ಉದ್ಯೋಗ ಕೊಡುವ ಶಿಕ್ಷಣ ಇಂದಿನ ಅಗತ್ಯ

`ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಬದಲಾವಣೆಗಳಾಬೇಕು. ಯುವ ಜನತೆಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆ ಮಾರ್ಪಾಡಾಗದಿದ್ದರೆ ಭವಿಷ್ಯದಲ್ಲಿ...
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್
Updated on: 
ಬೆಂಗಳೂರು: ``ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಬದಲಾವಣೆಗಳಾಬೇಕು. ಯುವ ಜನತೆಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆ ಮಾರ್ಪಾಡಾಗದಿದ್ದರೆ ಭವಿಷ್ಯದಲ್ಲಿ ಸಮಸ್ಯೆ ಎದುರಾಗಲಿದೆ,'' ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು. ವಿ.ಎಚ್.ಡಿ. ಕೇಂದ್ರೀಯ ಗೃಹ ವಿಜ್ಞಾನ ಸಂಸ್ಥೆಯಲ್ಲಿ
ಶುಕ್ರವಾರ ಆಯೋಜಿಸಿದ್ದ ಮಾ್ನವ ವಿಕಾಸ ವಿಭಾಗದ `ಬ್ಯಾಚುಲರ್ ಆಫ್  ಕೇರ್ ಅಂಡ್ ವೆಲ್ ಫೇರ್' ಪದವಿ ಕೋರ್ಸ್ ಪ್ರಾರಂಭ ಹಾಗೂ ಸಮುದಾಯ ಕಾಲೇಜಿನ `ಕ್ರಷ್
ಮ್ಯಾನೇಜ್‍ಮೆಂಟ್ ಹಾಗೂ ಇಂಟೀರಿಯರ್ ಡೆಕೋರೇಷನ್ ಅಂಡ್ ಹೌಸ್ ಕೀಪಿಂಗ್' ಡಿಪ್ಲೊಮಾ ಕೋರ್ಸ್‍ಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ``ರಾಜ್ಯದಲ್ಲೇ `ಬ್ಯಾಚುಲರ್ ಆಫ್  ಕೇರ್ ಅಂಡ್ ವೆಲ್ ಫೋರ್' ಕೋರ್ಸ್ ಆರಂಭಿಸಿದ ಹೆಗ್ಗಳಿಕೆಗೆ ವಿ.ಎಚ್.ಡಿ. ಗೃಹ ವಿಜ್ಞಾನ ಸಂಸ್ಥೆಯದ್ದು. ಇದೇ ರೀತಿ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಬದಲಾವಣೆಗಳು ಆಗಬೇಕಿದೆ ಎಂದು ತಿಳಿಸಿದರು. ಮಾನವ ವಿಕಾಸ ವಿಭಾಗದ ಮಕ್ಕಳ ಮಂದಿರಲ್ಲಿ ಏರ್ಪಡಿಸಿದ್ದ ಶಾಲಾ ಪೂರ್ವ ಮಕ್ಕಳ ಸಮಗ್ರ ಬೆಳವಣಿಗೆ ಕುರಿತು ಪೋಷಕರಿಗೆ ಮಾಹಿತಿ ನೀಡುವ ವಸ್ತು ಪ್ರದರ್ಶನವನ್ನು ಕನ್ನಡ ಮತ್ತು
ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಉದ್ಘಾಟಿಸಿದರು. ಬೆಂ. ವಿವಿ ಫ್ಯಾಕಲ್ಟಿ ಆಫ್  ಸೈನ್ಸ್ ಡೀನ್ ಪ್ರೊ.ಎನ್. ರಾಮಚಂದ್ರಸ್ವಾಮಿ,ಸ್ವಸ್ತಿಕ್ ಆರ್ಟ್ ಗ್ಯಾಲರಿ ನಿರ್ದೇಶಕಿ ಭಾಗ್ಯ
ಮತ್ತಿತರರು ಹಾಜರಿದ್ದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com