ಅಪ್ಪ,ಅಮ್ಮಂದಿರ ರಕ್ತದ ಪರಿಚಯ ಇಲ್ಲದವರು 'ಜಾತ್ಯಾತೀತರು': ಅನಂತ್ ಕುಮಾರ್ ಹೆಗ್ಡೆ

ಅಪ್ಪ,ಅಮ್ಮಂದಿರ ರಕ್ತದ ಪರಿಚಯ ಇಲ್ಲದವರು ಜಾತ್ಯಾತೀತರು ಮತ್ತು ವಿಚಾರವಾದಿಗಳು ಎಂದು ಹೇಳಿಕೊಳ್ಳುತ್ತಾರೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್...
ಅನಂತ್ ಕುಮಾರ್ ಹೆಗ್ಡೆ
ಅನಂತ್ ಕುಮಾರ್ ಹೆಗ್ಡೆ
Updated on
ಕೊಪ್ಪಳ: ಅಪ್ಪ,ಅಮ್ಮಂದಿರ ರಕ್ತದ ಪರಿಚಯ ಇಲ್ಲದವರು ಜಾತ್ಯಾತೀತರು ಮತ್ತು ವಿಚಾರವಾದಿಗಳು ಎಂದು ಹೇಳಿಕೊಳ್ಳುತ್ತಾರೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 
ಕುಕನೂರಿನ ಮಹಾಮಾಯಾ ದೇವಸ್ಥಾನದ ಆವರಣದಲ್ಲಿ ನಡೆದ ಬ್ರಾಹ್ಮಣ ಯುವ ಪರಿಷತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅನಂತ್ ಕುಮಾರ್ ಹೆಗ್ಡೆ ಅವರು ಜಾತ್ಯಾತೀತರು, ವಿಚಾರವಾದಿಗಳು ಎಂದು ಹೇಳಿಕೊಳ್ಳುವವರಿಗೆ ಅಪ್ಪ, ಅಮ್ಮಂದಿರ ರಕ್ತದ ಪರಿಚಯವಿರುವುದಿಲ್ಲ ಎಂದು ಹೇಳಿದ್ದಾರೆ. 
ನಾನೊಬ್ಬ ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಎಂದು ಹೇಳಿದರೆ ಖುಷಿಯಾಗುತ್ತೆ. ಯಾಕೆಂದರೆ ಅವರಿಗೆ ಅವರ ತಂದೆ-ತಾಯಿಯ ಗುರುತಿರುತ್ತದೆ ಆದರೆ ಜಾತ್ಯಾತೀತರು ಎಂದು ಹೇಳಿಕೊಳ್ಳುವವರು ಹೆತ್ತ ತಂದೆ-ತಾಯಿಯ ರಕ್ತದ ಪರಿಚಯ ಇಲ್ಲದವರು ಎಂದು ಪ್ರಶ್ನೆ ಮಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com