ಚುನಾವಣೆ: ಬದಲಾಗುತ್ತಿದೆ ಮತದಾರನ ಚಿಂತನೆ; ಹೊಸ ತಂತ್ರಗಾರಿಕೆಗೆ ರಾಜ್ಯ ಕಾಂಗ್ರೆಸ್ ಮಂಥನ!

ಪ್ರಧಾನಿ ಮೋದಿ ಕೇಂದ್ರಬಿಂದುವಾಗಿಸಿಕೊಂಡು ನಡೆಸುವ ಚರ್ಚೆಗಳಿಗೆ ಬ್ರೇಕ್ ಹಾಕಿ ಇಂದಿರಾಗಾಂಧಿ ಪರಂಪರೆ ಮತ್ತು ಸ್ಥಳೀಯ ಸಮಸ್ಯೆಗಳ ಬಗ್ಗೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು:  ಅವಧಿಗೂ ಮುನ್ನ ರಾಜ್ಯ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ತಳ್ಳಿ ಹಾಕಿರುವ ಸಿಎಂ ಸಿದ್ದರಾಮಯ್ಯ ಚುನಾವಣಾ ರಣತಂತ್ರ ರೂಪಿಸುವಲ್ಲಿ ನಿರತರಾಗಿದ್ದಾರೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಅಮಿತ್ ಶಾ ರೀತಿಯ ಟ್ರ್ಯಾಕ್ ಬದಲಿಸಿರುವ ಸಿದ್ದರಾಮಯ್ಯ ಮತ್ತವರ ಪಕ್ಷದ ಮುಖಂಡರು ಬಹು ಪದ್ಧತಿಯ ತಂತ್ರ ರಚಿಸುತ್ತಿದ್ದಾರೆ. ಪ್ರಧಾನಿ ಮೋದಿ ಕೇಂದ್ರಬಿಂದುವಾಗಿಸಿಕೊಂಡು ನಡೆಸುವ ಚರ್ಚೆಗಳಿಗೆ ಬ್ರೇಕ್ ಹಾಕಿ ಇಂದಿರಾಗಾಂಧಿ ಪರಂಪರೆ ಮತ್ತು ಸ್ಥಳೀಯ ಸಮಸ್ಯೆಗಳ ಬಗ್ಗೆ ಹೆಚ್ಚು ಒತ್ತು ನೀಡಲು ನಿರ್ಧರಿಸಿದೆ.
ಕಳೆದ ಕೆಲವು ವಾರಗಳಿಂದ ಕಾಂಗ್ರೆಸ್ ತನ್ನ ಚುನಾವಣಾ ರಣತಂತ್ರ ಬದಲಾಯಿಸುವ ಸೂಚನೆ ನೀಡಿದೆ. ಇಂದಿರಾ ಗಾಂಧಿ ಹೆಸರಿನಲ್ಲಿ ಬಡವರಿಗೆ ಕಡಿಮೆ ಬೆಲೆಯಲ್ಲಿ ಊಟ ನೀಡುವುದರಿಂದ  ಇಂದಿರಾ ಅನುಯಾಯಿಗಳು ಪಕ್ಷಕ್ಕೆ ಹೆಚ್ಚಿನ ಬೆಂಬಲ ನೀಡಲಿದ್ದಾರೆ. ಇದು ಸರ್ಕಾರದ ಒಂದು ಚತುರ ನಡೆ ಎಂದೇ ಪರಿಗಣಿಸಲ್ಪಟ್ಟಿದೆ.
ಆದರೆ ಇದೇ ವಿಷಯವನ್ನು ಚುನಾವಣೆ ವರೆಗೂ ನಡೆಸಿಕೊಂಡು ಹೋಗುವುದು ಕಾಂಗ್ರೆಸ್ ಗೆ ದೊಡ್ಡ  ಸವಾಲಾಗಿದೆ. ಬಿಜೆಪಿ ಪ್ಯಾನ್ ಇಂಡಿಯಾ ಪ್ರೊಗ್ರೆಸ್, ರಾಷ್ಚ್ರೀಯತೆ, ದೇಶಭಕ್ತಿ ಬಗ್ಗೆ ದೆಹಲಿಯಲ್ಲಿ ಮಾತನಾಡುತ್ತಿದೆ. ಆದರೆ ಸಿಎಂ ಸಿದ್ದರಾಮಯ್ಯ ಸ್ಥಳೀಯ ವಿಷಯಗಳ ಬಗ್ಗೆ ಆದ್ಯತೆ ನೀಡಿ ಆ ಮೂಲಕ, ರಾಷ್ಟ್ರೀಯ ವಿಷಯಗಳಿಂದ ಗಮನವನ್ನು ಬೇರೆಡೆ ಸೆಳೆಯಲು ನಿರ್ಧರಿಸಿದ್ದಾರೆ.
