ಸಾರ್ಥಕ ಸಮಾವೇಶದಲ್ಲಿ ಪರಮೇಶ್ವರ ಕಣ್ಣೀರಿಟ್ಟಿದ್ದೇಕೆ?

ಕೆಪಿಸಿಸಿ ಅಧ್ಯಕ್ಷ ಹಾಗೂ ನಿನ್ನೆಯಷ್ಟೇ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಡಾ.ಜಿ.ಪರಮೇಶ್ವರ ಅವರು ಶುಕ್ರವಾರ ದಲಿತರ ಮೇಲಿನ...
ಜಿ. ಪರಮೇಶ್ವರ (ಸಂಗ್ರಹ ಚಿತ್ರ)
ಜಿ. ಪರಮೇಶ್ವರ (ಸಂಗ್ರಹ ಚಿತ್ರ)

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಹಾಗೂ ನಿನ್ನೆಯಷ್ಟೇ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಡಾ.ಜಿ.ಪರಮೇಶ್ವರ ಅವರು ಶುಕ್ರವಾರ ದಲಿತರ ಮೇಲಿನ ದೌರ್ಜನ ನೆನೆದು ಕಣ್ಣೀರಿಟ್ಟರು.

ಇಂದು ಅರಮನೆ ಮೈದಾನದಲ್ಲಿ ನಡೆದ ಸಾರ್ಥಕ ಸಮಾವೇಶದಲ್ಲಿ ಮಾತನಾಡಿದ ಸಚಿವ ಪರಮೇಶ್ವರ, ನಾನು ದಲಿತ ಕುಟುಂಬದಿಂದ ಬಂದವನು, ಸಾಮಾಜಿಕ ನ್ಯಾಯ ಪರಿಕಲ್ಪನೆ ನನ್ನ ರಕ್ತದಲ್ಲಿಯೇ ಇದೆ ಎಂದರು.

ದಲಿತರ ಮೇಲಿನ ದೌರ್ಜನ್ಯ ನೆನೆದು ಭಾವುಕರಾದ ಪರಮೇಶ್ವರ ಅವರು, ನಾನು ಚಿಕ್ಕ ವಯಸ್ಸಿನಲ್ಲಿ ಸಾಕಷ್ಟು ನೋವು ಅನುಭವಿಸಿದ್ದೇನೆ. ಕುಡಿಯುವ ನೀರಿನ ವಿಚಾರದಲ್ಲಿ ಅವಮಾನ ಅನುಭವಿಸಿದ್ದೇನೆ. ಶಾಲಾ ದಿನಗಳಲ್ಲಿ ಕುಡಿಯುವ ನೀರು ಕೇಳಿದ್ರೆ ಎತ್ತರದಿಂದ ಹಾಕುತ್ತಿದ್ದರು ಎಂದು ನೋವಿನಿಂದ ಹೇಳಿದರು.

ಈಗಲೂ ಸಹ ಕ್ಷೌರಿಕರ ಅಂಗಡಿಯಲ್ಲಿ ದಲಿತರಿಗೆ ಕ್ಷೌರ ಮಾಡಲ್ಲ. ನನ್ನ ತಂದೆ ಸ್ವತಃ ನನ್ನ ಕ್ಷೌರ ಮಾಡುತ್ತಿದ್ದರು ಎಂದು ಪರಮೇಶ್ವರ ಹೇಳಿದರು.

'ಸಾರ್ಥಕ ಸಮಾವೇಶ'ದ ಮೂಲಕ ಕೆಪಿಸಿಸಿ ಅಧ್ಯಕ್ಷರಾಗಿ ಐದು ವರ್ಷ ಪೂರೈಸಿದ ಪರಮೇಶ್ವರ ಅವರನ್ನು ಅಭಿನಂದಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com