ನದಿ ತಿರುಗಿಸಿದರೆ ಕರ್ನಾಟಕ ಹೋಳು

ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟ ಬಿರುಸು ಪಡೆದಿರುವ ಬೆನ್ನಲ್ಲೇ ಇದೇ ವಿಚಾರವಾಗಿ ಕಾಂಗ್ರೆಸ್ ಮುಖಂಡರಾದ ಜನಾರ್ದನ ಪೂಜಾರಿ- ವೀರಪ್ಪ...
ಜನಾರ್ದನ ಪೂಜಾರಿ- ವೀರಪ್ಪ ಮೊಯ್ಲಿ
ಜನಾರ್ದನ ಪೂಜಾರಿ- ವೀರಪ್ಪ ಮೊಯ್ಲಿ

ಮಂಗಳೂರು: ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟ ಬಿರುಸು ಪಡೆದಿರುವ ಬೆನ್ನಲ್ಲೇ ಇದೇ ವಿಚಾರವಾಗಿ ಕಾಂಗ್ರೆಸ್ ಮುಖಂಡರಾದ ಜನಾರ್ದನ ಪೂಜಾರಿ- ವೀರಪ್ಪ ಮೊಯ್ಲಿ
ನಡುವಿನ ವಾಕ್ಸಮರವೂ ತಾರಕಕ್ಕೆ ಏರಿದೆ. `ಪೂಜಾರಿಯವರನ್ನು ರಾಜಕೀಯಕ್ಕೆ ಕರೆ ತಂದಿದ್ದೇ ನಾನು' ಎಂದಿದ್ದ ಮೊಯ್ಲಿ ಅವರನ್ನು ಬುಧವಾರ `ಕಲಿಯುಗದ ಸತ್ಯ ಹರಿಶ್ಚಂದ್ರ' ಎಂದು ಜನಾರ್ದನ ಪೂಜಾರಿ ತಮ್ಮದೇ ಶೈಲಿಯಲ್ಲಿ ಝಾಡಿಸಿದ್ದಾರೆ. ಅಲ್ಲದೆ, ದಕ್ಷಿಣ ಕನ್ನಡದ ಜೀವನದಿ ನೇತ್ರಾವತಿಯನ್ನು ತಿರುಗಿಸಿದರೆ ಪ್ರತ್ಯೇಕ ತುಳು ನಾಡಿನ ಕೂಗು ಎದ್ದೀತು ಎಂದು ಮುಖ್ಯಮಂತ್ರಿಗೆ ಎಚ್ಚರಿಕೆ ನೀಡಿದ್ದಾರೆ. ``ಕಲಿಯುಗದ ಸತ್ಯಹರಿಶ್ಚಂದ್ರ ವೀರಪ್ಪ ಮೊಯ್ಲಿ ಅವರೇ, ನೀವು ರಾಜ್ಯ ಸಂಪುಟ ದಲ್ಲಿ ಅರ್ಥ ಸಚಿವನನ್ನಾಗಿ ಮಾಡಿಸಿ ಎಂದು ನನ್ನ ಬಳಿ ಕೇಳಿಲ್ಲವೇ'' ಎಂದು
ಪೂಜಾರಿ ಪ್ರಶ್ನಿಸಿದರು.

