
ಬೆಂಗಳೂರು: 18 ವರ್ಷಗಳ ಹಿಂದಿನ ನ್ಯಾಯಾಲಯದ ಆದೇಶದ ಎಳೆ ಹಿಡಿದುಕೊಂಡು ಲೋಕಾಯುಕ್ತ ಮುಚ್ಚಿಹಾಕಲು ನಿಮಗೆ ಐಡಿಯಾ ಕೊಟ್ಟ ಭೂಪ ಯಾರು? ಲೋಕಾಯುಕ್ತ ವ್ಯವಸ್ಥೆ ಕುರಿತು ದಿನಗಟ್ಟಲೇ ಚರ್ಚೆ ನಡೆದಾಗಲೂ ಪ್ರಸ್ತಾಪವಾಗದ ಈ ಆಲೋಚನೆ ದಿಢೀರ್ ಜಾರಿ ಹಿಂದೆ ಯಾವ ಸದುದ್ದೇಶವಿದೆ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಜೆಡಿಎಸ್ ಶಾಸಕ ವೈಎಸ್ವಿ ದತ್ತ ಪ್ರಶ್ನಿಸಿದ್ದಾರೆ.
ಈ ಸಂಸ್ಥೆ ಬಗ್ಗೆ ಸದಾ ವಿರುದ್ದವಾಗಿರುವ ಅಧಿಕಾರಶಾಹಿ ತೊಡಕಿನ ಮಧ್ಯೆಯೂ ರಾಮಕೃಷ್ಣ ಹೆಗಡೆ ಕಾಲದಲ್ಲಿ ಸಂಸ್ಥೆ ಜೀವ ತಳೆಯಿತು. ಆ ಸಂದರ್ಭದ ಸರ್ಕಾರದಲ್ಲಿ ನೀವೂ ಇದ್ದಿರಿ. ಲೋಹಿಯಾ ವಾದಿಗಳಾದ ನೀವು ಶಕ್ತಿ ಇದ್ದರೆ ಸುಧಾರಣೆ ಚಕ್ರವನ್ನು ಮುಂದೆಳೆಯಬೇಕು ಎಂದು ಕಿವಿಮಾತು ಹೇಳಿದರು.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಸಹಕಾರಕ್ಕೆ ಬೇಸತ್ತು ನ್ಯಾ.ಸಂತೋಷ್ ಹೆಗ್ಡೆ ರಾಜೀನಾಮೆ ನೀಡಿದ್ದ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಆಡಿದ್ದ ಮಾತುಗಳನ್ನು ಪುನರುಚ್ಚರಿಸಿದ ದತ್ತ, ಈಗ ಸಿಎಂ ಆಗಿ ಎಸಿಬಿ ರಚನೆ ಮಾಡಿರುವುದು ನಿಜಕ್ಕೂ ಗೌರವ ತರುವುದಿಲ್ಲ ಎಂದರು.
Advertisement