
ಹುಬ್ಬಳ್ಳಿ: ಸರ್ಕಾರಿ ಅಧಿಕಾರಿಯೊಬ್ಬರ ಕೆನ್ನೆಗೆ ಸಿಎಂ ಸಿದ್ಧರಾಮಯ್ಯ ಹೊಡೆದಿರುವುದು, ಅವರ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ 'ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ಬಂದಿರುವ ಕಾರಣ ರಾಜಕೀಯ ಹಿತಾಸಕ್ತಿಗಾಗಿ ನೂರಾರು ಕೋಟಿ ಯೋಜನೆಗಳ ಶಂಕುಸ್ಥಾಪನೆ ಮಾಡುತ್ತ ತಿರುಗುತ್ತಿದ್ದಾರೆ. ಇಲ್ಲದಿದ್ದರೆ ಸಿದ್ದು ಸರಕಾರ ನಿದ್ರೆಯಲ್ಲಿರುತ್ತಿದೆ,'ಎಂದು ಎಚ್ ಡಿಕೆ ಲೇವಡಿ ಮಾಡಿದ್ದಾರೆ.
ಬರ ಪರಿಹಾರದ ವಿಷಯದಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳೆರಡೂ ಮೋಸ ಮಾಡುತ್ತಿವೆ. ಬರ ಪರಿಹಾರ ಧನ ಎಂದು ಕೇಂದ್ರ ಸರಕಾರ ನೀಡಿದ 1540 ಕೋಟಿಯ ಬಳಕೆಯಾಗಿಲ್ಲ. ಕೇಂದ್ರ ಸರಕಾರವು ಪರಿಹಾರ ಧನವನ್ನು ಭಿಕ್ಷೆ ರೂಪದಲ್ಲಿ ಕೊಡುತ್ತಿದೆ. ದ್ರಾಕ್ಷಿ, ದಾಳಿಂಬೆ, ಹತ್ತಿ ಬೆಳೆಗಾರರು ನಾಲ್ಕಾರು ವರ್ಷದಿಂದ ಸಂಕಷ್ಟ ಎದುರಿಸುತ್ತಿದ್ದರೂ ಅವರಿಗೆ ಪರಿಹಾರ ಸಿಕ್ಕಿಲ್ಲ,'ಎಂದು ದೂರಿದ್ದಾರೆ.
Advertisement