ಪೂಜಾರಿ ನಿನಗೋಸ್ಕರ ವೀರಪ್ಪ ಮೊಯ್ಲಿಯನ್ನು ಪ್ರತಿಕ್ಷ ನಾಯಕ ನಾಗಿ ಮಾಡುತ್ತಿದ್ದೇನೆ  ಎಂದು ಇಂದಿರಾ ಗಾಂಧಿ ಹೇಳಿದ್ದು ಗೊತ್ತಿದೆಯಾ?ನಾನು ಬೆಳೆಸಿದವರೇ ನನಗೆ ತಿರುಗಿ ಬಿದ್ದರೆ, ಕಾಲವೇ ಉತ್ತರ ಕೊಡಲಿದೆ  ಎಂದು ಶಾಪ ಹಾಕಿದ್ದೀರಿ ಅಲ್ವ ಮೊಯ್ಲಿ ಅವರೇ, ವಯಸ್ಸಿನಲ್ಲಿ ನಾನು ನಿಮಗಿಂತ ಹಿರಿಯ, ಕಾನೂನು ವೃತ್ತಿಯಲ್ಲಿ ಯೂ ನಾನು ಹಿರಿಯ. ಎಂಪಿ ಟಿಕೆಟ್ ನೀವು ಕೊಟ್ಟಿದ್ದಲ್ಲ. ಸೆಂಟ್ರಲ್ ಇಲೆಕ್ಷನ್ ಕಮಿಟಿಯ ದೇವರಾಜ ಅರಸು ನನ್ನ ಶಿಫಾರಸು ಮಾಡಿದ್ದು. ನಿಮಿಷಕ್ಕೊಂದು ರೀತಿ ಮಾಡುತ್ತೀರಲ್ಲ ಮೊಯ್ಲಿ, ಅವರೇ ? ನೀವು ಕಲಿಯುಗದ ಸತ್ಯ ಹರಿಶ್ಚಂದ್ರ,  ನಿಮಗೆ ಸುಳ್ಳು ಹೇಳಲು ಗೊತ್ತೇ ಇಲ್ಲ. ನಾನು ಸತ್ಯವನ್ನೇ ಹೇಳಿಕೊಂಡು ಬಂದಿ ದ್ದೇನೆ, ಸತ್ಯ ಹೇಳಿಯೇ ಅರ್ಧ ಸತ್ತಿ ದ್ದೇನೆ'' ಎಂದು ಪೂಜಾರಿ ತಮ್ಮ ಎಂದಿ ನ ಶೈಲಿಯಲ್ಲಿ ತಿರುಗೇಟು ನೀಡಿದರು.  ``ಇಂದಿರಾಗಾಂದಿಯವರಿಗೆ ನಾನು ಆಪ್ತನಾಗಿದ್ದ ಕಾರಣ ನೀವು ಹಣಕಾಸು ಸಚಿವ ಸ್ಥಾನ ಕೊಡಿಸಿ ಎಂದು ನನ್ನ ಹತ್ತಿರ ಕೇಳಲಿಲ್ಲವೇ? ನಾನು ಇಂದಿರಾಗಾಂಧಿ ಬಳಿ ಹೇಳಿದ್ದೆ. ಹಾಗೆಂದು ನಿಮ್ಮನ್ನು ಹಣಕಾಸು ಸಚಿವರನ್ನಾಗಿ ನಾನೇ ಮಾಡಿದ್ದು ಎಂದು ಹೇಳಿದ್ದೇನೆಯೇ ?
ಇಂದಿರಾಗಾಂದಿ ಅವರೇ ಮಾಡಿದ್ದು. ಇಂದಿರಾಗಾಂಧಿಗೆ ಆಪ್ತನಾಗಿದ್ದೆ ಎಂಬ ಕಾರಣಕ್ಕೆ ನೀವು ನನ್ನ ಬಳಿ ಹಿಂದೊಮ್ಮೆ ಪ್ರತಿಪಕ್ಷ ನಾಯಕನಾಗಿ ಮಾಡಿಸಿ ಎಂದು ಕೇಳಿದ್ರಿ. ಈ ಕುರಿತು ಇಂದಿರಾಗಾಂಧಿ ಬಳಿ 45 ನಿಮಿಷ ಮಾತನಾಡಿದರೂ ಒಪ್ಪಿರಲಿಲ್ಲ. ಕೊನೆಗೆ `ಪೂಜಾರಿ ನಿನಗೋಸ್ಕರ ಮೊಯ್ಲಿಯನ್ನು ಪ್ರತಿಪಕ್ಷ ನಾಯಕ-ನನ್ನಾಗಿ ಮಾಡುತ್ತೇನೆ' ಎಂದು ಹೇಳಿದ್ರು ಗೊತ್ತೆ? ನನ್ನ ಬಾಯಿಗೆ ಕೋಲು ಹಾಕಿದ್ರೆ ನೀವು ಬೆಳೆದ ರೀತಿ, ನೀತಿಯನ್ನೂ ಬಹಿರಂಗ ಪಡಿಸಬೇಕಾ ಗುತ್ತದೆ ಎಚ್ಚರ'' ಎಂದರು.

