ರಾಯಣ್ಣ ಬ್ರಿಗೇಟ್ ಜಟಾಪಟಿ: ಬರ ಅಧ್ಯಯನ ಪ್ರವಾಸ ತಂಡದಿಂದ ಈಶ್ವರಪ್ಪ ಔಟ್

ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಕುರಿತಂತೆ ಕಳೆದ ಹಲವು ತಿಂಗಳುಗಳಿಂದ ಈಶ್ವರಪ್ಪ ಮತ್ತು ಯಡಿಯೂರಪ್ಪ ನಡುವೆ ಜಟಾಪಟಿ ನಡೆಯುತ್ತಿದೆ. ಸುದೀರ್ಘ‌ ಕಾಲದಿಂದ ...
ಕೆ.ಎಸ್ ಈಶ್ವರಪ್ಪ
ಕೆ.ಎಸ್ ಈಶ್ವರಪ್ಪ

ಬೆಂಗಳೂರು: ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಕುರಿತಂತೆ ಕಳೆದ ಹಲವು ತಿಂಗಳುಗಳಿಂದ ಈಶ್ವರಪ್ಪ ಮತ್ತು ಯಡಿಯೂರಪ್ಪ ನಡುವೆ ಜಟಾಪಟಿ ನಡೆಯುತ್ತಿದೆ. ಸುದೀರ್ಘ‌ ಕಾಲದಿಂದ ಉಭಯ ನಾಯಕರ ನಡುವೆ ಮಾತಿಲ್ಲ. ಇಬ್ಬರ ನಡುವೆ ಉಲ್ಬಣಿಸಿರುವ ಬಿಕ್ಕಟ್ಟು ಮತ್ತೊಂದು ಹಂತ ತಲುಪಿದೆ.

ರಾಜ್ಯದಲ್ಲಿನ ಬರ ಪರಿಸ್ಥಿತಿ ಕುರಿತು ಬುಧವಾರದಿಂದ ಅಧ್ಯಯನ ಪ್ರವಾಸ ಕೈಗೊಳ್ಳಲು ರಚಿಸಲಾಗಿರುವ ಪಕ್ಷದ ಮುಖಂಡರನ್ನು ಒಳಗೊಂಡ ಮೂರು ತಂಡಗಳಲ್ಲೂ ಈಶ್ವರಪ್ಪ ಅವರಿಗೆ ಸ್ಥಾನ ನೀಡದೆ ಹೊರಗಿಡುವ ಮೂಲಕ ತೀಕ್ಷ್ಣವಾದ ಪೆಟ್ಟು ನೀಡಲಾಗಿದೆ.

ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ಮತ್ತು ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಮತ್ತು ಯಡಿಯೂರಪ್ಪ  ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದ್ದು, ಒಟ್ಟು 46 ಮಂದಿ ಮುಖಂಡರಿದ್ದಾರೆ. ಡಿಸೆಂಬರ್ 28 ರಿಂದ ಜನವರಿ 22 ರವರೆಗೆ ಈ ಮೂರು ತಂಡಗಳು ರಾಜ್ಯದ್ಯಂತ ಪ್ರವಾಸ ನಡೆಸಿ ಸಿದ್ದರಾಮಯ್ಯ ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡಲಿವೆ.

ಬರ ಅಧ್ಯಯನ ತಂಡದಿಂದ ತಮ್ಮನ್ನು ಕೈಬಿಟ್ಟಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ನನಗೆ ಈ ನಿರ್ಧಾರದಿಂದ ನೋವಾಗಿಲ್ಲ,  ಈ ಹಿಂದೆ ನಾನು ಹಲವು ಬಾರಿ ಬರ ಅಧ್ಯಯನ ಕೈಗೊಂಡಿದ್ದೇನೆ. ಹಾಗೂ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ಜೊತೆಗೆ ಜನತಯೆ ಜೊತೆಗೂ ಸಮಾಲೋಚಿಸಿದ್ದೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com