ಬೆಳಗಾವಿ: ಕಳಸಾ ಬಂಡೂರಿ, ಮಹಾದಾಯಿ ಯೋಜನೆ ಕಾಯ್ದೆ, ಕಾನೂನು, ನ್ಯಾಯಾಧಿಕರಣದಿಂದ ಬಗೆಹರಿಯಲ್ಲ. ಇದು ಭಾವ ನಾತ್ಮಕ, ಮಾನವೀಯತೆ ವಿಚಾರ. ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯದ ಹಿರಿಯರು, ರಾಜಕಾರಣಿಗಳು, ಪ್ರಧಾನಿ ಬಳಿ ನಿಯೋಗ ಹೋಗಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ. ಇದು ಗೋವಾದ ಹಿರಿಯ ರಾಜಕಾರಣಿ,
ಕೇಂದ್ರ ಆಯುಷ್ ಇಲಾಖೆ ಸಚಿವ ಶ್ರೀಪಾದ ನಾಯಕ ಅವರ ಸ್ಪಷ್ಟ ನುಡಿ. ಗೋವಾ ಸಿಎಂ ಲಕ್ಷಿ ್ಮೀಕಾಂತ ಪಾರ್ಸೇಕರ್ ಹಾಗೂ ಅದೇ ರಾಜ್ಯದವರಾದ ಕೇಂದ್ರ ರಕ್ಷಣಾ ಸಚಿವ ಮನೋಹರ ಪರ್ರಿಕ್ಕರ್ ಹೇಳಿಕೆಗೆ ವ್ಯತಿರಿಕ್ತವಾಗಿ ಮಾತನಾಡಿದ ಅವರು, ಯಾವುದೇಹಿತಾಸಕ್ತಿಗೆ ಬಲಯಾಗದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು