ನಮಗ್ಯಾಕಿಲ್ಲ ಎತ್ತಿನಹೊಳೆ?

ಮಗೇನು ಗೊತ್ರೀ ನಮ್ಮ ಸಮಸ್ಯೆ, ನಮ್ಮ ಜಿಲ್ಲೆಗೆ ನೀವೇನಾದ್ರೂ ಬಂದಿದ್ದೀರಾ?ಸಚಿವರಾಗಿ ಇದ್ದೀರಿ ಅಷ್ಟೇ? ಮೂರು ಜಿಲ್ಲೆಗಳನ್ನು ಮಾತ್ರ..
ಟಿ.ಬಿ. ಜಯಚಂದ್ರ
ಟಿ.ಬಿ. ಜಯಚಂದ್ರ
Updated on

ವಿಧಾನಸಭೆ: ನಿಮಗೇನು ಗೊತ್ರೀ ನಮ್ಮ ಸಮಸ್ಯೆ, ನಮ್ಮ ಜಿಲ್ಲೆಗೆ ನೀವೇನಾದ್ರೂ ಬಂದಿದ್ದೀರಾ?ಸಚಿವರಾಗಿ ಇದ್ದೀರಿ ಅಷ್ಟೇ? ಮೂರು ಜಿಲ್ಲೆಗಳನ್ನು ಮಾತ್ರ ನೀರಿನ ಯೋ ಜನೆಗಳಿಂದ ಹೊರಗುಳಿಸಿದ್ದೀರಿ? ಎತ್ತಿನಹೊಳೆ ಬಗ್ಗೆ ಎಲ್ಲೂ ಉಲ್ಲೇಖವೇ ಇಲ್ಲ. ನಾವೇನು ಬದುಕಬೇಕೋಬೇಡವೋ...? ವಿಧಾನಸಭೆಯಲ್ಲಿ ಪಕ್ಷಭೇದ ಮರೆತು ಶಾಸಕರು
ಸರ್ಕಾರವನ್ನು ತರಾಟೆಗೆ ತೆಗೆದು ಕೊಂಡ ರೀತಿ ಇದು. ಶಾಸಕರ ಮಾತನ್ನೂ ಕೇಳದೆ ತಮ್ಮದೇ ಸಮಜಾಯಿಷಿ ನೀಡಲು ಮುಂದಾದ ಹಿರಿಯ ಸಚಿವ ಶ್ರೀನಿವಾಸ ಪ್ರಸಾದ್ ಹಾಗೂ ಟಿ.ಬಿ. ಜಯಚಂದ್ರ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. `ಸಚಿವರಾಗಿ ನೀವೇನು ಕೆಲಸವನ್ನೇಮಾಡಿಲ್ಲ' ಎಂದು ಆರೋಪಿಸಿದರು. ಕುಡಿಯುವ ನೀರಿನ ಸಂಕಷ್ಟದಿಂದಬಳಲುತ್ತಿರುವ ಕೋಲಾರ, ಚಿಕ್ಕಬಳ್ಳಾಪುರ, ಬೆಂಗ ಳೂರು ಗ್ರಾಮಾಂತರ ಜಿಲ್ಲೆಗಳ ಬಗ್ಗೆ ಸಚಿವರು
ಹಾಗೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಎತ್ತಿನ ಹೊಳೆ  ಶಾಶ್ವತ ನೀರು ಒದಗಿಸುವ ಯೋಜನೆ ಗಳ ಬಗ್ಗೆ ಎಲ್ಲೂ ಉಲ್ಲೇಖವೇ ಇಲ್ಲ ವಿಷಯ ವಿಧಾನ ಸಭೆಯಲ್ಲಿ ಪ್ರಸ್ತಾಪವಾಗಿ, ಆಡಳಿತ ಪಕ್ಷದ ಸದಸ್ಯರೂ ಸೇರಿದಂತೆ ಪ್ರತಿಪಕ್ಷ ಸದಸ್ಯರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಕಲಾಪ ಆರಂಭವಾಗು ತ್ತಿದ್ದಂತೆಯೇ  ಕುಡಿಯುವ ನೀರಿನ ಬಗ್ಗೆ ನಿಲುವಳಿ ಸೂಚನೆ ಮಂಡಿಸಿದರು . ಅದನ್ನು ಚರ್ಚೆ ರೂಪದಲ್ಲಿ
ಮಂಡಿಸಲು ಸೂಚಿಸಿ ದಾಗ, ಜಗ ದೀಶ್ ಶೆಟ್ಟರ್ ಅವರು ಕೋಲಾರ, ಚಿಕ್ಕಬಳ್ಳಾಪುರ, ಬೆಂಗ ಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನೀರಿನ ಹಾಹಾ ಕಾರ ಇದೆ. ಆದರೆ ರಾಜ್ಯ ಸರ್ಕಾರ ಪರಮ ಶಿವಯ್ಯ ವರದಿ ಸೇರಿದಂತೆ ಎತ್ತಿನ ಹೊಳೆ ಯೋಜನೆ ಬಗ್ಗೆ ಬಗ್ಗೆ ಬಜೆಟ್ನಲ್ಲೂ ಪ್ರಸ್ತಾಪ ಮಾಡಿಲ್ಲ ಅಲ್ಲಿನ ಜನರು ತಿಂಗಳುಗಟ್ಟನೆ ಹೋರಾಟ ನಡೆಸುತ್ತಿದ್ದರೂ ಸರ್ಕಾರ ನಿರ್ಲಕ್ಷ್ಯ ತೋರಿದೆ. ಎತ್ತಿನಹೊಳೆ ಸಾಧ್ಯತೆ ಇದೆಯೇ ಇಲ್ಲವೇ ಎಂಬುದನ್ನಾದರೂ ಸ್ಪಷ್ಟ ಪಡಿಸಬೇಕಲ್ಲಯ? ಎಲ್ಲ ವನ್ನೂ ಮುಚ್ಚಿ ಡುವ ಪ್ರಯತ್ನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಉಪ ನಾಯಕ ಅಶೋಕ್ ಕೂಡ ದನಿಗೂಡಿಸಿದರು. ಬಿಜೆಪಿ
ಹಾಗೂ ಜೆಡಿಎಸ್‍ನ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ಆದರೆ, ಕಾಂಗ್ರೆಸ್‍ನ ಬಂಗಾರ ಪೇಟೆ ಶಾಸಕ ನಾರಾಯಣಸ್ವಾಮಿ ಮಾತ್ರ ಎತ್ತಿನಹೊಳೆ ಯೋಜನೆ ಮಾತನಾಡ ಬೇಡಿ ಸಚಿವರ ಹೇಳಿಕೆ ಸಮರ್ಥನೆ ಮಾಡಿಕೊಂಡರು.ಬಿಜೆಪಿಯ ರಾಮಕ್ಕ, `ದಯವಿಟ್ಟು ನಮಗೆ ನೀರು ಕೊಡಿ ಸ್ವಾಮಿ. ನಾವು ನಿಮ್ಮನ್ನು ಏನೂ ಕೇಳುವುದಿಲ್ಲ. ಅಲ್ಲಿ ಜನ ನೀರಿಲ್ಲದೆ ಬಳಲುತ್ತಿದ್ದಾರೆ'ಎಂದು ಪ್ರಾರ್ಥಿಸಿದರು.



