
ಚಿತ್ರದುರ್ಗ: ನಟ ಅಂಬರೀಶ್‌ಗೆ ಸಚಿವ ಸ್ಥಾನ ನೀಡುವುದಾದರೆ ನಾನು ಸಚಿವ ಸ್ಥಾನವನ್ನು ತ್ಯಜಿಸಲು ಸಿದ್ದ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದ್ದಾರೆ.
ಅಂಬರೀಷ್ ನಾನು ಒಳ್ಳೆಯ ಸ್ನೇಹಿತರು. ಅವರಿಗೆ ಉತ್ತಮ ಸ್ಥಾನಮಾನ ನೀಡಬೇಕು. ಅಗತ್ಯವಿದ್ದರೆ ನನ್ನ ಸ್ಥಾನವನ್ನೇ ಬಿಟ್ಟುಕೊಡುತ್ತೇನೆ ಎಂದು ಎಂದು ಅವರು ಹೇಳಿದ್ದಾರೆ.
ಮಾಜಿ ಸಚಿವ ಅಂಬರೀಶ್ ಹಿರಿಯ ನಾಯಕರಾಗಿದ್ದರಿಂದ ಅವರಿಗೆ ಉತ್ತಮ ಸ್ಥಾನ ದೊರೆಯಬೇಕು. ಅವರಿಗಾಗಿ ಸಚಿವ ಸ್ಥಾನ ಬಿಟ್ಟುಕೊಡಲು ನಾನು ಸಿದ್ದವಾಗಿದ್ದೇನೆ ಎಂದು ಘೋಷಿಸಿದ್ದಾರೆ. ಅಂಬರೀಶ್‌ಗೆ ಅವರ ಘನತೆ ಗೌರವಕ್ಕೆ ತಕ್ಕಂತೆ ಯಾವುದಾದರೂ ಉತ್ತಮ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹೈಕಮಾಂಡ್ ನಾಯಕರಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಮುರುಘಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಸಚಿವ ಮಲ್ಲಿಕಾರ್ಜುನ್, ಎಲ್ಲರಲ್ಲೂ ಶರಣರನ್ನು ಕಾಣಬೇಕಾಗಿದೆ. ಶ್ರೀಗಳ ಆಶೀರ್ವಾದ ದೊರೆತಿದ್ದರಿಂದ ತುಂಬಾ ಸಂತೋಷವಾಗಿದೆ ಎಂದಿದ್ದಾರೆ.
Advertisement