ಜನತಾ ಪರಿವಾರದಿಂದ ಹೊರಬಂದ ನಂತರ ನಾನು ಆಡ್ವಾಣಿಯನ್ನು ಭೇಟಿ ಮಾಡಲೇ ಇಲ್ಲ: ಸಿದ್ದರಾಮಯ್ಯ

ಜನತಾ ಪರಿವಾರದಲ್ಲಿದ್ದಾಗ ನಾನು ಬಿಜೆಪಿ ಹಿರಿಯ ಮುಖಂಡ ಆಡ್ವಾಣಿ ಅವರ ಜೊತೆ ಮಾತನಾಡಿದ್ದು, ಜನತಾ ಪರಿವಾರದಿಂದ ಹೊರ ಬಂದ ನಂತರ ನಾನು ...
ಸಿದ್ದರಾಮಯ್ಯ
ಸಿದ್ದರಾಮಯ್ಯ

ಮೈಸೂರು: ಜನತಾ ಪರಿವಾರದಲ್ಲಿದ್ದಾಗ ನಾನು ಬಿಜೆಪಿ ಹಿರಿಯ ಮುಖಂಡ ಆಡ್ವಾಣಿ ಅವರ ಜೊತೆ ಮಾತನಾಡಿದ್ದು, ಜನತಾ ಪರಿವಾರದಿಂದ ಹೊರ ಬಂದ ನಂತರ ನಾನು ಅಡ್ವಾಣಿ ಅವರನ್ನು ಭೇಟಿ ಮಾಡಲೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು ಮಾಜಿ ಶ್ರೀನಿವಾಸ್ ಪ್ರಸಾದ್ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ನಂಜನಗೂಡು ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತದೆ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ನಂಜನಗೂಡಿನ ಬಗ್ಗೆ ಪೂಜಾರಿಗೆ ಏನು ಗೊತ್ತಿಲ್ಲ, ನಾನು ಅವರನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದರು.

ರಾಜ್ಯ ಬಜೆಟ್ ಅಧಿವೇಶನ ಫೆಬ್ರವರಿಯಲ್ಲಿ ಆರಂಭವಾಗಲಿದ್ದು, ಮಾರ್ಚ್ ನಲ್ಲಿ ಬಜೆಟ್ ಮಂಡಿಸಲಾಗುತ್ತದೆ. ಜನವರಿಯಿಂದ ರಾಜ್ಯದ ಆದಾಯ ಹೆಚ್ಚಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ರಾಜ್ಯದ ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ 4,700 ಕೋಟಿ ರು. ಅನುದಾನ ನೀಡುವಂತೆ ಪ್ರಸ್ತಾವನೆ  ಜೊತೆಗೆ 386 ಕೋಟು ರು, ಪ್ರವಾಹ ಪರಿಹಾರಕ್ಕಾಗಿ ನೀಡುವಂತೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. ಜೊತೆಗೆ ಮಹಾದಾಯಿ ನೀರು ಹಂಚಿಕೆ ವಿಷಯದಲ್ಲಿ ಪ್ರಧಾನಿ ಮದ್ಯ ಪ್ರವೇಶಿಸುವಂತೆ ಕೋರುವುದರ ಜೊತೆಗೆ ರಾಜ್ಯದ ರೈತರ ಸಾಲ ಮನ್ನಾ ಮಾಡಲು ಕೋರುವುದಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com