ವಿಧಾನಸಭೆಯಲ್ಲಿ ಸಿಎಂ, ಜಾರ್ಜ್ ಏಕಾಂಗಿ ಹೋರಾಟ

ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ಜಾರ್ಜ್ ರಾಜೀನಾಮೆ ನೀಡುವಂತೆ ಬಿಗಿ ಪಟ್ಟು ಹಿಡಿದು ಕುಳಿತಿವೆ. ಕಳೆದ ಎರಡು ದಿನಗಳ ಹಿಂದೆಯೇ ಸಚಿವ ಜಾರ್ಜ್ ಬೆಂಬಲಕ್ಕೆ ನಿಲ್ಲಬೇಕೆಂದು...
ಕೆ.ಜೆ ಜಾರ್ಜ್
ಕೆ.ಜೆ ಜಾರ್ಜ್

ಬೆಂಗಳೂರು: ಮಡಿಕೇರಿಯಲ್ಲಿ ಮಂಗಳೂರು ಡಿವೈಎಸ್ ಪಿ ಎಂ ಕೆ ಗಣಪತಿ ಆತ್ಮಹತ್ಯೆಗೂ ಮುನ್ನ ಜಾರ್ಜ್ ಹೆಸರು ಹೇಳಿರುವುದು ಆಡಳಿತ ಪಕ್ಷ ಕಾಂಗ್ರೆಸ್ ಗೆ ಸಂಕಷ್ಟ ತಂಡೊಡ್ಡಿದೆ.

ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ಜಾರ್ಜ್  ರಾಜೀನಾಮೆ ನೀಡುವಂತೆ ಬಿಗಿ ಪಟ್ಟು ಹಿಡಿದು ಕುಳಿತಿವೆ. ಕಳೆದ ಎರಡು ದಿನಗಳ ಹಿಂದೆಯೇ ಸಚಿವ ಜಾರ್ಜ್ ಬೆಂಬಲಕ್ಕೆ ನಿಲ್ಲಬೇಕೆಂದು ಸಿಎಂ ಸಿದ್ದರಾಮಯ್ಯ ಎರಡು ದಿನಗಳ ಹಿಂದೆಯೇ ಫರ್ಮಾನು ಹೊರಡಿಸಿದ್ದರು, ಆದರೆ   ಒಂದಿಬ್ಬರು ಸಚಿವರು ಹಾಗೂ ಶಾಸಕರನ್ನು ಬಿಟ್ಟು ಮತ್ಯಾರು ವಿಧಾನಸಭೆಯಲ್ಲಿ ಜಾರ್ಜ್ ಬೆಂಬಲಕ್ಕೆ ನಿಲ್ಲದಿರುವುದು ಆಶ್ಚರ್ಯಕ್ಕೆ ಕಾರಣವಾಯಿತು.

ಸಿಎಂ ವಿರುದ್ಧ ಪ್ರತಿಪಕ್ಷ ಬಿಜೆಪಿಯ ಜಗದೀಶ್ ಶೆಟ್ಟರ್ ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು. ಆದರೆ ಉತ್ತರ ಕೊಡಲು ಸಿಎಂ ಕೂಡ ಎದ್ದು  ನಿಂತು ಸ್ವತಃ ಮುಖ್ಯಮಂತ್ರಿ ಹಾಗೂ ಜಾರ್ಜ್ ಅವರೇ ಸಮರ್ಥಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಯಿತು. ಒಂದು ಹಂತದಲ್ಲಿ ಮುಖ್ಯಮಂತ್ರಿಯನ್ನು ಕಿಚಾಯಿಸಿದ ಪ್ರತಿಪಕ್ಷ ಸದಸ್ಯರು, ನಿಮ್ಮ ಅಸಹಾಯಕತೆ ನೋಡಿ ನಮಗೆ ಬೇಸರವಾಗುತ್ತದೆ. ನಿಮ್ಮದೇ ನಾಯಕ ಜನಾರ್ದನ ಪೂಜಾರಿ ಪಕ್ಷದ ಆತ್ಮಹತ್ಯೆ ತಡೆಯಿರಿ ಎನ್ನುತ್ತಾರೆ. ಇಲ್ಲಿ ನೋಡಿದರೆ ಎಲ್ಲದಕ್ಕೂ ಮುಖ್ಯಮಂತ್ರಿ ಹಾಗೂ ಜಾರ್ಜ್ ಅವರೇ ನಿಲ್ಲುವ ಪರಿಸ್ಥಿತಿಯಿದೆ. ನೀವು ಮಾಡಿರುವ ಕೆಲಸವನ್ನು ನಿಮ್ಮ ಶಾಸಕರೇ ಸಮರ್ಥಿಸಿಕೊಳ್ಳಲು ಆಗುತ್ತಿಲ್ಲ ಎಂದು ಲೇವಡಿ ಮಾಡಿದರು.

ಆಗಾಗ್ಗೆ ಸಿಎಂ ಆಪ್ತರಾದ ಎಸ್ ಟಿ ಸೋಮಶೇಖರ್.  ಭೈರತಿ ಬಸವರಾಜ್ ಮತ್ತು ನೂತನ ಸಚಿವ ಪ್ರಮೋದ್ ಮಧ್ವರಾಜ್ ಸಿಎಂ ಬೆಂಬಲಕ್ಕೆ ನಿಲ್ಲಲು ಬರುತ್ತಿದ್ದರೇ ಹೊರತು ಸಮರ್ಥಿಸಿಕೊಳ್ಳಲು ವಿಫಲರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com