ಡಿಕೆಶಿಗೆ ಅಹ್ಮದ್ ಪಟೇಲ್ ಗೆಲುವಿನ ಉಡುಗೊರೆ; ಬದಲಾಗುತ್ತಾ 'ಪವರ್ ಮಿನಿಸ್ಟರ್' ರಾಜಕೀಯ ಭವಿಷ್ಯ?

ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಆಪ್ತ ಅಹ್ಮದ್ ಪಟೇಲ್ ಗೆಲುವಿನ ರೂವಾರಿಯಾಗಿರುವ ಡಿ.ಕೆ ಶಿವಕುಮಾರ್ ಗೆ...
ಸಮಾರಂಭದಲ್ಲಿ ಭಾಗವಹಿಸಿದ್ದ ಸಿಎಂ, ಪರಮೇಶ್ವರ್ ಮತ್ತು ಶಿವಕುಮಾರ್
ಸಮಾರಂಭದಲ್ಲಿ ಭಾಗವಹಿಸಿದ್ದ ಸಿಎಂ, ಪರಮೇಶ್ವರ್ ಮತ್ತು ಶಿವಕುಮಾರ್
Updated on
ಬೆಂಗಳೂರು: ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಆಪ್ತ ಅಹ್ಮದ್ ಪಟೇಲ್ ಗೆಲುವಿನ ರೂವಾರಿಯಾಗಿರುವ ಡಿ.ಕೆ ಶಿವಕುಮಾರ್ ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. 
ಕರ್ನಾಟಕದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುತ್ತಿದ್ದ ಶಿವಕುಮಾರ್ ಗೆ ಈ ಗೆಲುವು ಮತ್ತಷ್ಟು ಬಲ ತಂದುಕೊಟ್ಟಿದೆ. ಪಟೇಲ್ ಗೆಲುವಿಗೆ ಶ್ರಮಿಸಿ ಡಿಕೆಶಿಗಯನ್ನು ಹೈಕಮಾಂಡ್ ಹಾಡಿ ಹೊಗಳಿದೆ. ನಿಮ್ಮ ಕೆಲಸ ಹಾಗೂ ಸಮರ್ಪಣಾ ಭಾವ ಅಮಿತ್ ಶಾ ಮತ್ತು ಮೋದಿ ರಾಜಕೀಯ ತಂತ್ರಗಾರಿಕೆ ವಿರುದ್ಧ ಗೆಲ್ಲಲು ಸಾಧ್ಯವಾಯಿತು ಎಂದು ಹೇಳಿ ಸೋನಿಯಾ ಮತ್ತು ಅಹ್ಮದ್ ಪಟೇಲ್ ಶಿವಕುಮಾರ್ ಬೆನ್ನು ತಟ್ಟಿದ್ದಾರೆ.
ಹೈ ಕಮಾಂಡ್ ಗೆ ಕೊಟ್ಟ ಮಾತನ್ನು ಡಿ.ಕೆ ಶಿವಕುಮಾರ್ ಉಳಿಸಿಕೊಂಡಿದ್ದಾರೆ. ಪಕ್ಷ ತಮಗೆ ವಹಿಸಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿರುವುದಾಗಿ ಡಿಕೆಶಿ ಹೇಳಿದ್ದಾರೆ. ಚುನಾವಣಾ ಆಯೋಗ ಎಲ್ಲಾ ರಾಜಕೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಿದೆ. 
ಬಿಹಾರ ವಿಧಾನಸಭೆ ಚುನಾವಣೆ ಉಸ್ತುವಾರಿ ವಹಿಸಿದ್ದ ಶಿವಕುಮಾರ್ ಅವರನ್ನು ಹೈಕಮಾಂಡ್ ಹೊಗಳಿತ್ತು. ಈಗ ಗುಜರಾತ್ ಗೆಲುವು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಶಿವಕುಮಾರ್ ಗೆ ರಾಜಕೀಯ ಜೀವನದ ಭವಿಷ್ಯ ಬದಲಾಯಿಸುವ ಸಾಧ್ಯತೆಯಿದೆ. ಈ ಗೆಲುವು ಡಿಕೆಶಿದೆ ಮತ್ತಷ್ಟು ನೈತಿಕ ಬಲ ತುಂಬಿದೆ. 
ಗುಜರಾತ್ ಗೆಲುವಿನ ಉಡುಗೊರೆಯಾಗಿ ಶಿವಕುಮಾರ್ ಗೆ ಗೃಹಖಾತೆ ಹೊಣೆ ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಆದರೆ ಚುನಾವಣೆ ಇನ್ನೇನು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಒಪ್ಪದ ಡಿಕೆಶಿ ಮತ್ತಷ್ಟು ಚೌಕಾಶಿ ಮಾಡಲು ತಯಾರಾಗುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ನ ಸೂಪರ್ ಶೋ ಮ್ಯಾನ್ ಇಮೇಜ್ ಪಡೆದುಕೊಳ್ಳಲು ಡಿಕೆಶಿ ಸತ ಪ್ರಯತ್ನ ಮುಂದುವರಿಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com