ಉಪ ಚುನಾವಣೆಯಲ್ಲಿ ಜಯ ಗಳಿಸಲು ರಾಜ್ಯ ಸರ್ಕಾರದ ತಂತ್ರ
ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ಮೂರು ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆಯನ್ನು ಸಚಿವರಿಗೆ ವಹಿಸಿದೆ. ಬಳ್ಳಾರಿ ಉಪ ಚುನಾವಣೆ ಗೆಲ್ಲಿಸಿಕೊಟ್ಟಿದ್ದ ಇಂಧನ ಸಚಿವ ಡಿ.ಕೆ ಶಿವಕುಮಾರ್ ಗೆ ಹೆಬ್ಬಾಳ ಉಸ್ತುವಾರಿ ವಹಿಸಿಕೊಡಲಾಗಿ
ಬೀದರ್ ಕ್ಷೇತ್ರದ ಉಸ್ತುವಾರಿಯನ್ನು ಸಚಿವರಾದ ಎಸ್. ಆರ್ ಪಾಟೀಲ್ , ಖಮರುಲ್ಲಾ ಇಸ್ಲಾಂ, ಬಾಬುರಾವ್ ಚಿಂಚನಸೂರ್, ಉಮಾಶ್ರೀ, ದೇವದುರ್ಗ ಕ್ಷೇತ್ರವನ್ನು ಸಚಿವರಾದ ಎಚ್. ಸಿ ಮಹಾದೇವಪ್ಪ , ಶರಣ ಪ್ರಕಾಶ ಪಾಟೀಲ್, ಎಚ್. ಆಂಜನೇಯ ಹಾಗೂ ಹೆಬ್ಬಾಳ ಕ್ಷೇತ್ರವನ್ನು ಸಚಿವರಾದ ಡಿ.ಕೆ ಶಿವಕುಮಾರ್ . ಕೆ.ಜೆ ಜಾರ್ಜ್ ರಾಮಲಿಂಗಾ ರೆಡ್ಡಿ, ಕೃಷ್ಣ ಬೈರೇಗೌಡ, ದಿನೇಶ್ ಗೂಂಡೂರಾವ್ ಅವರಿಗೆ ವಹಿಸಿದೆ.
ಗುರುವಾರ ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಸಿಎಂ ಸಿದ್ದರಾಮಯ್ಯ ನಿವಾಸ ಕಾವೇರಿಗೆ ತೆರಳಿ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಕಾರಮಿಕ ಸಚಿವ ಪರಮೇಶ್ವರ್ ನಾಯಕ್ ನೀಡಿರುವ ಹೇಳಿಕೆ, ಇನ್ವೆಸ್ಟ್ ಕರ್ನಾಟಕ-2016 ದ ಅಂತಿಮ ತಯಾರಿ ಮತ್ತು ಭದ್ರತೆ ಬಗ್ಗೆ ಮಾಹಿತಿ ವಿನಿಮಯ ಮಾಡಿದರು. ಉಪ ಚುನಾವಣೆಗೆ ಉಸ್ತುವಾರಿ ಸಚಿವರ ಪಟ್ಟಿ ಹಾಗೂ ಜಿಪಂ. ತಾಪಂ ಚುನಾವಣೆಗೆ 40 ಸ್ಟಾರ್ ಪ್ರಚಾರಕರ ಪಟ್ಟಿಗೆ ಎಐಸಿಸಿಯಿಂದ ಒಪ್ಪಿಗೆ ಪಡೆದಿರುವ ಬಗ್ಗೆ ಮಾಹಿತಿ ನೀಡಿದರು ಎನ್ನಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