ರಾಘವೇಶ್ವರ ಶ್ರೀ ಆರೋಪ ಪಟ್ಟಿ ಶೀಘ್ರ: ಸಿಎಂ

ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಕಾನೂನು ಪ್ರಕಾರ ಸದ್ಯದಲ್ಲೇ...
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on

ಬೆಂಗಳೂರು: ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ ವಿರುದ್ಧದ  ಅತ್ಯಾಚಾರ ಪ್ರಕರಣದಲ್ಲಿ ಕಾನೂನು ಪ್ರಕಾರ ಸದ್ಯದಲ್ಲೇ ಆರೋಪಪಟ್ಟಿ ಸಲ್ಲಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ನಡೆದ ಜನತಾ ದರ್ಶನ ಕಾರ್ಯ ಕ್ರಮದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಘವೇಶ್ವರ ಶ್ರೀ ಗಳ ವಿರುದ್ಧ ದಾಖಲಾದ ಮೊದಲನೇ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ಈಗಾಗಲೇ ಅವರನ್ನು ಬಂಧಿಸಿದ್ದಾರೆ. ಆದರೆ ನಿರೀಕ್ಷಣಾ ಜಾಮೀನು ಪಡೆದಿ ರುವ ಹಿನ್ನೆಲೆಯಲ್ಲಿ ಅವರನ್ನು ಬಿಡು ಗಡೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಸರ್ಕಾರದ ಮೇಲೆ ಯಾವುದೇ ಒತ್ತಡ ಇಲ್ಲ. ಯಾರ ಒತ್ತಡಕ್ಕೂ ಸರ್ಕಾರ ಮಣಿ ಯುವ ಪ್ರಶ್ನೆ ಇಲ್ಲ. ನೆಲದ ಕಾನೂನಿನ ಪ್ರಕಾರ ರಾಘವೇಶ್ವರ ಶ್ರೀಗಳ ವಿರು ದ್ಧದ ಅತ್ಯಾಚಾರ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಿಯೇ ಸಲ್ಲಿಸುತ್ತೇವೆ ಎಂದು ಹೇಳಿದರು.

ಈ ಮಧ್ಯೆ ರಾಘವೇಶ್ವರ ಶ್ರೀಗಳ ಬಂಧನಕ್ಕೆ ಆಗ್ರಹಿಸಿ ಸಮಾಜದ ನಾನಾ ವರ್ಗಗಳಿಂದ ತೀವ್ರ ಒತ್ತಡ ವ್ಯಕ್ತ ವಾಗುತ್ತಿದ್ದು, ಜ್ಞಾನಪೀಠ ಪುರಸ್ಕೃತ ಸಾಹಿತಿಗಳಾದ ಡಾ.ಗಿರೀಶ್ ಕಾರ್ನಾಡ್, ಚಂದ್ರಶೇಖರ್ ಕಂಬಾರ್ ಅವರಲ್ಲದೆ ಪ್ರೊ..ಚಂದ್ರಶೇಖರ್ ಪಾಟೀಲ್, ಬರಗೂರು  ರಾಮಚಂದ್ರಪ್ಪ, ಕನ್ನಜ  ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಸೇರಿದಂತೆ 36 ಸಾಹಿತಿಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ನೀಡಿದ್ದಾರೆ. ರಾಘವೇಶ್ವರ ಶ್ರೀಗಳ ವಿರುದ್ಧ ಅತ್ಯಾಚಾರ ಪ್ರಕರಣದ ಸುದ್ದಿ ನಾಡಿನಾದ್ಯಂತ ಜುಗುಪ್ಸೆ ಮೂಡಿಸುವ ಹಂತ ತಲುಪಿದೆ. ಸ್ವಾಮೀಜಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಆದರೆ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದರಿಂದ ಇಡೀ ಮಹಿಳಾ ಸಮುದಾಯ ಭಯ ಹಾಗೂ ಆತಂಕದಲ್ಲಿ ಬದುಕುವಂತಾಗಿ ದೆ. ಇದು ಮಹಿಳೆಯರ ಆತ್ಮಗೌರವದ ಪ್ರಶ್ನೆಯಾಗಿದ್ದು, ಸದರಿ ಸ್ವಾಮೀಜಿಯನ್ನು ಬಂಧಿಸಬೇಕು ಎಂದು ಸಾಹಿತಿಗಳು ಆಗ್ರಹಿಸಿದ್ದಾರೆ.

