ಪರಿಷತ್ ಸಭಾಪತಿಗೆ ಕಿರಿಕಿರಿ ತಂದ ಪ್ರಿಯಾಂಕ್ ಖರ್ಗೆ ಉತ್ತರ

ಪ್ರಶ್ನೆಯೊಂದಕ್ಕೆ ಬೇಜವಾಬ್ದಾರಿ ಉತ್ತರ ನೀಡಿದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಿಧಾನ ಪರಿಷತ್ ಸಭಾಪತಿ ಡಿ.ಎಚ್ ಶಂಕರಮೂರ್ತಿ ಗರಂ ಆದ ಘಟನೆ ...
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
Updated on

ಬೆಳಗಾವಿ: ಪ್ರಶ್ನೆಯೊಂದಕ್ಕೆ ಬೇಜವಾಬ್ದಾರಿ ಉತ್ತರ ನೀಡಿದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ  ವಿಧಾನ ಪರಿಷತ್ ಸಭಾಪತಿ ಡಿ.ಎಚ್ ಶಂಕರಮೂರ್ತಿ ಗರಂ ಆದ ಘಟನೆ ನಡೆಯಿತು.

ಬೆಳಗಾವಿಯಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ಸರ್ಕಾರ ಭೂಮಿ ಗುರುತು ಮಾಡಿದೆಯೇ ಎಂದು ಬಿಜೆಪಿಯ ಮಹಾಂತೇಶ ಕವಟಗಿಮಠ ಪ್ರಶ್ನಿಸಿದರು. ಈ ಪ್ರಶ್ನೆಯನ್ನು  ಕೈಗಾರಿಕಾ ಇಲಾಖೆಗೆ ವರ್ಗಾಯಿಸಿರುವುದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಖರ್ಗೆ ಉತ್ತರದಿಂದ ಗುಡುಗಿದ ಸಭಾಪತಿ ಶಂಕರಮೂರ್ತಿ ರಾಜ್ಯ ಸರ್ಕಾರದ್ದೇ ಎರಡು ಇಲಾಖೆಗಳಿಗೆ ಬೇರೆ ಬೇರೆ ದೇಶದಲ್ಲಿ ಇರುವಷ್ಟು ಅಂತರವೇ? ಅಧಿಕಾರಿಗಳಿಗೆ ರಾಜ್ಯದ ಬಗ್ಗೆ ಕಾಳಜಿ ಇದೆಯೋ ಇಲ್ಲವೊ ಎಂದು ಗರಂ ಆಗಿ ಪ್ರಶ್ನಿಸಿದರು.

ಐಟಿ ಪಾರ್ಕ್ ನಲ್ಲಿ ಸೌಲಭ್ಯ ಒದಗಿಸುವ ಕಾರ್ಯ ಕೈಗಾರಿಕಾ ಇಲಾಖೆಗೆ ಸೇರಿದ್ದು. ಆದ್ದರಿಂದ ಪ್ರಶ್ನೆಯನ್ನು ಆ ಇಲಾಖೆಗೆ ವರ್ಗಾಯಿಸಲಾಗಿದೆ’ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ಐಎಎಸ್ ಅಧಿಕಾರಿಗಳನ್ನು ಸಮರ್ಥಿಸಿಕೊಳ್ಳದಂತೆ ಖರ್ಗೆಗೆ ಸಭಾಪತಿ ಸಲಹೆ ನೀಡಿದರು. ಎರಡು ಇಲಾಖೆಯ ಅಧಿಕಾರಿಗಳು ಚರ್ಚಿಸಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com