ಕೆಂಪುದೀಪ ನಾನೇಕೆ ತೆಗೆಯಬೇಕು; ಮೇ 1ರಿಂದ ತಾನೆ: ಸಿಎಂ ಸಿದ್ದರಾಮಯ್ಯ ಪ್ರಶ್ನೆ?

ವಿಐಪಿ ವಾಹನಗಳ ಮೇಲಿನ ಕೆಂಪು ದೀಪ ಬಳಕೆಗೆ ಕೇಂದ್ರ ಸರ್ಕಾರ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಅನೇಕ ಸರ್ಕಾರಿ ಅಧಿಕಾರಿಗಳು ಮತ್ತು ಹಲವು ಜನಪ್ರತಿನಿಧಿಗಳು ...
ಸಿದ್ದರಾಮಯ್ಯ
ಸಿದ್ದರಾಮಯ್ಯ
ಬೆಂಗಳೂರು: ವಿಐಪಿ ವಾಹನಗಳ ಮೇಲಿನ ಕೆಂಪು ದೀಪ ಬಳಕೆಗೆ ಕೇಂದ್ರ ಸರ್ಕಾರ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಅನೇಕ ಸರ್ಕಾರಿ ಅಧಿಕಾರಿಗಳು ಮತ್ತು ಹಲವು ಜನಪ್ರತಿನಿಧಿಗಳು ಈಗಾಗಲೇ ತಮ್ಮ ವಾಹನಗಳ ಮೇಲಿನ ಕೆಂಪು ದೀಪ ತೆಗೆಸಿದ್ದಾರೆ, ಆದರೆ ಕೇಂದ್ರ ಸರ್ಕಾರದ ಈ ನಿರ್ಧಾರವನ್ನು  ಸಿಎಂ ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. 
ನೀವು ಯಾವಾಗ ನಿಮ್ಮ ವಾಹನದ ಮೇಲಿನ ಕೆಂಪು ದೀಪ ತೆಗೆದು ಹಾಕಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ನಾನೇಕೆ ಕೆಂಪು ದೀಪ ತೆಗೆಸಲಿ ಎಂದು ಮರು ಪ್ರಶ್ನೆ ಹಾಕಿದ್ದಾರೆ, ಕೂಡಲೇ ತಮ್ಮ ತಪ್ಪನ್ನು ಸರಿ ಮಾಡಲು ಮುಂದಾದ ಸಿದ್ದರಾಮಯ್ಯ ಕೆಂಪು ದೀಪ ತೆಗೆಸಲು ಮೇ 1 ರವರೆಗೂ ಸಮಯವಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಯಾರು ಕೆಂಪು ದೀಪ ತೆಗೆಯಲು ಹೇಳಿದ್ದು ಎಂದು ಸಿಎಂ ತಮ್ಮ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ, ಇದಕ್ಕೆ ಉತ್ತರಿಸಿದ ಸಿಬ್ಬಂದಿ, ಕೇಂದ್ರ ಸರ್ಕಾರದ ಆದೇಶದ ಮೇರೆಗೆ ತೆಗೆಯಲಾಗಿದೆ ಎಂದು ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆ. 
ವಿಐಪಿ ಸಂಸ್ಕೃತಿಗೆ ಕಡಿವಾಣ ಹಾಕಲು ಮುಂದಾಗಿರುವ ಕೇಂಗ್ರ ಸರ್ಕಾರ ಏಪ್ರಿಲ್ 19 ರಂದು ಎಲ್ಲಾ ಜನಪ್ರತಿನಿಧಿಗಳ ಹಾಗೂ ಸರ್ಕಾರಿ ಅಧಿಕಾರಿಗಳ ವಾಹನಗಳ ಮೇಲಿರುವ ಕೆಂಪು ದೀಪವನ್ನು ನಿಷೇಧಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com