ಮೋಹನ ರಾಗಕೆ ಭೈರತಿ ತಾಳ

ನಮ್ ಹುಡ್ಗ ಮೋಹನ್ ಅಂತ ಒಬ್ನು ಅವ್ನಲ್ಲ, ಅವನ ಬಗ್ಗೆ ಏನೇನೋ ಬರ್ದೀದಿಯಂತೆ? ಅವ್ನ ವಿಷ್ಯದಾಗ ನೀನು ಏನೂ ಮಾಡೋಕೆ ಹೋಗ್ಬಾರ್ದು...
ಭೈರತಿ ಬಸವರಾಜ್
ಭೈರತಿ ಬಸವರಾಜ್

ಬೆಂಗಳೂರು: ನಮ್  ಹುಡ್ಗ ಮೋಹನ್ ಅಂತ ಒಬ್ನು ಅವ್ನಲ್ಲ, ಅವನ ಬಗ್ಗೆ ಏನೇನೋ ಬರ್ದೀದಿಯಂತೆ? ಅವ್ನ ವಿಷ್ಯದಾಗ ನೀನು ಏನೂ ಮಾಡೋಕೆ ಹೋಗ್ಬಾರ್ದು. ಅವನ ವಿಷ್ಯದಾಗೆ ಎಂಟ್ರಿ ಆದ್ರೆ ತೊಂದ್ರೆ ಆಯ್ತದೆ. ಇಲ್ಲಾ ಮಾಡ್ತೀನಿ ಅಂದ್ರೆ ನಂದೇನಿಲ್ಲ. ಸಾಯೇ ಬ್ರು ಅವ್ನ ಜತೆ ಚೆನ್ನಾಗವ್ರೆ. ಹೇಳ್ದಂಗೆ ಕೇಳ್ತಾರೆ. ಅದ್ರಾಗ್ ಡೌಟ್ ಇಲ್ಲ. ಏನಾದ್ರೂ ಮಾಡಿದ್ರೆ ಸಸ್ಪೆಂಡ್ ಅಂತೂ ಮಾಡ್ತಾರೆ. ಬಹಳ  ಕಷ್ಟ ಅನುಭವಿಸಬೇಕಾಯ್ತದೆ.
ನನ್ ಮಾತು ಕೇಳು...
ಶಾಸಕ ಭೈರತಿ ಬಸವರಾಜು ಅವರು ದಿಲ್ಲಿಯಲ್ಲಿರುವ ಕರ್ನಾಟಕ ಭವನ ಸಿಬ್ಬಂದಿಯೊಬ್ಬರಿಗೆ ಧಮಕಿ ಹಾಕಿದ ಪರಿಯಿದು!
ಇದರಲ್ಲಿ ರಾಜ್ಯ ಮುಖ್ಯಮಂತ್ರಿಯವರ ಹೆಸರೂ ಪ್ರಸ್ತಾಪವಾಗಿದ್ದು, ಮುಖ್ಯಮಂತ್ರಿಗಳು ನಿನ್ನನ್ನು ಖಂಡಿತಾ ಸಸ್ಪೆಂಡ್ ಮಾಡುತ್ತಾರೆ ಎಂದು ಭೈರತಿಬಸವರಾಜ್ ನೇರವಾಗಿ ಸರ್ಕಾರಿ ಉದ್ಯೋಗಿಗೆ ದೂರವಾಣಿ ಮೂಲಕ ಧಮಕಿ ಹಾಕಿದ್ದಾರೆ. ಸಂಭಾಷಣೆಯ ಪ್ರತಿ `ಕನ್ನಡಪ್ರಭ'ಕ್ಕೆ ಲಭ್ಯವಾಗಿದೆ. ಭೈರತಿ ಬಸರಾಜ್ ಅವರಿಗೆ ಆಪ್ತನಾದ ಕರ್ನಾಟಕ ಭವನ ಸಿಬ್ಬಂದಿ ಮೋಹನ್ ಎಂಬವರು ಕೆಲಸ ಸರಿಯಾಗಿ ಮಾಡುತ್ತಿಲ್ಲ ಎಂದು ಸೂಪರಿಂ
