ದಲಿತ ಯುವತಿಯನ್ನು ವಿವಾಹವಾಗಲು ರಾಹುಲ್ ಸಿದ್ದರಿದ್ದಾರಾ? ಗೋವಿಂದ ಕಾರಜೋಳ ಸವಾಲು

ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ನಡುವಿನ ವಿವಾಹ ಸಂಬಂಧಿತ ಹೇಳಿಕೆ ನಂತರ ಬಿಜೆಪಿ ಮತ್ತೊಬ್ಬ
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on: 
ಬೆಂಗಳೂರು: ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ನಡುವಿನ ವಿವಾಹ ಸಂಬಂಧಿತ ಹೇಳಿಕೆ ನಂತರ ಬಿಜೆಪಿ ಮತ್ತೊಬ್ಬ ಮುಖಂಡ ಗೋವಿಂದ ಕಾರಜೋಳ ರಾಹುಲ್ ಗಾಂಧಿ ಅವರನ್ನು ಕೆಣಕಿದ್ದಾರೆ.
ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ಸ್ಲಂ ಮೋರ್ಚಾ ರ್ಯಾಲಿಯಲ್ಲಿ ಮಾತನಾಡಿದ ಕಾರಜೋಳ, ಕಾಂಗ್ರೆಸ್ ಗೆ ದಲಿತರ ಮೇಲೆ ಅಷ್ಟೊಂದು ಕಾಳಜಿ ಇದ್ದರೇ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ದಲಿತ ಯುವತಿಯನ್ನು ವಿವಾಹವಾಗಲಿ, ನಾವು ಯುವತಿಯನ್ನು ಸಿದ್ಧಪಡಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ.
ದಲಿತ ಹೆಣ್ಣುಮಕ್ಕಳ ಜೊತೆಗಿನ ವಿವಾಹದ ಹೇಳಿಕೆ ಇದೇ ಮೊದಲಲ್ಲ, ಈ ಹಿಂದೆ  ಸಿಎಂ ಸಿದ್ದರಾಮಯ್ಯ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ದಲಿತರ ಮನೆಯಲ್ಲಿ ಊಟ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಟೀಕಿಸಿದ್ದರು, ನಿಜವಾಗಿಯೂ ಯಡಿಯೂರಪ್ಪ ಅವರಿಗೆ ದಲಿತರ ಬಗ್ಗೆ ಕಾಳಜಿ ಇದ್ದರೇ ಅವರ ಕುಟುಂಬದ ಸದಸ್ಯರೊಬ್ಬರಿಗೆ ದಲಿತ ಹೆಣ್ಣು ಮಗಳನ್ನು ತಂದು ವಿವಾಹ ಮಾಡಿಸಲಿ ಎಂದು ಹೇಳಿದ್ದರು. 
ಈ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು, ಇದಾದ ನಂತರ ಸಂಸದೆ ಶೋಭಾ ಕರಂದ್ಲಾಜೆ ಮತ್ತು ದಿನೇಶ್ ಗುಂಡುರಾವ್ ಪರಸ್ಪರ ಕೆಸೆರೆರಚಾಟ ನಡೆಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com