ್ಯ ಕಲ್ಪಿಸಲು ನಾನಾ ಆರೋಗ್ಯ ವಿಮೆ ಯೋಜನೆಗಳಿಗೆ ಚಾಲನೆ ನೀಡಿದೆ. ಆದರೆ ಅದಕ್ಕೆ ರೂಪಿಸಿರುವ ನಿಯಮಗಳು ಮತ್ತು ಮಾನದಂಡಗಳಿಂದಾಗಿ ಯೋಜನೆಗೆ ಗ್ರಹಣ ಹಿಡಿದಿದೆ. ಎಪಿಎಲ್  ಕಾರ್ಡ್‍ದಾರರಿಗೆ ರಾಜೀವ್ ಆರೋಗ್ಯ ಭಾಗ್ಯ, ಸರ್ಕಾರಿ ನೌಕರರಿಗೆ ಜ್ಯೋತಿ ಸಂಜೀವಿನಿ ವಿಮಾ ಯೋಜನೆ ಜಾರಿಗೊಳಿಸಿದೆ. ಹೃದಯರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡ ಕಾಯಿಲೆ, ಅಪಘಾತಗಳು ಇದರ ವ್ಯಾಪ್ತಿಯಲ್ಲಿದ್ದು, ಇದರೊಟ್ಟಿಗೆ 445 ಚಿಕಿತ್ಸೆಗಳನ್ನು ಒಳಗೊಂಡಿದೆ. ಇದಕ್ಕಾಗಿ ರಾಜ್ಯದ 110 ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಸರ್ಕಾರಿ ನೌಕರರಿಗೆ 124 ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಎಪಿಎಲ್  ಕಾರ್ಡ್‍ದಾರರಿಗೆ ವಿಮಾ ಯೋಜನೆಯನ್ನೇನೊ ಕಲ್ಪಿಸಲಾಗಿದೆ. ಆದರೆ ಎಪಿಎಲ್  ಕಾರ್ಡ್ ವಿತರಣೆಯಲ್ಲಿಯೇ ಸಾಕಷ್ಟು ಲೋಪಗಳಾಗಿವೆ. ನಮಗೆ ಬಿಪಿಎಲ್  ಕಾರ್ಡ್ ಬರಬೇಕಿತ್ತು ಎಂದು ಆನ್‍ಲೈನ್‍ನಲ್ಲಿ ಮರು ಅರ್ಜಿ ಸಲ್ಲಿಸಿದವರ ಸಂಖ್ಯೆ 9 ಲಕ್ಷ  ಮೀರಿದೆ. ಇದು ಯೋಜನೆ ಅನುಷ್ಠಾನಕ್ಕೆ ದೊಡ್ಡ ಸಮಸ್ಯೆಯಾಗಿದೆ. ಚಿಕಿತ್ಸೆ ವೇಳೆ ಎಪಿಎಲ್  ಕಾರ್ಡ್‍ದಾರರು ಶೇ.30ರಷ್ಟು ಭರಿಸಬೇಕಿದೆ. ಇನ್ನುಳಿದ ಶೇ. 70 ಹಣವನ್ನು ಸರ್ಕಾರ ಭರಿಸುತ್ತದೆ. ವಿಶೇಷ ವಾರ್ಡ್‍ಗಳಲ್ಲಿ ದಾಖಲಾದರೆ ಈ ಪಾಲು 50:50. ಇನ್ನು ಎಪಿಎಲ್ ಕಾಡ್ರ್ ದಾರರು ಶೇ. 50ರಷ್ಟು ಭರಿಸಿದರೂ ಸರ್ಕಾರ ಯೋಜನೆಯ ಗರಿಷ್ಠ ಮೊತ್ತವನ್ನು ರು. 1.5 ಲಕ್ಷಕ್ಕೆ ನಿಗದಿ ಮಾಡಿದ ಹಿನ್ನೆಲೆಯಲ್ಲಿ ಪ್ರಮುಖ ಕಾಯಿಲೆಯಿಂದ ಬಳಲುತ್ತಿರುವವರು ಇದರಿಂದ ದೂರವಾ ಗುತ್ತಿದ್ದಾರೆ. ಇದರ ಮಿತಿಯನ್ನು ಇನ್ನಷ್ಟು ಹೆಚ್ಚಿಸಬೇಕಿದೆ. ಸರ್ಕಾರ ಯೋ ಜನೆ ಘೋಷಣೆ ಮಾಡುವ ಸಂದರ್ಭದಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಿಗೆ, ಚಿಕಿತ್ಸೆ ಪಡೆದವರಿಗೂ ಯೋಜನೆಯನ್ನು ವಿಸ್ತರಿಸಬೇಕಿದೆ ಎನ್ನುವುದು ಎಪಿಎಲ್ ಕಾರ್ಡ್‍ದಾರರ ಆಗ್ರಹ. ಆರೋಗ್ಯ ಭಾಗ್ಯ ಯೋ ಜನೆಗಳನ್ನು ರೂಪಿಸಿರುವುದು ಸ್ವಾಗತಾರ್ಹ. ಆರೋಗ್ಯ ಸಚಿವರು ಹಿರಿಯ ಅ„ಕಾರಿಗಳೊಂದಿಗೆ ಚರ್ಚಿಸಿ ಕೆಲ ನಿಯಮಗಳನ್ನು ಸಡಿಲಿಸಬೇಕಿದೆ. ಈ ವಿಮಾ ಯೋಜನೆಗಳಿಗೆ ಅಗತ್ಯವಾಗಿ ಬೇಕಾಗಿರುವುದು ಪಡಿತರ ಕಾರ್ಡ್. ಮೊದಲು ಪಡಿತರ ಕಾರ್ಡ್ ವಿತರಣೆಯಲ್ಲಾಗಿರುವ ಗೊಂದಲವನ್ನು ನಿವಾರಿಸಬೇಕಿದೆ.
_ ಜಿ.ಎಚ್. ನಾಗೇಶ ಹಾಗೂ ಕೆ.ಬಿ. ಹಿರೇಮಠ ಸಾಮಾಜಿಕ ಹೋರಾಟಗಾರರು

Related Stories

No stories found.

Advertisement

X
Kannada Prabha
www.kannadaprabha.com