ಯಾವ ಪುರುಷಾರ್ಥಕ್ಕಾಗಿ ಸಿಎಂ ಜನತಾ ದರ್ಶನ: ಎಚ್ ಡಿಕೆ ಪ್ರಶ್ನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಜನತಾದರ್ಶನ ಕಾರ್ಯಕ್ರಮದಲ್ಲಿ ದಲಿತ ಮಹಿಳೆಯೊಬ್ಬರನ್ನು ಅವಮಾನಿಸಲಾಗಿದೆ ಎಂದು...
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಜನತಾದರ್ಶನ ಕಾರ್ಯಕ್ರಮದಲ್ಲಿ ದಲಿತ ಮಹಿಳೆಯೊಬ್ಬರನ್ನು ಅವಮಾನಿಸಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ

ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರ ದಲಿತ ಮಹಿಳೆಯನ್ನು ಹೀನಾಯವಾಗಿ ನಡೆಸಿಕೊಂಡಿದೆ. ಇದೊಂದು ಅನಾಗರಿಕ ಸರ್ಕಾರ ಎಂದು ಆರೋಪಿಸಿದ್ದಾರೆ.

ಮೇ 17ರಂದು ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರು ನಡೆಸಿದ ‘ಜನತಾ ದರ್ಶನ’ ಕಾರ್ಯಕ್ರಮಕ್ಕೆ ದಲಿತ ಮಹಿಳೆಯೊಬ್ಬರು ತನ್ನ ಎರಡು ಪುಟ್ಟ ಮಕ್ಕಳೊಂದಿಗೆ ಸಹಾಯ ಕೋರಿ ಬಂದಿದ್ದರು. ಅವರನ್ನು ಬೆಳಿಗ್ಗೆಯಿಂದ ರಾತ್ರಿ 8ರ ವರೆಗೂ ಭೇಟಿ ಮಾಡದೆ ಸತಾಯಿಸಲಾಯಿತು. ಕೊನೆಗೆ, ಮಹಿಳೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾರೆ ಎಂದು ಹೇಳಿ, ಅವರನ್ನು ಮಡಿವಾಳದ ಮಹಿಳಾ ನಿಲಯದಲ್ಲಿ ಇರಿಸಲಾಯಿತು. ಬೆಳಿಗ್ಗೆ ಅಲ್ಲಿಗೆ ಬಂದ ಅವರ ಪತಿ ಮೇಲೂ ಹಲ್ಲೆ ನಡೆಸಿ, ಅವರು ಓಡಿಸುತ್ತಿದ್ದ ಬಾಡಿಗೆ ಆಟೊವನ್ನು ಕಿತ್ತುಕೊಳ್ಳಲಾಯಿತು. ಅಷ್ಟೇ ಅಲ್ಲ, ಆಟೊವನ್ನು ಬಾಡಿಗೆಗೆ ನೀಡಬಾರದು ಎಂದು ಮಾಲೀಕರಿಗೆ ಸೂಚಿಸಲಾಯಿತು. ಮಹಿಳೆಯನ್ನು ಬೆತ್ತಲೆಗೊಳಿಸಿ ಪರಪ್ಪನ ಅಗ್ರಹಾರದ ಜೈಲಿಗೆ ಹಾಕುವುದಾಗಿ ಪೊಲೀಸರು ಬೆದರಿಸಿದರು. ಈ ಮೂಲಕ ದಲಿತ ಮಹಿಳೆ ಮೈಮಾರಿಕೊಂಡು ಜೀವನ ಮಾಡಲು ಸರ್ಕಾರ ಪ್ರೇರೇಪಿಸುತ್ತಿದೆ ಎಂದು ಅವರು ದೂರಿದ್ದಾರೆ. ಇನ್ನು ಯಾವ ಪುರುಷಾರ್ಥಕ್ಕಾಗಿ ಸಿಎಂ ಜನತಾ ದರ್ಶನ ನಡೆಸುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ.

ತಾನು ಹಕ್ಕು ಪತ್ರ ಕೇಳಲು ಸಿಎಂ ನಿವಾಸದ ಬಳಿ ಮಕ್ಕಳೊಂದಿಗೆ ಬೆಳಗ್ಗೆಯೇ ತೆರಳಿದ್ದೆ. ಸಂಜೆವರೆಗೂ ಕಾಯುತ್ತಾ ಕೂತಿದ್ದರು ಒಳಗೆ ಬಿಡಲಿಲ್ಲ. ಅನುಮಾನಾಸ್ಪದವಾಗಿ ಓಡಾಡುತ್ತಿದ್ದೆ ಎಂದು ಹೇಳಿ ನನ್ನನ್ನು ಹೊಯ್ಸಳ ಪೊಲೀಸರಿಗೆ ಕರೆ ಮಾಡಿ ನನ್ನನ್ನು ಕಳುಹಿಸಲಾಯಿತು. ನಂತರ ಅಲ್ಲಿಂದ ಮಹಿಳಾ ನಿಲಯಕ್ಕೆ ಕರೆದೊಯ್ಯಲಾಯಿತು. ಅಲ್ಲಿ ನನ್ನ ಸೀರೆ ಹಿಡಿದು ಎಳೆದಾಡಿದರು ಎಂದು ನೊಂದ ಮಹಿಳೆ ಸವಿತಾ ದೂರಿದ್ದಾರೆ. ನಾನು ತಪ್ಪು ಮಾಡಿದ್ದರೇ ಶಿಕ್ಷೆ ಅನುಭವಿಸಲು ಸಿದ್ದನಿದ್ದೇನೆ ಎಂದು ಅವರು ಹೇಳಿದ್ದಾರೆ. ನೀನು ವೇಶ್ಯಾವಾಟಿಕೆ ಮಾಡುತ್ತಿದ್ದೆ ಎಂದು ಹೇಳಿ ದೂರು ದಾಖಲಿಸುವುದಾಗಿ ಪೊಲೀಸರು ಬೆದರಿಸಿದ್ದಾಗಿ ಆಕೆ ದೂರಿದ್ದಾರೆ.

ಮಹಿಳೆ ಮೇಲೆ ಯಾವುದೇ ರೀತಿಯ ದೌರ್ಜನ್ಯ ನಡೆದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಮೆಘರಿಕ್ ಸ್ಪಷ್ಟನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com