ಮೆಕ್ಕಾಯಾತ್ರೆಯ ಲೆಕ್ಕವನ್ನು ದೇವೇಗೌಡರಿಗೆ ಕೊಡುವ ದರ್ದು ನನಗಿಲ್ಲ: ಜಮೀರ್ ಅಹ್ಮದ್

ಶಾಸಕ ಜಮೀರ್‌ ಅಹಮದ್‌ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ನಡುವಿನ ಮಾತಿನ ಸಂಷರ್ಘ‌ ತೀವ್ರ ಸ್ವರೂಪ ಪಡೆದಿದೆ. ಇಷ್ಟು ದಿನ ನಡೆಯುತ್ತಿದ್ದ ಮುಸುಕಿನ ಗುದ್ದಾಟ ...
ಜಮೀರ್ ಅಹ್ಮದ್ ಮತ್ತು ದೇವೇಗೌಡ
ಜಮೀರ್ ಅಹ್ಮದ್ ಮತ್ತು ದೇವೇಗೌಡ

ಬೆಂಗಳೂರು: ಶಾಸಕ ಜಮೀರ್‌ ಅಹಮದ್‌ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ನಡುವಿನ ಮಾತಿನ ಸಂಷರ್ಘ‌ ತೀವ್ರ ಸ್ವರೂಪ ಪಡೆದಿದೆ. ಇಷ್ಟು ದಿನ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಉಪ ಚುನಾವಣೆ ವೇಳೆ ಬೀದಿಗೆ ಬಿದ್ದಿದೆ.

ರಾಜಕೀಯಕ್ಕೆ ಬರುವ ಮೊದಲಿನಿಂದಲೂ ಜನರನ್ನು ಹಜ್‌ ಯಾತ್ರೆಗೆ ಕಳುಹಿಸುತ್ತಿದ್ದೇನೆ. ಪ್ರತಿ ವರ್ಷ ಹಜ್‌ ಯಾತ್ರೆಗೆ ಜನರನ್ನು ಯಾವ ದುಡ್ಡಿನಲ್ಲಿ ಕಳುಹಿಸುತ್ತೇನೆ ಎಂಬುದರ ಲೆಕ್ಕವನ್ನು ನಾನು ದೇವೇಗೌಡರಿಗೆ ಕೊಡಬೇಕಿಲ್ಲ' ಎಂದು ಜಮೀರ್‌ ಅಹಮದ್‌ ತಿರುಗೇಟು ನೀಡಿದ್ದಾರೆ.

ರಾಜಕೀಯ ಲಾಭಕ್ಕಾಗಿ ನಾನು ಆ ಕೆಲಸ ಮಾಡುತ್ತಿಲ್ಲ. ಯಾವ ದುಡ್ಡು ಎಂಬುದು ನಾನು ದೇವರಿಗೆ ಲೆಕ್ಕ ಕೊಡಬೇಕಿದೆ. ದೇವೇಗೌಡರಿಗಲ್ಲ ಎಂದು ತೀಕ್ಷ್ಣವಾಗಿ ಹೇಳಿದರು. 19 ವರ್ಷಗಳಿಂದ ಹಜ್‌ ಯಾತ್ರೆಗೆ ಬಡ ಮುಸ್ಲಿಂ ಧಾರ್ಮಿಕ ಮುಖಂಡರು, ಅಂಗವಿಕಲರನ್ನು ಕಳುಹಿಸುತ್ತಿದ್ದೇನೆ. ಈ ದೇಶದಲ್ಲಿ ಯಾವುದಾದರೂ ಮುಸ್ಲಿಂ ಮುಖಂಡ ವೆಚ್ಚ ಭರಿಸಿ ಹಜ್‌ ಯಾತ್ರೆಗೆ ಕಳುಹಿಸಿರುವ ಉದಾಹರಣೆ ಇದ್ದರೆ ಹೇಳಲಿ. ನಾನು ರಾಜಕೀಯವಾಗಿ ಸನ್ಯಾಸತ್ವ ಪಡೆದುಕೊಳ್ಳುತ್ತೇನೆ ಎಂದು ಸವಾಲು ಹಾಕಿದರು.

ಹೆಬ್ಟಾಳ ಕ್ಷೇತ್ರದಲ್ಲಿ ಕಾರಣಾಂತರಗಳಿಂದ ಜೆಡಿಎಸ್‌ ಪರ ಪ್ರಚಾರ ಮಾಡುತ್ತಿಲ್ಲ. ಕಾಂಗ್ರೆಸ್‌ ಪರವೂ ಪ್ರಚಾರ ಮಾಡುತ್ತಿಲ್ಲ. ಭಾನುವಾರ ರಾಮನಗರ, ಮಾಗಡಿಯಲ್ಲಿ ಜೆಡಿಎಸ್‌ ಅಭ್ಯರ್ಥಿಗಳ ಪರ ಬಹಿರಂಗ ಪ್ರಚಾರ ಮಾಡಿದ್ದೇನೆ. ಇನ್ನು ಪಕ್ಷ ವಿರೋಧಿ ಮಾತು ಎಲ್ಲಿಂದ ಬಂತು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com