ಸಿದ್ದು-ಗಡ್ಕರಿ ಭೇಟಿ, ಯೋಜನೆ ಜಾರಿಗೆ ಹೆದ್ದಾರಿ

ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಹೆಚ್ಚಿನ ಅನುದಾನಹಾಗೂ ಅವುಗಳನ್ನು ನಿರ್ವಿಘ್ನವಾಗಿ ಮುಗಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ...
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ

ಬೆಂಗಳೂರು: ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ  ಯೋಜನೆಗಳಿಗೆ ಹೆಚ್ಚಿನ ಅನುದಾನಹಾಗೂ ಅವುಗಳನ್ನು ನಿರ್ವಿಘ್ನವಾಗಿ ಮುಗಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾ
ಮಯ್ಯ ಹಾಗೂ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ನಡುವೆ ಮಂಗಳವಾರ ನಡೆದ ಮಾತುಕತೆ  ಫಲಪ್ರದವಾಗಿದೆ.
ರಾಜ್ಯದಲ್ಲಿ ಬಾಕಿ ಉಳಿದ ಮತ್ತು ಹೊಸದಾಗಿ ರೂಪಿಸಿದ ಎಲ್ಲ ಹೆದ್ದಾರಿ ಯೋಜನೆಗಳಿಗೆ ಅನುಮತಿ ನೀಡುವುದರ ಜತೆಗೆ, ಅವುಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿ ಮಾಡಿದ ಮನವಿಗೆ, ಗಡ್ಕರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇಬ್ಬರೂ ಗೃಹ ಕಚೇರಿ ಕೃಷ್ಣಾದಲ್ಲಿ ಮಾತುಕತೆ ನಡೆಸಿದರು. ಬೆಂಗಳೂರು- ಮೈಸೂರು ನಡುವಣ ಮಹತ್ವಕಾಂಕ್ಷಿ 6 ಪಥದ ರಸ್ತೆ, ಬೆಳಗಾವಿ- ಗೋವಾ ಗಡಿ ಭಾಗದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಹಾಗೂ ತುಮಕೂರು- ಶಿವಮೊಗ್ಗ ಮತ್ತು ಶಿರಾಡಿ ಘಾಟ್ ಹಸಿರು ಬೈಪಾಸ್ ರಸ್ತೆ ನಿರ್ಮಾಣ ಸೇರಿ ರಾಜ್ಯದ ಪ್ರಮುಖ ಹೆದ್ದಾರಿಗಳಿಗೆ ಅನುದಾನ ಮತ್ತು ಪರಿಸರ ಇಲಾಖೆ ಅನುಮತಿ ಪಡೆಯುವ
ಸಂಬಂಧ ಮಾತುಕತೆ ನಡೆಸಿದರು.

 ಸಂಪೂರ್ಣ ಸಹಕಾರ

ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ಮಾತುಕತೆ ನಂತರ, ಸಚಿವ ನಿತಿನ್ ಗಡ್ಕರಿ ಸುದ್ದಿಗಾರರಿಗೆ ವಿವರ ನೀಡಿದರು. ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳ
ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ತೊಂದರೆಗಳಿವೆ. ಕೆಲವು ಕಡೆಗಳಲ್ಲಿನ ಹೆದ್ದಾರಿ ನಿರ್ಮಾಣಕ್ಕೆ ಪರಿಸರ ಇಲಾಖೆ ಅನುಮತಿ ಬೇಕಿದೆ. ಮತ್ತೆ ಕೆಲವು ಕಡೆ ಭೂಸ್ವಾಧೀನ
ದಂಥ ಸಮಸ್ಯೆಗಳು ಎದುರಾಗಿವೆ. ಈ ಕುರಿತು ಸಿದ್ದರಾಮಯ್ಯ ಜತೆ ಮಾತುಕತೆ ನಡೆಸಿದ್ದು, ಕೇಂದ್ರ ತನ್ನ ಸಂಪೂರ್ಣ ಸಹ ಕಾರ ನೀಡಲಿದೆ ಎಂದು ಸ್ಪಷ್ಟಪಡಿಸಿದರು. ಕೇಂದ್ರದ  ಯೋ ಜನೆಗಳಿಗೆ ಎಲ್ಲ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು. ಇದೇ ವೇಳೆ, ಭೂ ಸ್ವಾಧೀನ ಕುರಿತ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು.

ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ  ಯೋಜನೆಗಳಿಗೆ ಕೇಂದ್ರ ಭೂ ಸಾರಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡುವ ನಿರೀಕ್ಷೆ ಇದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

ರಾಜ್ಯ ಸರ್ಕಾರ ಹೊಸದಾಗಿ ಹಲವು ಯೋ ಜನೆಗಳಿಗೆ ಅನುಮತಿ ಕೋರಿದೆ. ಬೆಂಗಳೂರು- ಮೈಸೂರು 6 ಪಥದ ರಸ್ತೆಯೂ ಇದರಲ್ಲಿ ಸೇರಿದೆ. ಈ  ಯೋಜನೆ ಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ.
- ನಿತಿನ್ ಗಡ್ಕರಿ, ಕೇಂದ್ರ ಭೂಸಾರಿಗೆ ಸಚಿವ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com