ಮತ್ತೆ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲಾ ರೀತಿಯ ತಂತ್ರಗಳನ್ನ ನಡಸಲು ಸಿಎಂ ಸಿದ್ದರಾಮಯ್ಯ ಅವರಿಗೆ ಪಕ್ಷದ ಹೈಕಮಾಂಡ್ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಆದರೆ  ಬಿಜೆಪಿ ತಂತ್ರಗಾರಿಕೆ ರೂಪುಗೊಳ್ಳುವುದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಂದು ರಾಜಕೀಯ ವಿಶ್ಲೇಷಕ ಪ್ರೊ. ಸಂದೀಪ್ ಶಾಸ್ತ್ರಿ ಅಭಿಪ್ರಾಯವಾಗಿದೆ.
ಕಾಂಗ್ರೆಸ್ ತನ್ನ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳಲಿದೆ. ನೀರಾವರಿ, ಮೂಲಭೂತ ಸೌಕರ್ಯ ಅಭಿವೃದ್ಧಿ, ಸಮಾಜ ಕಲ್ಯಾಣ ಯೋಜನೆಗಳು, ಸಾಲಮನ್ನಾ ದಂತ ಸರ್ಕಾರದ ಜನಪ್ರಿಯ ಯೋಜನೆಗಳ ಬಗ್ಗೆ ಮಾತನಾಡಲಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಹೀಗಿದ್ದರೂ, ಕರಾವಳಿ ಭಾಗದಲ್ಲಿನ ಕೋಮು ಸಂಘರ್ಷ, ಪದೇ ಪದೇ ಐಎಎಸ್ -ಐಪಿಎಸ್ ಅಧಿಕಾರಿಗಳ ವರ್ಗಾವಣೆಯಂತ ವಿಷಯಗಳು ಸರ್ಕಾರದ ಬೆನ್ನಿಗೆ ಅಂಟಿಕೊಂಡಿವೆ. ಇನ್ನೂ ಭ್ರಷ್ಟಾಚಾರ ವಿರುದ್ಧದ ಸರ್ಕಾರದ ಹೋರಾಟವನ್ನು ಬಿಜೆಪಿ ಪ್ರಶ್ನಿಸಲಿದೆ, ಸಿದ್ದರಾಮಯ್ಯ ಸರ್ಕಾರ ಲೋಕಾಯುಕ್ತ ಅಧಿಕಾರವನ್ನು ಮೊಟಕುಗೊಳಿಸಿ ಎಸಿಬಿಗೆ ಜವಾಬ್ದಾರಿ ನೀಡಿದ ವಿಷಯವನ್ನು ಟಾರ್ಗೆಟ್ ಮಾಡಲು ಬಿಜಿಪಿ ನಿರ್ಧರಿಸಿದೆ.
ಸಮಾಜವನ್ನು ಒಡೆಯಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂಬ ಆರೋಪಕ್ಕೆ ಪುಷ್ಠಿ ನೀಡುವಂತೆ  ವೀರಶೈವ- ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಂತ  ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ಗೆ ಮತ್ತಷ್ಟು ಹಿನ್ನೆಡೆ ಉಂಟು ಮಾಡುವ ಸಾಧ್ಯತೆಯಿದೆ ಎಂದು ವೀರಶೈವ ಮಹಾಸಭಾ ಉಪಾಧ್ಯಕ್ಷ ಗುರುರಾಜ್ ಹುಣಸೀಮರದ್ ಅಭಿಮತ ವ್ಯಕ್ತ ಪಡಿಸಿದ್ದಾರೆ.
ಕಾಂಗ್ರೆಸ್ ಇಂದು 1970ರ ವಿರೋಧ ಪಕ್ಷದಂತಿದೆ, ಮತ್ತು ಬಿಜೆಪಿ 1970 ರಲ್ಲಿನ  ಕಾಂಗ್ರೆಸ್ ನಂತಿದೆ. ಕಾಂಗ್ರೆಸ್ ನ ತಂತ್ರಕ್ಕೆ ಬಿಜೆಪಿಯ ಪ್ರತಿತಂತ್ರ  ರಾಜಕೀಯ ಲಾಭಗಳನ್ನು ನಿರ್ಧರಿಸಲಿದೆ. ಇದೊಂದು ಉತ್ತಮ ಯೋಜಿತ ತಂತ್ರಗಾರಿಕೆಯಾಗಿದೆ ಎಂದು ಸಂದೀಪ್ ಶಾಸ್ತ್ರಿ ಅವರ ಅನಿಸಿಕೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com