ಟೆಂಡೆಂಟ್ ಆಗಿರುವ ವೆಂಕಟೇಶಮೂರ್ತಿ ವರದಿ ಸಿದ್ಧಪಡಿಸಿದ್ದೇ ಇಷ್ಟಕ್ಕೆಲ್ಲ ಕಾರಣ. ಮುಖ್ಯಮಂತ್ರಿ ಸಿದ್ದರಾಮಯ್ಯ ದಿಲ್ಲಿಗೆ ಹೋದಾಗ ಅವರಿಗೆ ಆಪ್ತಸಹಾಯಕನಾಗಿ
ಮೋಹನ್ ನೇಮಕಗೊಂಡಿದ್ದಾರೆ. ಈ ಮೋಹನ್ ಮೊದಲಿನಿಂದಲೂ ಸಿದ್ದರಾಮಯ್ಯ ಅವರಿಗೆ ಆಪ್ತ. ಆದರೆ ಮುಖ್ಯಮಂತ್ರಿ ದಿಲ್ಲಿಯಲ್ಲಿದ್ದ
ಸಂದರ್ಭದಲ್ಲಿ ಮೋಹನ್ ಕರ್ನಾಟಕ ಭವನ ಸಿಬ್ಬಂದಿಯಾಗಿ ಕೆಲಸ ಮಾಡಬೇಕು. ಆದರೆ ಆತ ಹಾಗೆ ಮಾಡುತ್ತಿರಲಿಲ್ಲ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ವೆಂಕಟೇಶಮೂರ್ತಿ ಅವರು ಮೋಹನ್ ವಿರುದ್ಧ ವರದಿ ಸಲ್ಲಿಸಿದ್ದರು ಎನ್ನಲಾಗಿದೆ. ಜತೆಗೆ ಮುಖ್ಯಮಂತ್ರಿಯವರಿಗೂ ಪತ್ರ ಬರೆದಿದ್ದರು. ಇದು ಮೋಹನ್ ಅವರಿಗೆ
ನುಂಗಲಾರದ ತುತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಭೈರತಿ ಅವರ ಮೂಲಕ ವೆಂಕಟೇಶಮೂರ್ತಿ ಅವರಿಗೆ ಧಮಕಿ ಹಾಕಿರಬಹುದು ಎಂದು
ಅಂದಾಜಿಸಲಾಗಿದೆ. ಭೈರತಿ ಬಸವರಾಜು ಅವರು ದೂರವಾಣಿ ಯಲ್ಲಿ ವೆಂಕಟೇಶಮೂರ್ತಿ ಅವರಿಗೆ ನೇರವಾಗಿಯೇ  `ಅವನ ವಿರುದ್ಧ ಏನೂ
ಮಾಡಬಾರದು. ಕೊಟ್ಟ ವರದಿ ಹಿಂದಕ್ಕೆ ತೆಗೆದುಕೊಂಡು ಬಿಡು. ಇಲ್ಲವಾದಲ್ಲಿ ನಿನಗೆ ತೊಂದರೆ ಯಾಗುತ್ತೆ. ಕಷ್ಟ ಅನುಭವಿಸಬೇಕಾಗುತ್ತೆ'
ಎಂದು ನೇರವಾಗಿ ಬೆದರಿಕೆ ಹಾಕಿದ್ದಾರೆ. ಸಾಲದ್ದಕ್ಕೆ `ಸಿಎಂ ನಿನ್ನ ಸಸ್ಪೆಂಡ್ ಮಾಡುತ್ತಾರೆ'
ಎಂದೂ ಬೆದರಿಸಿದ್ದಾರೆ.


