ಹಳೆಯ ಮೈಸೂರು ಭಾಗದ ದಲಿತ ಮತಗಳ ಮೇಲೆ ಶ್ರೀನಿವಾಸ್ ಪ್ರಸಾದ್ ಹಿಡಿತ?

ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭೆ ಉಪ ಚುನಾವಣೆಗಳಲ್ಲಿ ಬಿಜೆಪಿ ಸೋತಿದೆ. ಹಿರಿಯ ನಾಯಕ ಶ್ರೀನಿವಾಸ್ ಪ್ರಸಾದ್ ಹಳೆಯ ಮೈಸೂರು ಭಾಗ...
ಶ್ರೀನಿವಾಸ ಪ್ರಸಾದ್
ಶ್ರೀನಿವಾಸ ಪ್ರಸಾದ್
ಮೈಸೂರು: ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭೆ ಉಪ ಚುನಾವಣೆಗಳಲ್ಲಿ ಬಿಜೆಪಿ ಸೋತಿದೆ. ಹಿರಿಯ ನಾಯಕ ಶ್ರೀನಿವಾಸ್ ಪ್ರಸಾದ್ ಹಳೆಯ ಮೈಸೂರು ಭಾಗದ ದಲಿತರ ಮೇಲೆ ತಮ್ಮ ಹಿಡಿತ ಹೊಂದಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.
ಉಪಚುನಾವಣೆಯಲ್ಲಿ ಜಯಗಳಿಸುವುದಕ್ಕಿಂತಲೂ ಹೆಚ್ಚಿಗೆ, ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬಲಹೀನವಾಗಿರುವ ಕ್ಷೇತ್ರಗಳಲ್ಲಿ ಶ್ರೀನಿವಾಸ್ ಪ್ರಸಾದ್ ದಲಿತರ ಮೇಲಿನ ಹಿಡಿತ ಸಹಾಯಕ್ಕೆ ಬರಲಿದೆ.
ಚಾಮರಾಜನಗರ, ಮೈಸೂರು, ಮಂಡ್ಯ ಮತ್ತು ಹಾಸನಗಳಲ್ಲಿರುವ ದಲಿತ ಸಮುದಾಯ ಶ್ರೀನಿವಾಸ್ ಪ್ರಸಾದ್ ಅವರನ್ನು ಬೆಂಬಲಿಸುತ್ತದೆ. ಆದರೆ ನಂಜನಗೂಡು ಉಪ ಚುನಾವಣೆಯ ಮತದಾನದಲ್ಲಿ ಬೂತ್ ಮಟ್ಟದದಲ್ಲಿ ಮತ ಪಡೆಯಲು ಶ್ರೀನಿವಾಸ್ ಪ್ರಸಾದ್ ವಿಫಲರಾಗಿದ್ದಾರೆ ಎಂದು ವಿಶ್ಲೇಷಿಲಾಗುತ್ತಿದೆ. 
ಶೇ.75-80 ರಷ್ಟು ದಲಿತರು ಶ್ರೀನಿವಾಸ್ ಪ್ರಸಾದ್ ಗೆ ಮತ ಚಲಾಯಿಸುತ್ತಾರೆ ಎಂದು ನಂಬಲಾಗಿತ್ತು, ಆದರೆ ಕೇವಲ 55-60 ರಷ್ಟು ದಲಿತರು ಮಾತ್ರ ಮತ ಚಲಾಯಿಸಿದ್ದಾರೆ. ನಂಜನಗೂಡಿವ ಅಶೋಕಪುರಂ ಮತ್ತು ಶ್ರೀರಾಮಪುರ ದಲಿತ ಕಾಲೋನಿಗಳಲ್ಲಿ ಶೇ.80 ರಷ್ಚು ಮತ ಕಾಂಗ್ರೆಸ್ ಪರ ಚಲಾವಣೆಗೊಂಡಿವೆ.
