ಅಂಬರೀಷ್
ಅಂಬರೀಷ್

ಸಂಪುಟದಿಂದ ಅಂಬರೀಷ್ ಔಟ್: ಅಭಿಮಾನಿಯಿಂದ ಆತ್ಮಹತ್ಯೆಯತ್ನ

ಸಂಪುಟ ಪುನಾರಚನೆಗೆ ಹೈ ಕಮಾಂಡ್ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ, ಸಂಪುಟದಿಂದ ಕೈ ಬಿಡಲಾಗಿರುವ ಹಲವು ಸಚಿವರುಗಳ ಬೆಂಬಲಿಗರು ರಾಜ್ಯಾದ್ಯಂತ ...
Published on

ಮಂಡ್ಯ: ಸಂಪುಟ ಪುನಾರಚನೆಗೆ ಹೈ ಕಮಾಂಡ್ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ, ಸಂಪುಟದಿಂದ ಕೈ ಬಿಡಲಾಗಿರುವ ಹಲವು ಸಚಿವರುಗಳ ಬೆಂಬಲಿಗರು ರಾಜ್ಯಾದ್ಯಂತ ಪ್ರತಿಭಟನೆ ಕೈಗೊಂಡಿದ್ದಾರೆ.

ಹೊಸ ಸಂಪುಟದ ಸಚಿವರು ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಕ್ಷಣಗಣನೆ ಆರಂಭವಾಗಿದ್ದರೆ, ಸಚಿವಗಿರಿ ಕೈತಪ್ಪಿ ಹೋಗಿದ್ದಕ್ಕೆ ಬೆಂಬಲಿಗರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಮೂಲಕ ಕೈಪಾಳಯದೊಳಗೆ ಅಸಮಾಧಾನದ ಹೊಗೆ ಭುಗಿಲೆದ್ದಂತಾಗಿದೆ.

ವಸತಿ ಖಾತೆ ಸಚಿವ, ನಟ ಅಂಬರೀಶ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಬಾರದೆಂದು ಆಗ್ರಹಿಸಿ ಮಂಡ್ಯದ ಸಂಜಯ್ ವೃತ್ತದಲ್ಲಿ ಅಂಬಿ ಅಭಿಮಾನಿಯೊಬ್ಬರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಏತನ್ಮಧ್ಯೆ ಆತ್ಮಹತ್ಯೆಗೆ ಯತ್ನಿಸಿದ್ದ ಸಿಎಂ ದ್ಯಾವಪ್ಪ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ರಕ್ಷಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com