ಸದಾಶಿವ ವರದಿಗೆ ವಿರೋಧ: ಮೂವರು ಶಾಸಕರಿಗೆ ಬೆದರಿಕೆ ಕರೆ

ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ನಮಗೆ ಬೆದರಿಕೆ ಕರೆ ಬರುತ್ತಿವೆ ಹೀಗಾಗಿ ರಕ್ಷಣೆ ನೀಡಬೇಕೆಂದು ಮೂವರು ...
ಶಿವರಾಜ್ ತಂಗಡಗಿ, ಮಾನಪ್ಪ ವಜ್ಜಲ್, ಪಿ, ರಾಜೀವ್
ಶಿವರಾಜ್ ತಂಗಡಗಿ, ಮಾನಪ್ಪ ವಜ್ಜಲ್, ಪಿ, ರಾಜೀವ್

ಬೆಂಗಳೂರು: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ನಮಗೆ ಬೆದರಿಕೆ ಕರೆ ಬರುತ್ತಿವೆ ಹೀಗಾಗಿ ರಕ್ಷಣೆ ನೀಡಬೇಕೆಂದು ಮೂವರು ಶಾಸಕರು ಮನವಿ ಮಾಡಿದ್ದಾರೆ.

ಮಾನಪ್ಪ ವಜ್ಜಲ್, ಪಿ ರಾಜೀವ್, ಹಾಗೂ ಶಿವರಾಜ್ ತಂಗಡಗಿ ಅವರಿಗೆ ಅನಾಮಧೇಯ ವ್ಯಕ್ತಿಗಳಿಂದ ಬೆದರಿಕೆ ಕರೆ ಬರುತ್ತಿವೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಶನಿವಾರದಿಂದ ನನ್ನ ಮೊಬೈಲ್ ಗೆ ಸುಮಾರು ಕರೆಗಳು ಬಂದಿದ್ದು, ರಾಯಚೂರು, ಚಿತ್ರದುರ್ಗದಿಂದ ಕರೆ ಮಾಡುತ್ತಿರುವುದಾಗಿ ಹೇಳುತ್ತಿದ್ದಾರೆ, ಚಿತ್ರದುರ್ಗಕ್ಕೆ ಬಂದರೆ ಮುಗಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಾನಪ್ಪ ವಜ್ಜಲ್ ಹೇಳಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯಲ್ಲಿ ಅನ್ಯಾಯವಾಗಿದೆ ಎಂದು ಬೆಳಗಾವಿ ಅಧಿವೇಶನದಲ್ಲಿ ವಿರೋಧಿಸಿದ್ದೆವು. ಹೀಗಾಗಿ ನಮೆ ವಿವಿಧ ಸಂಖ್ಯೆಗಳಿಂದ ಬೆದರಿಕೆ ಕರೆ ಬಂದಿವೆ ಎಂದು ಶಿವರಾಜ್ ತಂಗಡಗಿ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com