ಎತ್ತಿನಹೊಳೆ ಕೈಬಿಟ್ಟಿಲ್ಲ
ಎತ್ತಿನ ಹೊಳೆ ಯೋಜನೆಯನ್ನು ಬಿಟ್ಟಿಲ್ಲ. ಅದು ಆನ್ ಗೋಯಿಂಗ್  ವರ್ಕ್. ಆಡಳಿತಾತ್ಮಕ ಅನುಮೋದನೆ ನೀಡಿದ್ದು, ತಾಂತ್ರಿಕ ಸಮ್ಮತಿಯೊಂದಿಗೆ ಡಿಪಿಆರ್ ಆಗಬೇಕಿದೆ. ಇನ್ನು ಬೋರ್‍ವೆಲ್ ನಿಯಂತ್ರಣ ಕಾಯಿದೆಗೆ ನಮಗೆ ಸಹಕಾರ ದೊರಕುತ್ತಿಲ್ಲ. ರೈತರು ಸಹಕರಿಸುತ್ತಿಲ್ಲ. ಅಂತರ್ಜಲವನ್ನು ನಾವು ವಿಪರೀತ ದುರ್ಬಳಕೆ  ಮಾಡಿಕೊಂಡಿದ್ದು ಅದನ್ನು ನಿಲ್ಲಿಸಬೇಕು ಎಂಬ ನಮ್ಮ ಪ್ರಯತ್ನ ಮುಂದುವರಿದಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com