ಸಹಕಾರ ತಿದ್ದುಪಡಿಗೇ ತಿದ್ದುಪಡಿ ತರಲು ಸಮ್ಮತಿ

ಬಿಜೆಪಿಯ ಲಕ್ಷ್ಮಣ್ ಸವದಿ, ಸಿ.ಟಿ.ರವಿ ಹಾಗೂ ಕಾಂಗ್ರೆಸ್ ಸದಸ್ಯರ ಒತ್ತಡಕ್ಕೆ ಮಣಿದ ಸಹಕಾರ ಸಚಿವ ಮಹದೇವಪ್ರಸಾದ್, ಸಂವಿಧಾನದ ಆಶಯಕ್ಕೆ...
ವಿಧಾನಸಭೆ
ವಿಧಾನಸಭೆ
Updated on

ವಿಧಾನಸಭೆ: ಬಿಜೆಪಿಯ ಲಕ್ಷ್ಮಣ್  ಸವದಿ, ಸಿ.ಟಿ.ರವಿ ಹಾಗೂ ಕಾಂಗ್ರೆಸ್ ಸದಸ್ಯರ ಒತ್ತಡಕ್ಕೆ ಮಣಿದ ಸಹಕಾರ ಸಚಿವ ಮಹದೇವಪ್ರಸಾದ್, ಸಂವಿಧಾನದ ಆಶಯಕ್ಕೆ
ವಿರುದಟಛಿವಾಗಿ ಸಹಕಾರ ಸಂಘಗಳ ಕಾಯ್ದೆ ಗೆ 2014ರಲ್ಲಿ ತಂದಿರುವ ತಿದ್ದುಪಡಿಗಳಿಗೇ ತಿದ್ದುಪಡಿ ತರಲು ಸಮ್ಮತಿಸಿದ್ದಾರೆ. ಸಹಕಾರ ಸಂಘಗಳ ಕಾಯಿದೆ 1959-1960ಕ್ಕೆ2014ರಲ್ಲಿ ತಿದ್ದುಪಡಿ ತರಲಾಗಿದೆ. ವೈದ್ಯನಾಥನ್ ವರದಿಯನ್ನು ಒಪ್ಪಿಕೊಂಡ ಮೇಲೂ ಅದನ್ನು ಉಲ್ಲಂಘಿಸುವ ತಿದ್ದುಪಡಿ ತರಲಾಗಿದೆ ಎಂದು
ನಿಯಮ 69ರಲ್ಲಿ ಸಾರ್ವಜನಿಕ ಮಹತ್ವದ ಜರೂರು ವಿಷಯ ಮೇಲಿನ ಚರ್ಚೆಯಲ್ಲಿ ತಿದ್ದುಪಡಿಯ ನ್ಯೂನತೆಗಳನ್ನು ಸವಿವರವಾಗಿ ಮಾಜಿ ಸಹಕಾರ ಸಚಿವ
ಲಕ್ಷ್ಮಣ್  ಸವದಿ ಉದಾಹರಣೆಯೊಂದಿಗೆ ಪ್ರಸ್ತಾಪಿಸಿದರು. ಸಚಿವರು ಉತ್ತರ ನೀಡುವಾಗ ಕೆಲವು ನ್ಯೂನತೆಗಳಾಗಿರುವುದನ್ನು ಒಪ್ಪಿಕೊಂಡು ಸರಿಪಡಿಸುವ
ಭರವಸೆ ನೀಡಿದರು. ಆಗ ಮಧ್ಯಪ್ರವೇಶಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ, `ಈ ಬಗ್ಗೆ ಸಹಕಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಸಕರ ಸಭೆ ಕರೆದು
ನ್ಯೂನತೆ ಸರಿಪಡಿಸಿ, ತಿದ್ದುಪಡಿ ಮಾಡಿ' ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಹದೇವಪ್ರಸಾದ್, `ಶಾಸಕರ ಸಭೆ ನಡೆಸಿ ಅವರು ನೀಡುವ ಸಲಹೆಗಳನ್ನು
ಪರಿಗಣಿಸಿ ಸಹಕಾರ ಸಂಘಗಳ ಕಾಯ್ದಿಯ ತಿದ್ದುಪಡಿಯನ್ನು ಮಾರ್ಪಾಡು ಮಾಡಿ ಮುಂದಿನ ಸದನದಲ್ಲೇ ಮಂಡಿಸಲಾಗುತ್ತದೆ' ಎಂದರು. ಸಹಕಾರ ಕಾಯ್ದೆಗೆ ತಂದ ತಿದ್ದುಪಡಿಯ ನ್ಯೂನತೆಗಳ ಬಗ್ಗೆ ದೀರ್ಘವಾಗಿ ಮಾತನಾಡಿದ ಸವದಿ, `ಅಂದು ನಾವೆಲ್ಲ ಧರಣಿ ನಡೆಸುತ್ತಿದ್ದಾಗ ಈ ವಿಧೇಯಕಕ್ಕೆ ತರಾತುರಿಯಲ್ಲಿ ಸಮ್ಮತಿ
