
ಮೈಸೂರು: ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಜೆಡಿಎಸ್ ನಿಂದ ಅಮಾನತುಗೊಂಡಿರುವ ನಾಗಮಂಗಲ ಶಾಸಕ ಎನ್. ಚಲುವರಾಯಸ್ವಾಮಿ ದೇವೇಗೌಡರ ಕುಟುಂಬದ ವಿರುದ್ಧ ಮಂಡ್ಯ ಕಾರ್ಡ್ ಪ್ಲೇ ಮಾಡಿದ್ದಾರೆ.
ನನ್ನ ಬಗ್ಗೆ ಟೀಕೆ ಮಾಡುವವರಿಗೆ ಮೊದಲು ಮಂಡ್ಯದ ಬಗ್ಗೆ ಅರಿವಿರಬೇಕು. ಪ್ರಸಿದ್ಧ ನಟ ಅಂಬರೀಷ್ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಗೆಲ್ಲಿಸುವ ವಿಶ್ವಾಸ ನೀಡಿ ನನಗೆ ಗೆಲುವು ತಂದು ಕೊಟ್ಟವರು ಮಂಡ್ಯ ಜನತೆ, ಈಗ ನನ್ನನ್ನ ದೇವೇಗೌಡ ಮತ್ತು ರೇವಣ್ಣ ಟೀಕಿಸಲಿ ಎಂದು ಚಲುವರಾಯಸ್ವಾಮಿ ಸವಾಲು ಹಾಕಿದ್ದಾರೆ.
ಮದ್ದೂರು ಶಾಸಕ ಡಿ.ಸಿ ತಮ್ಮಣ್ಣ ಅವರನ್ನು ಬಿಟ್ಟರೇ ಜಿಲ್ಲೆಯ ಉಳಿದ ಎಲ್ಲಾ ಜೆಡಿಎಸ್ ಮುಖಂಡರು ನನ್ನ ಜೊತೆ ಉತ್ತಮ ಸಂಪರ್ಕ ಹೊಂದಿದ್ದು, ಒಳ್ಳೆಯ ಒಡನಾಟವಿದೆ ಎಂದು ಅವರು ಹೇಳಿದ್ದಾರೆ.
ಮುಂದಿನ ಎರಡು ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಯ ಕಡೆ ಗಮನ ಹರಿಸಲಾಗುವುದು, ಅನಂತರ ತಮ್ಮ ರಾಜಕೀಯ ಜೀವನದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
Advertisement