ಲಿಂಗಾಯತ ಸಮುದಾಯದ ಪ್ರಾಬಲ್ಯವಿರು ಬದನವಾಳು  ಮತ್ತು ದೇವನೂರುಗಳಲ್ಲಿ ಬಿಜೆಪಿ 75-80 ರಷ್ಚು ಮತದಾನ ಆಗಲಿದೆ ಎಂಗು ನಿರೀಕ್ಷಿಸಲಾಗಿತ್ತು. ಆದರೆ ಬದನವಾಳು ಜಾತಿ ಸಂಘರ್ಷದ ಕಾರಣ ಅಲ್ಲಿ ಶ್ರೀನಿವಾಸ್ ಪ್ರಸಾದ್ ಗೆ ಹೆಚ್ಚಿನ ಮತಗಳು ದೊರಕಲಿಲ್ಲ. 
ತಮ್ಮದೇ ಕ್ಷೇತ್ರದಲ್ಲಿ ಶ್ರೀನಿವಾಸ್ ಪ್ರಸಾದ್ ತಮ್ಮದೇ ಸಮುದಾಯದ ದಲಿತರ ಮೇಲೆ ಹೆಚ್ಚಿನ ಹಿಡಿತ ಸಾಧಿಸಿಲ್ಲ, ಹೀಗಾಗಿ 2018ರ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ದಿಸುವ ಬೇರೆ ಅಭ್ಯರ್ಥಿಗಳಿಗೆ ಸಹಾಯ ಆಗಲಿದೆಯೆ ಎಂಬುದರ ಬಗ್ಗೆ ಸಂಶಯ ಮೂಡಿದೆ. 
ಕೃಷ್ಣರಾಜಪುರ, ಚಾಮರಾಜ, ಎಚ್ ಡಿ ಕೋಟೆ, ಸೇರಿದಂತೆ ಇನ್ನಿತರ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಕಡಿಮೆ ಅಂತರದಲ್ಲಿ ಸೋಲನುಭವಿಸಿತ್ತು, ಶ್ರೀನಿವಾಸ್ ಪ್ರಸಾದ್ ಈಗ ಬಿಜೆಪಿ ಸೇರ್ಪಡೆಯಾಗಿರುವುದರಿಂದ ಈ ಕ್ಷೇತ್ರಗಳಲ್ಲಿ ಮತ ಸೆಳೆಯಲು ಸಹಾಯವಾಗುತ್ತದೆ ಎಂದು ವರುಣಾ ಕ್ಷೇತ್ರದ ಬಿಜೆಪಿ ಮುಖಂಡರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
ಗುಂಡ್ಲುಪೇಟೆಯಲ್ಲಿ 2 ದಿನ ಪ್ರಚಾರ ನಡೆಸುವುದಾಗಿ ಅವರು ಹೇಳಿದ್ದರು, ಆದರೆ ಕೇವಲ ಒಂದು ಭಾಷಣ ಮಾಡಿ ಹೊರಟರು, ದಲಿತರ ಕಾಲೋನಿಗೆ ತೆರಳಿ ಅವರು ಮತಯಾಚಿಸಲಿಲ್ಲ. ಜೊತೆಗೆ ಮುಂದಿನ ಚುನಾವಣೆಯಲ್ಲಿ ನಿವೃತ್ತಿ ಘೋಷಿಸಿದ್ದರಿಂದ ಅದು ಕೂಡ ಪರಿಣಾಮ ಬೀರಿದೆ ಎಂದು ಅವರು ತಿಳಿಸಿದ್ದಾರೆ.
ಯಾವುದೇ ದಲಿತ ಮುಖಂಡ ಬಿಜೆಪಿ ಪರವಾಗಿ ನಿಂತು ದಲಿತರ ಮತ ಗಳಿಸುವುದು ಸುಲಭವಲ್ಲ, ವಿದ್ಯಾವಂತ ದಲಿತ ಮತದಾರರು ಬಿಜೆಪಿ ಮೇಲ್ವರ್ಗದ ಪಕ್ಷ ಎಂಬ ಭಾವನೆ ಹೊಂದಿದ್ದಾರೆ ಈ ಮನಸ್ಥಿತಿ ಬದಲಾಗಲು ಕೆಲ ವರ್ಷಗಳೇ ಬೇಕಾದಿತು ಎಂದು ಅವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com