ಬೆಂಗಳೂರಿಗೆ ವಾಪಸ್ ಬಂದು ಬಿಡಿ: ಪಕ್ಷೇತರ ಶಾಸಕರಿಗೆ ಸಿಎಂ ಸಂದೇಶ

ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಕುದುರೆ ವ್ಯಾಪಾರ ಭೀತಿಯಿಂದ ಮುಂಬೈ ಗೆ ತೆರಳಿರುವ 14 ಪಕ್ಷೇತರ ಶಾಸಕರಿಗೆ ಬೆಂಗಳೂರಿಗೆ ವಾಪಸ್ ಬರೋದಾದರೆ...
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಕುದುರೆ ವ್ಯಾಪಾರ ಭೀತಿಯಿಂದ ಮುಂಬೈ ಗೆ ತೆರಳಿರುವ 14 ಪಕ್ಷೇತರ ಶಾಸಕರಿಗೆ  ಬೆಂಗಳೂರಿಗೆ ವಾಪಸ್ ಬರೋದಾದರೆ ಬಂದುಬಿಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂದೇಶ ರವಾನಿಸಿದ್ದಾರೆ.

ಪಕ್ಷೇತರ ಶಾಸಕರು ಮುಂಬೈನ ಜೆಎಂಡಬ್ಲ್ಯೂ ಮ್ಯಾರಿಯಟ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಆದರೆ ಇದೀಗ ಬೇರೆಡೆಗೆ ಸ್ಥಳಾಂತರಗೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಬೆಂಗಳೂರಿಗೆ ವಾಪಸ್ ಬರೋದಾದರೆ ಬಂದುಬಿಡಿ ಎಂದು ಸ್ವತಃ ಸಿಎಂ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

ವೋಟಿಗಾಗಿ ನೋಟು ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದರೆ, ಮತ್ತೊಂದೆಡೆ ಅಶೋಕ್ ಖೇಣಿ ಪತ್ರಕರ್ತೆ ವಿರುದ್ಧ ಅಸಭ್ಯ ಪದ ಬಳಕೆ ರಾದ್ಧಾಂತಕ್ಕೆ ಎಡೆಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಖೇಣಿ ವರ್ತನೆ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿಯೂ ಅಸಮಾಧಾನ ಮೂಡಿದೆ.
ಮಾಧ್ಯಮದವರ ಜೊತೆ ಮಾತನಾಡದಂತೆ ಪಕ್ಷೇತರ ಶಾಸಕರು, ಕಾಂಗ್ರೆಸ್ ಶಾಸಕರಿಗೆ ಹೈಕಮಾಂಡ್ ಕಟ್ಟಪ್ಪಣೆ ವಿಧಿಸಿದೆ. ಈ ಬೆಳವಣಿಗೆಯ ನಡುವೆಯೇ ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಮುಂಬೈ ಪ್ರವಾಸ ರದ್ದುಗೊಳಿಸಿದ್ದಾರೆ.

ತಮ್ಮನ್ನು ಸಂದರ್ಶಿಸಲು ಬಂದಿದ್ದ ಆಂಗ್ಲಸುದ್ದಿ ವಾಹಿನಿ ಪತ್ರಕರ್ತೆಯನ್ನು ಶಾಸಕ ಅಶೋಕ್ ಖೇಣಿ ಅಸಭ್ಯ ಪದಗಳಿಂದ ನಿಂದಿಸಿರುವ ಘಟನೆಗೆ ಕಾಂಗ್ರೆಸ್ ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿದೆ ಎಂದು ವರದಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com