ವೆಂಕಟೇಶಮೂರ್ತಿ ಅವರು ತನ್ನ ದೇನೂ ತಪ್ಪಿಲ್ಲ ಎಂದು ಪರಿಪರಿಯಾಗಿ ಹೇಳಿಕೊಂಡರೂ ಭೈರತಿ ಬಸವರಾಜುಅವರು ಮೋಹನ್ ವಿರುದ್ಧ ಏನೂ ಮಾಡದೇ ಸುಮ್ಮನಿ ರುವಂತೆ, ಇಲ್ಲವಾದಲ್ಲಿ ಕಷ್ಟ ಅನುಭವಿಸಬೇಕಾಗುತ್ತದೆ ಎಂದು ವೆಂಕಟೇಶಮೂತಿರ್ ಗೆ ಹೆದರಿಸುವುದು ಮತ್ತು ಆತ ಸಲ್ಲಿಸಿದ ವರದಿ, ಪತ್ರವನ್ನು ಹಿಂಪಡೆಯುವಂತೆ ಒತ್ತಡ ಹೇರುವುದು ಸ್ಪಷ್ಟವಾಗಿದೆ. ಇದು ಸಾಲದೆಂಬಂತೆ 3 ತಿಂಗಳ ಹಿಂದಷ್ಟೇ ಬೆಂಗಳೂರಿನಿಂದ ದಿಲ್ಲಿಗೆ ವರ್ಗವಣೆಗೊಂಡಿದ್ದ ವೆಂಕಟೇಶಮೂರ್ತಿ  ಅವರನ್ನು ಮರಳಿ ಕರ್ನಾಟಕಕ್ಕೆ ವರ್ಗ ಮಾಡಲಾಗಿದೆ. ಆದರೆ ಕರ್ನಾಟಕ ಭವನದಲ್ಲಿ ವರ್ಷಗಳಿಂದ, ದಶಕಗಳಿಂದ ಇರುವವರನ್ನು ಅಲ್ಲೇ ಉಳಿಸಿಕೊಳ್ಳಲಾಗಿದ್ದು, 3 ತಿಂಗಳ ಹಿಂದಷ್ಟೇ ಹೋದವರನ್ನು ವರ್ಗ ಮಾಡಿರುವುದರ ಹಿಂದೆ ಪ್ರಭಾವಿಗಳ ಕೈವಾಡ ಇರುವುದು ಸ್ಪಷ್ಟವಾಗಿದೆ. ಭೈರತಿ ಬಸವರಾಜು ಅವರು ದಿಲ್ಲಿ ಕರ್ನಾಟಕ ಭವನ ಸೂಪರಿಂಟೆಂಡೆಂಟ್
ವೆಂಕಟೇಶ್‍ಮೂರ್ತಿ ಅವರೊಂದಿಗೆ ನಡೆಸಿದ ದೂರವಾಣಿ ಕರೆಯ ಸಂಕ್ಷಿಪ್ತರೂಪ ಇಂತಿದೆ. ಮೊದಲು ಭೈರತಿ ಬಸವರಾಜು ಅವರು ವೆಂಕಟೇಶಮೂತಿರ್
ಗೆ ಕರೆ ಮಾಡಿರುತ್ತಾರೆ. ಆಗ ವೆಂಕಟೇಶಮೂರ್ತಿ ದೂರವಾಣಿ ಕರೆ ಸ್ವೀಕರಿಸಿರುವು
ದಿಲ್ಲ. ನಂತರ ವೆಂಕಟೇಶಮೂರ್ತಿ  ಅವರೇ ಭೈರತಿ ಬಸವರಾಜು ಅವರಿಗೆ ಕರೆ ಮಾಡುತ್ತಾರೆ-
ವೆಂಕಟೇಶಮೂರ್ತಿ: ಹಲೋ, ಸರ್ ಮಿಸ್ ಕಾಲ್ ಇತ್ತು ಅದಕೇ ಕಾಲ್ ಮಾಡಿದೆ.
ಹಲೋ ಹುಂ... ವೆಂಕಟೇಶ್
ಮೂರ್ತಿನಾ? ನಾನಪ್ಪಾ ಕೆ.ಆರ್. ಪುರಂ ಎಂಎಲ್‍ಎ ಭೈರತಿ ಬಸವರಾಜು ಮಾತಾಡೋದು. ಅಲ್ಲಿ ಮೋಹನ್ ಅಂತ
ಒಬ್ನು ನಮ್ಮ ಹುಡುಗ ಇದ್ದಾನಲ್ಲ. ಅವನ ಬಗ್ಗೆ ಏನೇನೋ ಬರ್ದಿದೀ ಯಂತಲ್ಲಪ್ಪಾ.
ಏ ನಾನು ಹೇಳೋದಷ್ಟು ಕೇಳ್ರಿ..
ವೆಂಕಟೇಶಮೂರ್ತಿ: ಅಣ್ಣಾ ನಾನೇ ಮನೆಗ್ ಬತ್ತೀನಣ್ಣಾ.