ಸಿಎಂ ಹೇಳಿದ್ದೇನು?: ಸಾಹಿತಿಗಳ ಬೇಟಿ ಬಳಿಕಸುದ್ದಿಗಾರರ ಜತೆ ಮಾತ ನಾಡಿದ ಸಿದ್ದರಾಮಯ್ಯ, ನಾನು ಈ ಪ್ರಕರಣದ ತನಿಖೆಯಲ್ಲಿ ಮಧ್ಯ ಪ್ರವೇಶ ಮಾಡಿಲ್ಲ. ತನಿಖೆ ನಡೆ
ಯುತ್ತಿದೆ. ಸಾಕ್ಷ್ಯಾಧಾರ ಸಂಗ್ರಹಣೆ ಯಾದ ಬಳಿಕ ಕಾನೂನು ಪ್ರಕಾರ ಶ್ರೀಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗುವುದು ಎಂದು ಹೇಳಿ ದರು. ಕಾನೂನು ಪ್ರಕಾರ ರಾಘವೇಶ್ವರ
ಶ್ರೀಗಳನ್ನು ಈಗಾಗಲೇ ಒಂದು ಬಾರಿ ಬಂಧಿಸಿ ಬಿಡುಗಡೆ ಮಾಡಲಾಗಿದೆ. ಅವರು ನಿರೀಕ್ಷಣಾ ಜಾಮೀನು ಪಡೆಯದೇ ಹೋಗಿದ್ದರೆ, ನಾವು ಕಾನೂನು ಪ್ರಕಾರ ಯಾವ ಕ್ರಮ ಮಾಡಬೇಕೋ ಅದನ್ನು ಮಾಡು ತ್ತಿದ್ದೆವು. ನಾವು ಯಾರ ಒತ್ತಡಕ್ಕೂ ಮಣಿದಿಲ್ಲ.   ಪ್ರಭಾವಕ್ಕೆ ಒಳಗಾಗುವ ಪ್ರಶ್ನೆ ಬರುವುದಿಲ್ಲ. ನಮಗೆ ಆ ಅತ್ವ,  ಈ ಅತ್ವ , ಹಿಂದುತ್ವ ಎಂಬ ಅಜೆಂಡಾ  ಇಲ್ಲ. ನೆಲದ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಇದರಲ್ಲಿ  ಅನುಮಾನ ಬೇಡ ಎಂದು ಹೇಳಿದರು.

ಎಷ್ಟು ದಿನ ಈ ನಾಟಕ: ಈ ಪ್ರಕರಣ ಸಂಬಂಧ ಸಾಹಿತಿಗಳ ಪರವಾಗಿ ಮಾತನಾಡಿದ  ಪ್ರೊ.ಚಂದ್ರಶೇಖರ ಪಾಟೀಲ್, ರಾಘವೇಶ್ವರ ಶ್ರೀಗಳ ವಿರುದ್ಧ ಇಷ್ಟೊಂದು ಗಂಭೀರ ಆರೋಪ ವ್ಯಕ್ತವಾದರೂ ಸರ್ಕಾರ ಸರಿಯಾದ ಕ್ರಮ ತೆಗೆದುಕೊಂಡಿಲ್ಲ. ಎಷ್ಟು ದಿನ ಈ ಬಂಧನ ಬಿಡುಗಡೆ ನಾಟಕ ಮಾಡುತ್ತೀರಿ. ಶ್ರೀಗಳ ಬಂಧನವಾಗುವುದನ್ನು ತಡೆಯುವು ದಕ್ಕೆ ಕೆಲವು ಪತ್ರಿಕೆಗಳು ಹಾಗೂ ಟಿವಿ ಚಾನಲ್‍ಗಳು ಅಭೇದ್ಯ ಕೋಟೆ ಕಟ್ಟಿಕೊಂಡಿವೆ. ಅತ್ಯಾಚಾರ ಆರೋಪ ಎದುರಿಸುತ್ತಿರುವ ಸ್ವಾಮೀಜಿಗಳ ಬಾಡಿಗಾರ್ಡ್‍ಗಳಂತೆ ಕೆಲವು ಪತ್ರ ಕರ್ತರು ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com