ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ?

ದಾವಣಗೆರೆಯಲ್ಲಿ ಹಮ್ಮಿಕೊಂಡಿರುವ ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ? ಎರಡು ವರ್ಷ ಆಡಳಿತದ ನಿಮ್ಮ ಸಾಧನೆಯೇನು? ಎಂದು ಪ್ರತಿಪಕ್ಷ...
ಜಗದೀಶ ಶೆಟ್ಟರ್
ಜಗದೀಶ ಶೆಟ್ಟರ್

ಬೆಂಗಳೂರು: ದಾವಣಗೆರೆಯಲ್ಲಿ ಹಮ್ಮಿಕೊಂಡಿರುವ ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ? ಎರಡು ವರ್ಷ ಆಡಳಿತದ ನಿಮ್ಮ ಸಾಧನೆಯೇನು? ಎಂದು ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪ್ರಶ್ನಿಸಿದ್ದಾರೆ. ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿ ಪ್ರಕಟಿಸಿರುವ `ಸರ್ಕಾರದ ವೈಫಲ್ಯ-ಪ್ರತಿಪಕ್ಷದ ಸಾಫಲ್ಯ' ಕಿರುಹೊತ್ತಿಗೆಯನ್ನು ಮಂಗಳವಾರಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಮೇ 16ರಂದು ಕಾಂಗ್ರೆಸ್ ದಾವಣಗೆರೆಯಲ್ಲಿ ಆಯೋಜಿಸಿರುವ ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸುವ ಮೂಲಕ ತಮ್ಮ ಪಕ್ಷ ಹೊರತಂದ ಕಿರುಹೊತ್ತಿಗೆಯಲ್ಲಿ ಪಟ್ಟಿ ಮಾಡಿರುವ ವೈಫಲ್ಯಗಳನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಎರಡು ವರ್ಷಗಳ ಅವಧಿಯ ವೈಫಲ್ಯಗಳನ್ನು ಮುಚ್ಚಿ ಹಾಕಿಕೊಳ್ಳುವುದಕ್ಕಾಗಿಯೇ ಕಾಂಗ್ರೆಸ್ ದಾವಣಗೆರೆಯಲ್ಲಿ ಸಮಾವೇಶ ನಡೆಸುತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಎರಡು ವರ್ಷ ಉಳಿದುಕೊಂಡಿದ್ದೇ ಸರ್ಕಾರದ ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದರು.

 ಅತ್ಯಂತ ಕೆಟ್ಟ ಸರ್ಕಾರ
ಶಾಸನ ಸಭೆಗೆ ತಾವು ಪ್ರವೇಶ ಪಡೆದ ಇಷ್ಟು ವರ್ಷಗಳ ಅವಧಿಯಲ್ಲಿ ಇಂಥ ಕೆಟ್ಟ ಸರ್ಕಾರವನ್ನು ಎಂದಿಗೂ ಕಂಡಿರಲಿಲ್ಲ. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಅಧಿಕಾರಿಶಾಹಿ ಮಂತ್ರಿಗಳ  ಮಾತುಗಳನ್ನೆ ಕೇಳುತ್ತಿಲ್ಲ. ಸಾರ್ವಜನಿಕರು, ಜನಪ್ರತಿನಿ„ಗಳು ಕಚೇರಿಗಳಿಗೆ ಹೋದರೆ ಗೌರವ ಸಿಗುತ್ತಿಲ್ಲ. ಪ್ರಾಮಾಣಿಕ ಅಧಿ ಕಾರಿಗಳಿಗೆ ಬೆಂಬಲವಿಲ್ಲ. ಮುಖ್ಯಮಂತ್ರಿಯೂ ಸೇರಿದಂತೆ ಯಾವುದೇ
ಮಂತ್ರಿಗೂ ಕೆಲಸ ಮಾಡುವ ಜೀಲು ಕಾಣುತ್ತಿಲ್ಲ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಅವರ ಹಾಗೆ ಇದು ನಿದ್ರಾವಸ್ಥೆಯಲ್ಲಿರುವ ಸರ್ಕಾರ. ಕುಂಭಕರ್ಣನ ನಿದ್ರೆಯಲ್ಲಿದೆ. ಈ ನಿದ್ರೆಯಿಂದ ಸರ್ಕಾರವನ್ನು ಎಚ್ಚರಿಸುವ ಕೆಲಸ ಪ್ರತಿಪಕ್ಷ ಬಿಜೆಪಿಯಿಂದ
ನಿರಂತರವಾಗಿ ನಡೆದಿದೆ. ಆದರೂ ಸರ್ಕಾರ ನಿದ್ರೆಯಿಂದ ಎದ್ದಿಲ್ಲ ಎಂದರು.
ಇದು ಎಡಬಿಡಂಗಿ ಸರ್ಕಾರ ಎಂದು ಬಣ್ಣಿಸಿದ ಅವರು, `ಶಾದಿ ಭಾಗ್ಯ, ಮಠ-ಮಾನ್ಯಗಳ ಮೇಲಿನ ನಿಯಂತ್ರಣ ಪ್ರಸ್ತಾಪ, ದುಬಾರಿ ಮದುವೆಗಳಿಗೆ ಕಡಿವಾಣ ಸೇರಿದಂತೆ ಇತ್ಯಾದಿ ನಿರ್ಣಯಗಳಲ್ಲಿ ನಡೆದುಕೊಂಡ ರೀತಿಗಳನ್ನು ಇದಕ್ಕೆ ಉದಾಹರಿಸಿದರು. ಸರ್ಕಾರ ತೆಗೆದುಕೊಂಡ ನಿರ್ಣಯಕ್ಕೆ ಕಟಿಬದ್ಧವಾಗಿದ್ದು ಕೊಂಡು ಅವುಗಳನ್ನು ಅನುಷ್ಠಾನಕ್ಕೆ ತರುವ ಇಚ್ಛಾಶಕ್ತಿ ತೋರಿಲ್ಲ ಎಂದರು.


ಜನತಾ ನ್ಯಾಯಾಲಯಕ್ಕೆ ಹೋಗುತ್ತೇವೆ
ಎರಡು ವರ್ಷದ ರಾಜ್ಯ ಸರ್ಕಾರದ ವೈಫಲ್ಯಗಳನ್ನು ರಾಜ್ಯದ ಜತನೆಯ ಮುಂದಿಡಲುಜನತಾ ನ್ಯಾಯಾಲಯಕ್ಕೆ ಹೋಗುತ್ತೇವೆ ಎರಡು ವರ್ಷದ ರಾಜ್ಯ ಸರ್ಕಾರದ ವೈಫಲ್ಯಗಳನ್ನು ರಾಜ್ಯದ ಜತನೆಯ ಮುಂದಿಡಲು ಬಿಜೆಪಿ ನಿರ್ಧರಿಸಿದೆ. ಗ್ರಾಮ ಪಂಚಾಯ್ತಿ ಚುನಾವಣೆಯ ಪ್ರಚಾರ ಕಾರ್ಯ ಶುರುವಾಗಿದೆ. ಈಗಾಗಲೇ ತಾವು ಬೆಳಗಾವಿ, ಗದಗ, ಚಿತ್ರದುರ್ಗ ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಇತರೆ ನಾಯಕರು ಕೂಡ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾದ ಎಲ್ಲ ವೈಫಲ್ಯಗಳನ್ನು ಜನತೆಯ ಮುಂದಿಡಲಾಗುವುದು. ಈ ಮೂಲಕ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಳ್ಳಲಾಗುವುದು ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com