
ನಾಗ್ಪುರ: ಆರೆಸ್ಸೆಸ್‍ನ ಸರಕಾರ್ಯವಾಹರಾಗಿ ಸುರೇಶ್ ಭಯ್ಯಾಜಿ ಜೋಷಿ ಅವರು ಪುನರಾಯ್ಕೆ ಯಾಗಿದ್ದಾರೆ. ಸತತ 3ನೇ ಬಾರಿಗೆ ಅವಿರೋಧವಾಗಿ
ನೇಮಕಗೊಂಡಿರುವ ಭಯ್ಯಾಜಿ ಅವರು 2018ರ ಮಾರ್ಚ್‍ವರೆಗೆ ಸಂಘದ ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ)ರಾಗಿ ಮುಂದುವರಿಯಲಿದ್ದಾರೆ. ನಾಗ್ಪುರದಲ್ಲಿ ನಡೆ
ಯುತ್ತಿರುವ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಮಹಾಧಿವೇಶನದಲ್ಲಿ ಶನಿವಾರ ಭಯ್ಯಾಜಿ ಅವರ ಪುನರಾಯ್ಕೆ ನಡೆಯಿತು. ಕ್ಷೇತ್ರ ಮಟ್ಟದಲ್ಲೂ ಬದಲಾವಣೆ ನಡೆದಿದ್ದು, ಕರ್ನಾಟಕದ ಮೂವರಿಗೆ ಹೊಸ ಸ್ಥಾನ ನೀಡಲಾಗಿದೆ. ಅವರೆಂದರೆ, ಟಿ ವಿ. ನಾಗರಾಜ್: ಬೆಂಗಳೂರಿನ ವಿಲ್ಸನ್ ಗಾರ್ಡನ್‍ನವರಾದ ಇವರಿಗೆ ಕ್ಷೇತ್ರೀಯ ಸಂಘಚಾಲಕ(ಅಧ್ಯಕ್ಷ) ಸ್ಥಾನ
ಟಿ.ಎಸ್. ವೆಂಕಟೇಶ್: ಬೆಂಗಳೂರಿನವರಾದ ಇವರಿಗೆ ಕ್ಷೇತ್ರೀಯ ಸಂಪರ್ಕ್ ಪ್ರಮುಖ್ ಸ್ಥಾನ
ಡಾ. ಕಲ್ಲಡ್ಕ ಪ್ರಭಾಕರ್ ಭಟ್: ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಭಟ್‍ರಿಗೆ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಸ್ಥಾನ. ಇದೇ ವೇಳೆ, ಕಚ್ಚಂ ರಮೇಶ್ ಅವರಿಗೆ ಕ್ಷೇತ್ರೀಯ ಬೌದಿಟಛಿಕ್ ಪ್ರಮುಖ್ ಹುದ್ದೆಯನ್ನು ನೀಡಲಾಗಿದೆ.
Advertisement