ಬಿಡಿಎ ಬಡಾವಣೆ ತೆರೆವು ಮಾಡುವುದು ಸರಿಯಲ್ಲ: ಸ್ಪೀಕರ್‌ ಕಾಗೋಡು ತಿಮ್ಮಪ್ಪ

ಕೆರೆ ಒತ್ತುವರಿ ತೆರವು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಸ್ಪೀಕರ್ ಕಾಗೋಡು ತಿಮ್ಮಪ್ಪ ವಾಗ್ಧಾಳಿ....
ಸ್ಪೀಕರ್ ಕಾಗೋಡು ತಿಮ್ಮಪ್ಪ
ಸ್ಪೀಕರ್ ಕಾಗೋಡು ತಿಮ್ಮಪ್ಪ

ಬೆಂಗಳೂರು : ಕೆರೆ ಒತ್ತುವರಿ ತೆರವು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಸ್ಪೀಕರ್ ಕಾಗೋಡು ತಿಮ್ಮಪ್ಪ ವಾಗ್ಧಾಳಿ ನಡೆಸಿದ್ದಾರೆ.

ಬಿಡಿಎ ಬಡಾವಣೆ ತೆರೆವು ಮಾಡುವುದು ಸರಿಯಲ್ಲ. ದಾಖಲೆ ಪರಿಶೀಲಿಸದೇ ಇರುವುದು ಅಧಿಕಾರಿಗಳ ತಪ್ಪು ಎಂದು ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

ರಾಜ್ಯ ಸರ್ಕಾರ ತಪ್ಪು ಮಾಡಿ ಜನರನ್ನು ನೇಣಿಗೆ ಸಿಲುಕಿಸುವುದು ತಪ್ಪು. ಆಡಳಿತದಲ್ಲಿ ಇದೊಂದು ಕೆಟ್ಟ ನಡೆಯಾಗಿದೆ ಎಂದು ಅವರು ಕಿಡಿ ಕಾರಿದರು.

ಬಡವರಿಗೆ ಒಂದು ನ್ಯಾಯಾ ಶ್ರೀಮಂತರಿಗೆ ಒಂದು ನ್ಯಾಯಾ ಎನ್ನುವುದು ಸರಿಯಲ್ಲ. ಈ ಈ ಸಂಬಂಧ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುತ್ತೇನೆ' ಎಂದು  ಅವರು ತಿಳಿಸಿದ್ದಾರೆ.

ನಿನ್ನೆಯಷ್ಟೆ ಬೊಮ್ಮನಹಳ್ಳಿ ನಗರಸಭೆ ಮಾಜಿ ಸದಸ್ಯ ಲಕ್ಷ್ಮೀ ನಾರಾಯಣ್ ಅವರು, ಕೆರೆ ಒತ್ತುವರಿ ಮಾಡಿ ಡಾಲರ್ಸ್ ಕಾಲೋನಿ ನಿರ್ಮಾಣ ಮಾಡಲಾಗಿದ್ದು, ಇಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ಸಿದ್ದರಾಮಯ್ಯ, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಅನೇಕ ಅಧಿಕಾರಿಗಳು, ರಾಜಕಾರಣಿಗಳು, ನಟ ನಟಿಯರ ಮನೆಯಿದೆ. ಹಾಗಾಗಿ, ಇದನ್ನು ಕೂಡ ತೆರವುಗೊಳಿಸಬೇಕು ಎಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com