ಭೈರತಿ ಬಸವರಾಜು: ಏ ನೀನು ಮನೇಗ್ ಬರೋದಿರ್ಲಿ. ನಿನ್ನ ಆಮೇಲೆ ಸಿಎಂ ಕರಸ್ತಾರೆ. ಅವ್ನು ಸಿಎಂಗೆ ಎಷ್ಟು ಏನು,
ಎಷ್ಟು ಗೊತ್ತಾ ನಿಂಗೆ? (ಅತ್ತ ಕಡೆಯಿಂದ ಮಾತ ನಾಡುವ ಯತ್ನ) ರೀ ಹೇಳೋಗಂಟ ಕೇಳ್ರಿ. ಅವ್ನು ನಮ್  ಹುಡುಗ್ರಿಗೆಲ್ಲ ಎಷ್ಟು
ಸಹಾಯ ಮಾಡಿದಾನೆ. ಅವನ ಬಗ್ಗೆ ಏನಾರು ಗೊತ್ತಾ ನಿಂಗೆ? ಅವನ ಹಿಸ್ಟ್ರಿ ಗೊತ್ತಾ? ತಿಳ್ಕಂಡಿದೀಯಾ ಅವನೇನು ಅಂತಾ?
ವೆಂಕಟೇಶಮೂರ್ತಿ: ಮೆನೆಗೇ ಬತ್ತೀನಣ್ಣಾ, ಹೇಳೋದು ತುಂಬಾ ಇದೆ.
ಅವನಿಂದಾಗಿ ಎಷ್ಟು ಜನ ಕಣ್ನೀರು ಹಾಕ್ತವರಣ್ಣಾ.
ಭೈರತಿ ಬಸವರಾಜು: ಏ.. ಹೇಳೋದು ಕೇಳು..ಫಸ್ಟು ಅದನ್ನು ವಿತ್‍ಡ್ರಾ ಮಾಡಿ ಸರಿಮಾಡ್ಕೊ. ಸಿಎಂ ಸಸ್ಪೆಂಡ್ ಮಾ ಡ್ತಾರೆ.
ವೆಂಕಟೇಶಮೂರ್ತಿ: ಹಂಗಲ್ಲಣ್ಣ. ನೀವು ಅವನ್ಗೂ ಹೇಳ್ಬೇಕಲ್ಲಾ. ಸಾಹೇಬ್ರ ಹೆಸರು ಹೇಳ್ಕಂಡು ದಬ್ಬಾಳಿಕೆ ಮಾಡ್ತವ್ನೆ. ಐಎಎಸ್
ಅಧಿಕಾರಿಗಳನ್ನೂ ಬೈತಾನೆ. ಟ್ರಾನ್ಸ್ ಫರ್ ಮಾಡಿಸ್ತೀನಿ ಅಂತ ಹೆದರಿಸ್ತಾನಣ್ಣ. ಭೈರತಿ ಬಸವರಾಜು: ನೋಡು. ಅವನ ವಿಷ್ಯದಾಗ ನೀನು ಏನೂ ಮಾಡೋಕೆ ಹೋಗ್ಬಾರ್ದು. ಅವನ ವಿಷ್ಯದಾಗೆ ಎಂಟ್ರಿಆದ್ರೆ ತೊಂದ್ರೆ ಆಯ್ತದೆ. ಇಲ್ಲಾ ಮಾಡ್ತೀನಿ ಅಂದ್ರೆ ನಂದೇನಿಲ್ಲ. ಆದ್ರೆ ಅವನ ವಿಷ್ಯ ದಾಗೆ ತಲೆ ಹಾಕಿದ್ರೆ ಸಫರ್ ಆಗ್ತೀಯಾ .ಆಮೇಲೆ ತೊಂದ್ರೆ ಆಯ್ತದೆ. ಆಮೇಲೆ ನಿಂಗಿಷ್ಟ. ನನಗಿಂತ ಅವನು ಸಾಯೇ ಬ್ರ ಜತೆ ಚೆನ್ನಾಗವ್ನೆ. ಅವ್ರು ಅವ್ನು ಹೇಳ್ದಂಗೆ ಕೇಳ್ತಾರೆ. ಅದ್ರಲ್ಲಿ ಡೌಟಿಲ್ಲ. ಏನಿದೆ
ಅದನ್ನ ಡ್ರಾಪ್ ಮಡ್ಬಿಟ್ಟು ಸುಮ್ಕಿರು. ಏನಾದ್ರೂ ಮಾಡಿದ್ರೆ ಸಸ್ಪೆಂಡ್ ಅಂತೂ
ಮಾಡ್ತಾರೆ. ಬಹಳ ಕಷ್ಟ ಅನುಭವಿಸಬೇಕಾಯ್ತದೆ. ನನ್ ಮಾತು ಕೇಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com