ಪ್ರತ್ಯೇಕ ಕೂಗು: ನೇತ್ರಾವತಿ ನದಿ ವಿಚಾರದಲ್ಲಿ ಜಿಲ್ಲೆಗೆ ಅನ್ಯಾಯ ಮಾಡಬೇಡಿ, ಜನರು ಆತ್ಮಹತ್ಯೆ ಮಾಡಿಕೊಳ್ಳಉವಾಗ ಕ್ಷಮೆ ಕೇಳಿ ಅಂಥ ಅಂತ ಕಿವಿಮಾತು ಹೇಳಿದ್ದು ತಪ್ಪಾ? ಸಣ್ಣ ನದಿಯ ಮೇಲೆ ಈ ರೀತಿ ಆಕ್ರಮಣ ಮಾಡ್ತಾ ಇದ್ದೀರಲ್ಲಾ ಬುದ್ಧಿ ಇಲ್ವಾ? ಅಷ್ಟೂ ಕಾಮನ್ ಸೆನ್ಸ್  ಇಲ್ವಾ? ಬೆಸ್ತರನ್ನು ಕೊಲ್ಲುತ್ತೀರಾ, ಮಂಗಳೂರು ನಗರವನ್ನು ಸಮುದ್ರ ದಲ್ಲಿ ಮುಳುಗಿಸು ತ್ತೀರಾ? ಎಂದು ಪ್ರಶ್ನಿಸಿದ ಪೂಜಾರಿ, ಮಾನವೀಯತೆ ಮಾತನಾಡುತ್ತೀರಿ ಕೋಲಾರದ ಜನರಿಗೆ ನೀರು ನೀಡ ಬೇಕು ಎನ್ನುವುದು ನಮ್ಮ ಆಸೆ. ಮಾನವೀಯತೆ ಕರಾವಳಿಯ ಎಲ್ಲರಿಗೂ ಇಲ್ಲಿನ ಮಕ್ಕಳಿಗೂ ಗೊತ್ತಿದೆ. ``ಯೋಜನೆ ಮಾಡುವಂತೆ ಹೇಳಿದ ಪರಮಶಿವಯ್ಯ ಬ್ರಹ್ಮ ಜ್ಞಾನಿಯೇ? ಮೇಕೆದಾಟು ಯೋಜನೆ ಜಾರಿ ಮಾಡಿ, ಹಾರಂಗಿಯಿಂದ, ಹೇಮಾವತಿಯಿಂದ ನೀರು ಕೊಡಿ. ಸಿದ್ದರಾಮಯ್ಯನವರೇ, ಜಯಲಲಿತಾ ಅವರನ್ನ ಕೇಳದೆ ಮೇಕೆ ದಾಟು ಯೋಜನೆ ಮಾಡಿ. ಸುಪ್ರಿಂ ಕೊರ್ಟ್‍ಗೆ ಹೋದರೆ ನಿಮ್ಮ ಅಧಿಕಾರ ಹೋಗಬಹುದು, ಆದರೆ ಜನ ಮತ್ತೆ ನಿಮ್ಮನ್ನು ಖಂಡಿತಾ ಆಯ್ಕೆ ಮಾಡುತ್ತಾ ರೆ, ನೀವು ಧೈರ್ಯ ತೋರಿಸಿ. ನೀವು ಬಲಾತ್ಕಾರವಾಗಿ ನದಿ ತಿರುವು ಯೋಜನೆ ಜಾರಿಗೊಳಿಸಿದರೆ ಕರ್ನಾಟಕ ಹೋಳಾದೀತು ಎಚ್ಚರ. ಉತ್ತರ ಕರ್ನಾಟಕ, ತುಳುನಾಡು ಪ್ರತ್ಯೇಕತೆ ಕೂಗಿಗೆ ಆಸ್ಪದ ನೀಡಬೇಡಿ'' ಎಂದು ಎಚ್ಚರಿಸಿದರು.

ಮೊಯ್ಲಿ ಅವರೆ, ಚಳವಳಿಗೆ ಎಲ್ಲರಾಜಕೀಯ ಪಕ್ಷದ ನಾಯಕರು, ಕಾರ್ಯಕರ್ತರೂ ಜಿಲ್ಲೆಯ ಹಿತಾಸಕ್ತಿಯ ರಕ್ಷಣೆ ಗಾಗಿ ಪಕ್ಷ ಭೇಧ ಮರೆತು ಒಗ್ಗೂಡಿ ಬಂದಿದ್ದಾರೆ. ತನ್ನನ್ನು ಸೋಲಿಸಿ ದರೆಂಬಕಾರಣಕ್ಕೆ ದ.ಕ. ಜಿಲ್ಲೆಯನ್ನು ಬರಡುಗೊಳಿಸುವ ನಿಮ್ಮ ಯೋಜನೆಯಲ್ಲಿ ರಾಜಕೀಯವಿತ್ತೇ ವಿನಾ ನಮ್ಮ ಪ್ರತಿಭಟನೆಯಲ್ಲಿ ಜಿಲ್ಲೆಯ ಹಿತಾಸಕ್ತಿ ಮಾತ್ರ ಇತ್ತು ಎನ್ನುವುದನ್ನು ಅರಿಯಿರಿ.
- ನಿರಂಜನ್ ರೈ, ಸಂಚಾಲಕ,
ನೇತ್ರಾವತಿ ನದಿ ತಿರುವು ವಿರೋಧಿ
ಹೋರಾಟ ಸಮಿತಿ



ಮೊಯ್ಲಿ , ಸದಾನಂದ ಗೌಡರೇ ನೀವು ನಿಮ್ಮ ಸೀಟಿಗಾಗಿ ಜಿಲ್ಲೆ  ಬಿಟ್ಟು ಹೋಗಿದ್ದೀರಿ. ಇಲ್ಲಿಯ ಜನರಿಗೆ ಅನ್ಯಾಯ ಮಾಡ್ತೀರಾ? ಜನ ಪ್ರತಿನಿಧಿಗಳು ಎಚ್ಚರವಾಗದೆ ಇದ್ರೆ ಜನ ನಿಮಗೆ ಬುದ್ಧಿ ಕಲಿಸ್ತಾರೆ. ಸ್ಥಳೀಯಾಡಳಿತ ಚುನಾವಣೆಯಲ್ಲಿ ಎಲ್ಲರೂ ಕೊಚ್ಚಿ ಕೊಂಡು ಹೋಗುತ್ತೀರಿ.
-ಬಿ.ಜನಾರ್ದನ ಪೂಜಾರಿ ಮಾಜಿ ಸಚಿವ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com