
ಬೆಂಗಳೂರು: ಆದಾಯ ತೆರಿಗೆ ದಾಳಿಗೆ ಒಳಗಾದ ಇಬ್ಬರು ಸರ್ಕಾರಿ ಅಧಿಕಾರಿಗಳ ಅಕ್ರಮ ಆಸ್ತಿ ಅಸಹ್ಯಕರ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಅಕ್ರಮ ಸಂಪತ್ತು ಹೊಂದಿದ್ದ ಆ ಇಬ್ಬರನ್ನೂ ಕೇವಲ ಅಮಾನತುಗೊಳಿಸಿರುವುದು ಸರಿಯಾದ ಶಿಕ್ಷೆಯಲ್ಲ. ಅವರಿಗೆ ಗರಿಷ್ಠ ಮಟ್ಟದ ಕಠಿಣ ಶಿಕ್ಷೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ಚಿಕ್ಕರಾಯಪ್ಪ ಹಾಗೂ ಜಯಚಂದ್ರ ಬಳಿ ಕೋಟ್ಯಂತರ ನಗದು, ಚಿನ್ನಾಭರಣ, ಐಷಾರಾಮಿ ಕಾರುಗಳು ಪತ್ತೆಯಾಗಿರುವುದರ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸುತ್ತಾ, ಇದೊಂದು ಅತ್ಯಂತ ನಾಚಿಕೆಗೇಡು ಮತ್ತು ಅಸಹ್ಯಕರ ಬೆಳವಣಿಗೆ ಎಂದು ಹೇಳಿದ್ದಾರೆ.
ದೇಶದ ಆರ್ಥಿಕ ಸುಧಾರಣೆ ದೃಷ್ಟಿಯಿಂದ 500 ಮತ್ತು 1000 ಮುಖಬೆಲೆಯ ಹಳೆಯ ನೋಟುಗಳನ್ನು ರದ್ದು ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರ ಕ್ರಮವನ್ನು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸ್ವಾಗತಿಸಿದ್ದಾರೆ. ಹಳೆಯ ನೋಟುಗಳನ್ನು ನಿಷೇಧ ಮಾಡುವ ಮೊದಲು ಜನಸಾಮಾನ್ಯರಿಗೆ ತೊಂದರೆ ಆಗದ ರೀತಿಯಲ್ಲಿ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
Advertisement