ಸೋನಿಯಾ ಗಾಂಧಿಗೆ ಪೂಜಾರಿ ದೂರು

ಎತ್ತಿನಹೊಳೆ ಯೋಜನೆ ವಿರುದ್ಧ ಕಾಂಗ್ರೆಸ್ ಮತ್ತು ಬಿಜೆಪಿ ಪ್ರಮುಖರೇ ಧ್ವನಿ ಎತ್ತಿರುವುದರಿಂದ ಉಭಯ ಪಕ್ಷಗಳೂ...
ಜನಾರ್ಧನ ಪೂಜಾರಿ
ಜನಾರ್ಧನ ಪೂಜಾರಿ

ಮಂಗಳೂರು: ಎತ್ತಿನಹೊಳೆ ಯೋಜನೆ ವಿರುದ್ಧ ಕಾಂಗ್ರೆಸ್ ಮತ್ತು ಬಿಜೆಪಿ ಪ್ರಮುಖರೇ ಧ್ವನಿ ಎತ್ತಿರುವುದರಿಂದ ಉಭಯ ಪಕ್ಷಗಳೂ ಇಕ್ಕಟ್ಟಿಗೆ ಸಿಲುಕಿವೆ. ಯೋಜನೆ ಏಕೆ ಬೇಡ ಎನ್ನುವುದನ್ನು ತಾವು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮನವರಿಕೆ  ಮಾಡಿಕೊಟ್ಟಿರುವುದಾಗಿ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಹೇಳಿದ್ದಾರೆ. ಬೆನ್ನಲ್ಲಿಯೇ, ದಕ್ಷಿಣ ಕನ್ನಡದ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಪಾದಯಾತ್ರೆ ನಡೆಸುವುದಾಗಿ ಘೋಷಿಸಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೂಜಾರಿ, ``ಸೋನಿಯಾಗಾಂಧಿ ಭೇಟಿ ಮಾಡಿದ ಸಂದರ್ಭ ಅವರಿಗೆ ಎತ್ತಿನಹೊಳೆ ಯೋಜನೆಗೆ ಕೋಟಿಗಟ್ಟಲೆ ವ್ಯಯಿಸಿ ಕನಿಷ್ಠ 1 ಟಿಎಂಸಿ ನೀರನ್ನೂ ಸರಿಯಾಗಿ ಬಯಲುಸೀಮೆಗೆ ಪೂರೈಸಲು ಸಾಧ್ಯವಾಗುವುದಿಲ್ಲ.

ಇದರಲ್ಲಿ ರಾಜಕೀಯ ಹಿತಾಸಕ್ತಿ ಅಲ್ಲದೆ ಭ್ರಷ್ಟಾಚಾರ ನಡೆದಿದ್ದು ಇದು ಸರ್ಕಾರಕ್ಕೆ ಕಳಂಕವಾಗಲಿದೆ ಎಂದು ವಿವರಿಸಿದ್ದೇನೆ.ಎಲ್ಲವನ್ನೂ ಕೇಳಿಸಿಕೊಂಡ ಸೋನಿಯಾ ಗಾಂಧಿ ಈ ಬಗ್ಗೆ ಕರ್ನಾಟಕ ಸರ್ಕಾರಕ್ಕೆ  ಸೂಚಿಸುವುದಾಗಿ ವಾಗ್ದಾನ ಮಾಡಿದ್ದಾರೆ.ಅದೇ ರೀತಿ 2 ದಿನಗಳ ಹಿಂದೆ ದೆಹಲಿಯಿಂದ ಸೋನಿಯಾ ಗಾಂಧಿ ಈ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ಸೂಚಿಸುವುದಾಗಿ ವಾಗ್ದಾನ ಮಾಡಿದ್ದಾರೆ. ಅದೇ ರೀತಿ 2 ದಿನಗಳ ಹಿಂದೆ ದೆಹಲಿಯಿಂದ ಸೋನಿಯಾರ ಆಪ್ತ ಕಾರ್ಯದರ್ಶಿ ಅಹ್ಮದ್ ಪಟೇಲ್ ಮುಖ್ಯಮಂತ್ರಿ, ನೀರಾವರಿ ಸಚಿವರಿಂದ ದೂರವಾಣಿ ಕರೆ ಬಂದಿದೆಯೇ ಎಂದು ಕೇಳಿದ್ದಾರೆ. ಈವರೆಗೆ ತನಗೆ ಯಾರೂ ಕರೆ ಮಾಡಿಲ್ಲ ಎಂದು ಹೇಳಿದ್ದೆ. ಈ ಅವೈಜ್ಞಾನಿಕ ಯೋಜನೆ ಬಗ್ಗೆ ತಮ್ಮ ಜತೆ ಚರ್ಚಿಸುವಂತೆ ಹೈಕಮಾಂಡ್ ಸಿಎಂಗೆ ಸೂಚಿಸಿದೆ ಎಂದರು.

ಪಾದಯಾತ್ರೆ
ಜನ ಜಾಗೃತಿ ಮೂಡಿಸಲು ಅಕ್ಟೋಬರ್ 10 ರಿಂದ 13ರವರೆಗೆ ಮಂಗಳೂರಿನಿಂದ ಎತ್ತಿನಹೊಳೆವರೆಗೆ ಪಾದಯಾತ್ರೆ ನಡೆಸುತ್ತೇನೆ. ಲೋಕಸಭೆಯಲ್ಲೂ ಧ್ವನಿ ಎತ್ತುತ್ತೇನೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ನಾನು ಸಂಘಟಿಸಿದ ಸಾಮಾಜಿಕ ಕಳಕಳಿಯ ನಾಲ್ಕು ಬೃಹತ್ ಹೋರಾಟಗಳು ಯಶಸ್ಸು ಕಂಡಿವೆ. ವಿಶೇಷ ವಿತ್ತ ವಲಯ ವಿರುದಟಛಿ ನಾವು ಹೋರಾಟ ನಡೆಸಿ  ದಾಗ ನಮ್ಮದೇ ಬಿಜೆಪಿ ಸರ್ಕಾರ ರಾಜ್ಯದಲ್ಲಿತ್ತು. ಆದ್ದರಿಂದ ಯಾರದೇ ವಿರೋಧ ಇದ್ದರೂ ಯೋಜನೆ ವಿರುದ್ಧ ಹೋರಾಡುವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com