
ಬೆಂಗಳೂರು: ಬ್ರೇಕ್ ವಾಟರ್ ಕಾಮಗಾರಿಯ ಟೆಂಡರ್ ಮಂಜೂರು ಮಾಡಿಸಲು ಬಂದರು ಸಚಿವ ಬಾಬುರಾವ್ ಚಿಂಚನಸೂರು ಅವರು ಗುತ್ತಿಗೆ ಕಂಪೆನಿಯೊಂದರಿಂದ ರು. 2 ಕೋಟಿ ಲಂಚ ಪಡೆದಿದ್ದಾರೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೆಟ್ಟರ್ ಇನ್ನೊಂದು ಪ್ರಕರಣದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಕಾಮಗಾರಿಯೊಂದರಲ್ಲಿ ಟೆಂಡರ್ ಮೊತ್ತ ಹೆಚ್ಚಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ’ ಎಂದು ದೂರಿದ್ದಾರೆ .ಪ್ರಕರಣಗಳಿಗೆ ಸಂಬಂಧಿಸಿದಂತೆ ಸಚಿವರು ಹಾಗೂ ಗುತ್ತಿಗೆದಾರರ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಗಳ ಧ್ವನಿ ತುಣುಕುಗಳನ್ನು ಶೆಟ್ಟರ್ ಬಿಡುಗಡೆ ಮಾಡಿದರು.
ಸಾರ್ವಜನಿಕರಿಂದ ಲಭ್ಯವಾದ ಈ ಧ್ವನಿ ತುಣುಕಿನಲ್ಲಿರುವುದು ಸಚಿವರದೇ ಧ್ವನಿ. ಇದನ್ನು ದೃಢೀಕರಣ ಪರೀಕ್ಷೆಗೆ ಒಳಪಡಿಸಿಲ್ಲ. ಆದರೆ, ಸಚಿವರು ಈ ಆರೋಪ ನಿರಾಕರಿಸಿದರೆ, ಅದನ್ನು ಸಾಬೀತುಪಡಿಸಲು ಸಿದ್ಧ ಎಂದು ಸವಾಲು ಹಾಕಿದರು.
ಕೆಐಎಡಿಬಿ ಕಾಮಗಾರಿಯ ಟೆಂಡರ್ ಪ್ರಕರಣದ ಸಂಭಾಷಣೆಯಲ್ಲಿ ಬೃಹತ್ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಅವರ ಹೆಸರೂ ಪ್ರಸ್ತಾಪವಾಗಿದೆ. ದೇಶಪಾಂಡೆ ಅವರಿಗೆ ಲಂಚ ನೀಡಬೇಕಾಗುತ್ತದೆ ಎಂದು ಗುತ್ತಿಗೆದಾರರು ಹೇಳಿರುವ ಧ್ವನಿ ತುಣುಕು ಲಭ್ಯವಾಗಿದೆ. ಹಾಗಾಗಿ ಅವರೂ ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕ ಎಂದು ಶೆಟ್ಟರ್ ಆಗ್ರಹಿಸಿದ್ದಾರೆ.
ಈ ಎರಡೂ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ಸಚಿವರಾದ ಚಿಂಚನಸೂರು ಮತ್ತು ಆರ್.ವಿ. ದೇಶಪಾಂಡೆ ರಾಜೀನಾಮೆ ನೀಡಬೇಕು. ಅವರಾಗಿ ರಾಜೀನಾಮೆ ನೀಡದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರಿಂದ ರಾಜೀನಾಮೆ ಪಡೆಯಬೇಕು ಎಂದು ಶೆಟ್ಟರ್ ಒತ್ತಾಯಿಸಿದರು.
Advertisement