

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಸಂಬಂಧ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್, ಪತ್ನಿ ರಿಚಿ ಸಕ್ಸೇನಾ ವಿರುದ್ಧ
ಎಫ್ ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಅವರ ನಿವಾಸ, ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ 34.7 ಕ್ಯಾರೆಟ್ ವಜ್ರ, ರು. 2 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಜತೆಗೆ ದಾಖಲೆಗಳನ್ನು ವಶಪಡಿಸಿ-ಕೊಳ್ಳಲಾಗಿದೆ. ಲೋಕಾಯುಕ್ತ ಎಸ್‍ಪಿ ಸೋನಿಯಾ ನಾರಂಗ್ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು 4 ತಂಡಗಳಲ್ಲಿ ದಾಳಿ ನಡೆಸಿದ್ದಾರೆ. ಬುಧವಾರ ಸಂಜೆಯಿಂದ ರಾತ್ರಿವರೆಗೂ 4-5 ಗಂಟೆಗಳ ಕಾಲ ಎಚ್ ಎಸ್‍ಆರ್ ಲೇಔಟ್ ನಿವಾಸ, ಯಶವಂತ- ಪುರದಲ್ಲಿನ ಗೋಲ್ಡನ್ ಗ್ರ್ಯಾಂಡ್ ಅಪಾರ್ಟ್‍ಮೆಂಟ್, ವಿಧಾನ-ಸೌಧ
ಬಳಿಯ ಕಚೇರಿ, ಬಾಡಿಗೆಗೆ ನೀಡಿರುವ ಫ್ಲ್ಯಾಟ್‍ಗಳ ಮೇಲೆ ದಾಳಿ ನಡೆಸಿದ್ದಾರೆ.
ವಾರೆಂಟ್ ಪಡೆದು ಶೋಧ: ಕಪಿಲ್ ದಂಪತಿ ವಿರುದ್ಧ 30(1)ಇ, 30(2)ಇ, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಲಾಗಿದೆ.
ಅವರು ಐಎಎಸ್ ಅಧಿಕಾರಿ ಆಗಿರುವ ಕಾರಣ ಲೋಕಾಯುಕ್ತ ವಿಶೇಷ ನ್ಯಾಯಾಲಯದಿಂದ ಶೋಧ ವಾರೆಂಟ್ ಪಡೆದ ಲೋಕಾಯುಕ್ತ ಅಧಿಕಾರಿಗಳು ಸಂಜೆ ಸುಮಾರು 4.30ರಿಂದ ಕಾರ್ಯಾಚರಣೆ ನಡೆಸಿದರು. ಈ ವೇಳೆ ಕೋಟ್ಯಂತರ ರು.ಮೌಲ್ಯದನಗದು, ಚಿನ್ನಾಭರಣ, ಆಸ್ತಿ ಪತ್ರ ಹಾಗೂ ಇತರ ದಾಖಲೆಗಳು ಲಭ್ಯವಾಗಿವೆ. ಎಚ್‍ಎಸ್‍ಆರ್ ಲೇಔಟ್‍ನ 4ನೇ ಸೆಕ್ಟರ್‍ನಲ್ಲಿರುವ ಕಪಿಲ್ ಮೋಹನ್ ಮನೆ ಸಂಖ್ಯೆ 63ರ ಮೇಲೆ ಲೋಕಾಯುಕ್ತ ಪೋಲೀಸರ 15 ಮಂದಿ ತಂಡ ಶೋಧ ನಡೆಸಿತು. ಅವರ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಲಾಗಿ ದ್ದು, ವಶಪಡಿಸಿಕೊಂಡಿರುವ ದಾಖಲೆಗಳ ಪರಿಶೀಲನೆ ನಡೆಯುತ್ತಿ ದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಐಟಿ ದಾಳಿ: ತಿಂಗಳ ಹಿಂದೆ ಐಟಿ ಅಧಿಕಾರಿಗಳು ಕಪಿಲ್ ಮೋಹನ್ ಗೆ ಸೇರಿದ ಗೋಲ್ಡನ್ ಗ್ರ್ಯಾಂಡ್ ಅಪಾರ್ಟ್‍ಮೆಂಟ್ ಮೇಲೆ ದಾಳಿ ನಡೆಸಿದ್ದರು. ಆ ವೇಳೆ 2.5 ಕೆ.ಜಿ ಚಿನ್ನ, ವಜ್ರದ ಆಭರಣಗಳು ಮತ್ತು ಆಸ್ತಿಗೆಸಂಬಂಧಿಸಿದ ದಾಖಲೆ, ಸುಮಾರು ರು. 4 ಕೋಟಿಗಿಂತ ಅಧಿಕ ನಗದು ವಶಪಡಿಸಿಕೊಂಡಿದ್ದರು. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣದ ತನಿಖೆಯನ್ನು ಲೋಕಾಯುಕ್ತಕ್ಕೆ ವರ್ಗಾಯಿಸಿತ್ತು.
ಸಿಐಡಿ ದಾಳಿ: ಯಶವಂತಪುರದಲ್ಲಿನ ಗೋಲ್ಡಲ್ ಪ್ರಾಪರ್ಟೀಸ್ ಅಪಾರ್ಟ್ ಮೆಂಟ್ ನಲ್ಲಿನ ಫ್ಲ್ಯಾಟ್ ಮೇಲೆ ಆ.5 ರಂದು ಸಿಐಡಿ ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಪಾರ ಮೌಲ್ಯದ ಆಭರಣ, ನಗದು,ಆಸ್ತಿಗೆ ಸಂಬಂಧಿಸಿದ ದಾಖಲೆ ವಶಪಡಿಸಿಕೊಂಡಿದ್ದರು.