ಸುಗಮ ಕಲಾಪ: ನಿಯಮಗಳಿಗೆ ತಿದ್ದುಪಡಿ ತರಲು ಜಂಟಿ ಸದನ ಸಮಿತಿ ನಿರ್ಧಾರ

ವಿಧಾನ ಮಂಡಲಗಳ ಅಧಿವೇಶನದಲ್ಲಿ ಸುಗಮ ಕಲಾಪ ನಡೆಸಲು ಅನುವಾಗುವಂತೆ ನಿಯಮಗಳಿಗೆ ತಿದ್ದುಪಡಿ ತರಲು ಜಂಟಿ ಸದನ ಸಮಿತಿ ನಿರ್ಧರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವಿಧಾನ ಮಂಡಲಗಳ ಅಧಿವೇಶನದಲ್ಲಿ ಸುಗಮ ಕಲಾಪ ನಡೆಸಲು ಅನುವಾಗುವಂತೆ ನಿಯಮಗಳಿಗೆ ತಿದ್ದುಪಡಿ ತರಲು ಜಂಟಿ ಸದನ ಸಮಿತಿ ನಿರ್ಧರಿಸಿದೆ.

ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಮತ್ತು ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಅಧ್ಯಕ್ಷರಾಗಿರುವ ಜಂಟಿ ಸದನ ಸಮಿತಿಯ ಮೊದಲ ಸಭೆ ನಂತರ ಮಾತನಾಡಿದ ಕೋಳಿವಾಡ, ಗಮನಸೆಳೆಯುವ ಸೂಚನೆಗಳ ಮೇಲೆ ನಡೆಯುವ ಚರ್ಚೆ ಬಳಿಕವೇ ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡಬೇಕು ಎಂಬ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಕಲಾಪಕ್ಕೆ 1 ಗಂಟೆ ಮೊದಲು ನಿಲುವಳಿ ಸೂಚನೆ ಪ್ರಸ್ತಾಪಿಸಲು ಅನುಮತಿ ಕೋರಬೇಕು ಎಂಬ ನಿಯಮಕ್ಕೆ ಮಧ್ಯಾಹ್ನ 2 ರ ಬಳಿಕ ನಿಲುವಳಿ ಸೂಚನೆ ಪ್ರಸ್ತಾವನೆ ಸಲ್ಲಿಸುವುದು ಎಂಬ ಬದಲಾವಣೆ ತರಲು ನಿರ್ಧರಿಸಲಾಗಿದೆ ಎಂದರು. ನಿಯಮಗಳಿಗೆ ತಿದ್ದುಪಡಿ ಮಾಡಿದ ಬಳಿಕ ಕಲಾಪ ಆರಂಭದಲ್ಲಿ ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ನಡೆಸಿ, ಕಲಾಪಕ್ಕೆ ಅಡ್ಡಿಪಡಿಸಲು ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.

ಬೆಳಗಾವಿಯಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಮೊದಲ ದಿನವೇ ವರದಿ ಮಂಡಿಸಿ ಅನುಮೋದನೆ ಪಡೆಯಲಾಗುವುದು. ಈ ಅಧಿವೇಶನದಲ್ಲಿ ಹೊಸ ನಿಯಮಗಳಂತೆ ಕಲಾಪ ನಡೆಸಲಾಗುವುದು ಎಂದು ಕೋಳಿವಾಡ ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com