ಪಡೆದುಕೊಂಡರು. ಅದಕ್ಕೆ ಅನೇಕ ನ್ಯೂನತೆಗಳಾಗಿವೆ. ಹೀಗಾಗಿ ಇದೆಲ್ಲ ಸರಿಪಡಿಸಬೇಕು' ಎಂದು ಲಕ್ಷ್ಮಣ್  ಸವದಿ ಆಗ್ರಹಿಸಿದರು. ಶೇ.15ರಷ್ಟಿರುವ ಸಹ ಸದಸ್ಯರ ಸಂಖ್ಯೆ ಹೆಚ್ಚಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ. ಎಸ್‍ಸಿ ಹಾಗೂ ಎಸ್‍ಟಿಗೂ ಪ್ರತ್ಯೇಕ ಸ್ಥಾನ ನೀಡುವ ಬಗ್ಗೆ ತೀರ್ಮಾನಿಸಿ, ಆಡಳಿತ ಮಂಡಳಿ ಸದಸ್ಯರ ಸಂಖ್ಯೆ
ಹೆಚ್ಚಿಸುತ್ತೇವೆ. ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧ ವಾಗಿರುವ ಎಲ್ಲವನ್ನು ಮತ್ತೆ ತಿದ್ದುಪಡಿ ಮಾಡಲು ಸಿದ್ಧರಿದ್ದೇವೆ. ಈ ಬಗ್ಗೆ ಶಾಸಕರೊಂದಿಗೆ ಸಭೆ ನಡೆಸಲಾಗುತ್ತದೆ ಎಂದು ಸಚಿವ ಮಹದೇವಪ್ಪ ಉತ್ತರಿಸಿದಾಗ ಚರ್ಚೆಗೆ ತೆರೆ ಬಿತ್ತು.ಚುನಾವಣೆ ಗೊಂದಲ
ಸಹಕಾರ ಸಂಘಗಳ ಚುನಾವಣೆಗೆ ಚುನಾವಣೆ ಆಯೋಗ ಘೋಷಿಸಿರುವ ವೇಳಾಪಟ್ಟಯಲ್ಲಿ ಗೊಂದಲಗಳಿವೆ. ಈಗ ನಿಗದಿಪಡಿಸಿದಂತೆ ಸೆಕೆಂಡರಿ ಹಾಗೂ ಡಿಸಿಸಿ ಚುನಾವಣೆ ನಡೆದರೆ `ಡೆಲಿಗೇಟ್' ಸದಸ್ಯನ ಆಯ್ಕೆ  ಸಾಧ್ಯವಾಗುವುದಿಲ್ಲ. ಹೀಗಾಗಿ ಚುನಾವಣೆ ಆಯೋಗಕ್ಕೆ ಪತ್ರ ಬರೆದು ಕೂಡಲೇ ಅದನ್ನು ಸರಿಪಡಿಸುವಂತೆ ಕೋರಲಾಗುವುದು ಎಂದುಸಹಕಾರ ಸಚಿವ ಮಹದೇವಪ್ರಸಾದ್ ತಿಳಿಸಿದರು. ಸೆಕೆಂಡರಿ ಚುನಾವಣೆ ಮೇ 9-10ಕ್ಕೆನಿಗದಿಪಡಿಸಲಾಗಿದೆ. ನಂತರದ ಚುನಾವಣೆ ಮೇ 30-31ಕ್ಕೆ ನಿಗದಿಯಾಗಿದೆ. ಸೆಕೆಂಡರಿ ಚುನಾವಣೆಯಾಗಿ ಆಡಳಿತ ಮಂಡಳಿ ಸದಸ್ಯರ ಆಯ್ಕೆಯಾಗಲು ಏಳು ದಿನದ ಅವಕಾಶ ಬೇಕು. ನಂತರ ಆಡಳಿತ ಮಂಡಳಿ ಸಭೆ ನಡೆದು ಡೆಲಿಗೇಟ್ ಸದಸ್ಯನ ಆಯ್ಕೆ ಮಾಡಬೇಕು.ನಂತರ 15 ದಿನದ ಮುಂದೆ ಆತನ ಹೆಸರು ಮತದಾರರ ಪಟ್ಟಿಗೆ ಸೇರಿಕೊಳ್ಳಬೇಕು. ಅದಾಗದಿದ್ದರೆ ಆತನ ಸ್ಪರ್ಧೆ ಅಸಿಂಧುವಾಗುತ್ತದೆ. ಇಂತಹ ಸಾಮಾನ್ಯಜ್ಞಾನವೂ ಅದಿಕಾರಿಗಳಿಗೆ ಇಲ್ಲವೇ ಎಂದು ಲಕ್ಷ್ಮಣ್  ಸವದಿ ಪ್ರಶ್ನಿಸಿದರು. ಇದನ್ನು ಸರಿಪಡಿಸುವ ಭರವಸೆಯನ್ನುಸಚಿವರು ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com