ಫೆಬ್ರವರಿ 13, 20 ರಂದು ಜಿಪಂ, ತಾಪಂ ಚುನಾವಣೆ?

ಫೆಬ್ರವರಿ ಎರಡು ಅಥವಾ ಮೂರನೇ ವಾರದಲ್ಲಿ ರಾಜ್ಯದ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗೆ ಚುನಾವಣೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಳಗಾವಿ/ಬೆಂಗಳೂರು: ಫೆಬ್ರವರಿ ಎರಡು ಅಥವಾ ಮೂರನೇ ವಾರದಲ್ಲಿ ರಾಜ್ಯದ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗೆ ಚುನಾವಣೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಪಿ.ಎನ್. ಶ್ರೀನಿವಾಸಾಚಾರಿ ಹೇಳಿದ್ದಾರೆ. 
ನಗರದ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚುನಾವಣೆ ಸಿದ್ಧತೆ ಬಗ್ಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಜ.8 ರ ನಂತರ ರಾಜ್ಯ ಪೊಲೀಸ್ ಮಹಾನಿರ್ದೇಶಕರೊಂದಿಗೆ ಸಭೆ ನಡೆಸಿದ ಬಳಿಕ ಚುನಾವಣೆ ದಿನಾಂಕ ಘೋಷಿಸಲಾಗುತ್ತದೆ. ಒಟ್ಟಾರೆ ಫೆಬ್ರುವರಿ ತಿಂಗಳಾಂತ್ಯದೊಳಗೆ ಚುನಾವಣೆಯ ಎಲ್ಲ ಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದರು. ಎರಡು ಹಂತದಲ್ಲಿ ಚುನಾವಣೆ ನಡೆಸಲು ಉದ್ದೇಶಿಸಲಾಗಿದೆ.
15 ಜಿಲ್ಲೆಗಳಲ್ಲಿ ಮೊದಲ ಹಂತ ಹಾಗೂ ಉಳಿದ 15 ಜಿಲ್ಲೆಗಳಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಸಲು ಉದ್ದೇಶಿಸಲಾಗಿದೆ. ರಾಜ್ಯದ 1083 ಜಿ.ಪಂ. ಮತ್ತು 3909 ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. 
ಚುನಾವಣೆ ನಡೆ ಸಲು ಸರ್ಕಾರ 100 ಕೋಟಿ ಅನುದಾನ ಒದಗಿಸಿದ್ದು, ಈಗಾಗಲೇ ರು.50 ಕೋಟಿ ಅನು ದಾನ ಬಂದಿದೆ ಎಂದರು. ಉನ್ನತ ಮೂಲಗಳ ಪ್ರಕಾರ ಫೆ.13 ಹಾಗೂ ಫೆ.20ರಂದು ಚುನಾವಣೆ ನಡೆಯುವುದು ಖಚಿತವಾಗಿದೆ. ವೆಚ್ಚ ಮಿತಿ ಇದೆ: ಜಿ.ಪಂ, ತಾ. ಪಂ. ಅಭ್ಯರ್ಥಿಗಳಿಗೆ ವೆಚ್ಚ ಮಿತಿ ವಿಧಿಸಲಾಗುವುದು. 
ಜಿ.ಪಂ.ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ ಗರಿಷ್ಠ ರು.1 ಲಕ್ಷ, ತಾ.ಪಂ. ಸ್ಪರ್ಧಿಸುವ ಅಭ್ಯರ್ಥಿ ಗರಿಷ್ಠ ರು.50 ಸಾವಿರ ವೆಚ್ಚ ಮಾಡಲು ಅವಕಾಶವಿದೆ. ಚುನಾವಣೆ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲಾಗುವುದು ಎಂದು ಹೇಳಿದರು. ರಾಜ್ಯದಲ್ಲಿ ಈ ಚುನಾವಣೆಗೆ ಸುಮಾರು 2.76 ಕೋಟಿ ಮತದಾರರಿದ್ದಾರೆ. 
ನಾಮಪತ್ರ ಸಲ್ಲಿಸುವವರೆಗೂ ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅವಕಾಶವಿದೆ. ಶೇ.10 ರಷ್ಟು ಮತದಾರರು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದ ಶ್ರೀನಿವಾಸಾ-ಚಾರಿ ಪ.ಪಂ. ಯಾಗಿ ಮೇಲ್ದರ್ಜೆಗೇರಿದ ಗ್ರಾ.ಪಂ. ಚುನಾವಣೆ ನಡೆಯುವುದಿಲ್ಲ. ಪಂಚಾಯಿತಿ ಚುನಾವಣೆಯ ಬಳಿಕ ಮೇಲ್ದ-ರ್ಜೆಗೇರಿದ ನಗರ ಸ್ಥಳೀಯ ಸಂಸ್ಥೆಗಳಿಗೂ ಚುನಾವಣೆ ನಡೆಸಲಾಗುತ್ತದೆ ಎಂದರು.
ಫೆಬ್ರವರಿ ಅಂತ್ಯಕ್ಕೆ ಜಂಟಿ ಅಧಿವೇಶನ: ಜಿಪಂ, ತಾಪಂ ಜತೆಗೆ ಉಪ ಚುನಾವಣೆಗಳ ಹಿನ್ನೆಲೆ-ಯಲ್ಲಿ ಈ ತಿಂಗಳಲ್ಲಿ ನಡೆಯಬೇಕಿದ್ದ ಜಂಟಿ ಅಧಿವೇಶನ ಫೆಬ್ರವರಿ ಅಂತ್ಯಕ್ಕೆ ನಡೆ-ಯ-ಲಿದೆ. ಜಂಟಿ ಅಧಿವೇಶನವನ್ನು ಒಂದು ಇಲ್ಲವೇ 2 ವಾರ ನಡೆಸಲಿದೆ. ಅದೇ ಅಧಿವೇಶನವನ್ನು ಮುಂದುವರಿಸಿ ಬಜೆಟ್ ಮಂಡಿಸಲು ಸರ್ಕಾರ ಉದ್ದೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com