ಬೆಳಗಾವಿಯಲ್ಲಿ ಶಾಸಕರ ಭವನ ನಿರ್ಮಾಣಕ್ಕೆ ಹೋಟೆಲ್ ಮಾಲೀಕರ ಜೊತೆ ಸರ್ಕಾರದ ಮಾತುಕತೆ

ಬೆಳಗಾವಿಗೆ ಅಧಿವೇಶನಕ್ಕೆ ಬರುವ ಶಾಸಕರಿಗಾಗಿ 100 ಕೊಠಡಿಯ ಶಾಸಕರ ಭವನ ನಿರ್ಮಿಸಲು ಸರ್ಕಾರ ಪ್ರಮುಖ ಹೋಟೆಲ್ ಮಾಲಿಕರೊಂದಿಗೆ ...
ಸಿಎಂ ಸಿದ್ದರಾಮಯ್ಯ ಮತ್ತವರ ಸಂಪುಟ ಸಹೋದ್ಯೋಗಿಗಳು
ಸಿಎಂ ಸಿದ್ದರಾಮಯ್ಯ ಮತ್ತವರ ಸಂಪುಟ ಸಹೋದ್ಯೋಗಿಗಳು

ಬೆಳಗಾವಿ: ಬೆಳಗಾವಿಗೆ ಅಧಿವೇಶನಕ್ಕೆ ಬರುವ ಶಾಸಕರಿಗಾಗಿ 100 ಕೊಠಡಿಯ ಶಾಸಕರ ಭವನ ನಿರ್ಮಿಸಲು ಸರ್ಕಾರ ಪ್ರಮುಖ ಹೋಟೆಲ್ ಮಾಲಿಕರೊಂದಿಗೆ ಮಾತುಕತೆ ನಡೆಸಿದೆ.

ಸುವರ್ಣಸೌಧದಲ್ಲಿ ಅಧಿವೇಶನದಲ್ಲಿ ಪಾಲ್ಗೊಳ್ಳಲು ಬರುವ ಶಾಸಕರು ತಂಗಲು ಶಾಸಕರ ಭವನ ಮಾದರಿಯಲ್ಲಿ ಜಂಟಿ ಸಹಬಾಗಿತ್ವದಲ್ಲಿ ಹೋಟೆಲ್ ನಿರ್ಮಾಣ ಸಂಬಂಧ ಪ್ರಾಥಮಿಕ ಮಾತುಕತೆಗಳು ನಡೆದಿವೆ.

299 ಶಾಸಕರುಗಳಿಗೆ ಬೆಳಗಾವಿಯಲ್ಲಿರುವ ಅತಿಥಿ ಗೃಹಗಳು ಸಾಕಾಗುತ್ತಿಲ್ಲ. ಹೀಗಾಗಿ ಹೆಚ್ಚು ಹಣ ಖರ್ಚು ಮಾಡಿ ಹುಬ್ಬಳ್ಳಿ ಮತ್ತು ಬೆಳಗಾವಿ ನಗರಗಳಲ್ಲಿರುವ ಐಷಾರಾಮಿ ಹೊಟೆಲ್ ಗಳಲ್ಲಿ ತಂಗಬೇಕಾಗುತ್ತಿದೆ. ಕಾರ್ಯದರ್ಶಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳು ಕೂಡ ಹೋಟೆಲ್ ನಲ್ಲಿ ವಾಸ್ತವ್ಯ ಹೂಡುತ್ತಿರುವ ಕಾರಣ ಸರ್ಕಾರಕ್ಕೆ 16 ಕೋಟಿಗೂ ಹೆಚ್ಚು ಖರ್ಚು ಬರುತ್ತಿದೆ.

2014 ರಲ್ಲಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನಕ್ಕಾಗಿ ಸರ್ಕಾರ14 ಕೋಟಿ ರು ಹಣ ಖರ್ಚು ಮಾಡಿತ್ತು. 2013-14 ರಲ್ಲಿ ನಡೆದ ಅಧಿವೇಶನಕ್ಕಾಗಿ 11 ಕೋಟಿ ರು ಖರ್ಚು ಮಾಡಲಾಗಿತ್ತು., ಹಿಂದಿನ ಸರ್ಕಾರ ಕೂಡ ಸುವರ್ಣ ಸೌಧದ ಬಳಿ ಶಾಸಕರ ಭವನ ನಿರ್ಮಾಣಕ್ಕೆ ಯೋಜಿಸಿತ್ತು. ಶಾಸಕರ ಭವನ ನಿರ್ಮಾಣ ಅದರ ನಿರ್ವಹಣೆ ಮತ್ತೊಂದು ಬಿಳಿಯಾನೆ ಸಾಕಿದಂತಾಗುತ್ತದೆ ಎಂಬ ದೃಷ್ಠಿಯಿಂದಾಗಿ ಯೋಜನೆಯನ್ನು ಕೈ ಬಿಡಲಾಯಿತು.

12 ಎಕರೆ ಜಾಗದಲ್ಲಿ ಒಬ್ಬರಿಗೆ 600 ಚದರ ಅಡಿಯಂತೆ ಶಾಸಕರ ಭವನ ನಿರ್ಮಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ.ಸಿಎಂ ಸಿದ್ದರಾಮಯ್ಯ ಮತ್ತು ಲೋಕೋಪಯೋಗಿ ಸಚಿವ ಎಚ್.ಸಿ ಮಹಾದೇವಪ್ಪ ಸರ್ಕಾರ ಮತ್ತು ಹೋಟೆಲ್ ಮಾಲೀಕರ ಜಂಟಿ ಸಹಭಾಗಿತ್ವದಲ್ಲಿ ಶಾಸಕರ ಭವನ ನಿರ್ಮಿಸಲು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಶಾಸಕರ ಭವನಕ್ಕಾಗಿ ಸರ್ಕಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಎಕರೆ ಜಾಗ ನೀಡುವುದು ಜೊತೆಗೆ ಶೇ, 80 ರಷ್ಟು ಖರ್ಚು ಭರಿಸುವುದು, ಉಳಿದ ಶೇ 20 ರಷ್ಟು ಹಣವನ್ನು ಖಾಸಗಿ ಯವರು ಹೂಡುವುದು, ಜೊತೆಗೆ 20 ವರ್ಷ ಲೀಸ್ ಆಧಾರದ ಮೇಲೆ ನಮಗೆ ಕೊಡಲು ಸರ್ಕಾರ ಆಫರ್ ನೀಡಿದೆ. ಆದರೆ ಷರತ್ತಿನ ಪ್ರಕಾರ ಸರ್ಕಾರ 20 ವರ್ಷದ ನಂತರ ಬೇರೆಯವರಿಗೆ ಮಾಲೀಕತ್ವ ನೀಡುವ ಸಾಧ್ಯತೆ ಇದೆ. ಹಿಗಾಗಿ ಈ ಸಂಬಂಧ ಚರ್ಚಿಸುತ್ತಿರುವುದಾಗಿ,ಹೋಟೆಲ್ ಉದ್ಯಮಿ ವಿಠಲ್ ಎಸ್ ಹೆಗಡೆ ಅವರು ಹೇಳಿದ್ದಾರೆ.

ಮೊದಲ ಹಂತದಲ್ಲಿ ಶಾಸಕರ ಭವನದಲ್ಲಿ 100 ಕೊಠಡಿಗಳನ್ನು ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಅದರಂತೆ ಶಾಸಕರ ಭವನ ನಿರ್ಮಿಸುವುದಾಗಿ ಸ್ಪೀಕರ್ ಕೋಳಿವಾಡ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com