ನಾನು ಹಿಂದೂ, ನನ್ನ ಹೆಸರಿನಲ್ಲಿ ರಾಮ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ನಾನು ಈ ಮಣ್ಣಿನ ಮಗ. ಹೊರ ರಾಜ್ಯದವರು ನನಗೆ ಈ ಮಣ್ಣಿನ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಬೋಧನೆ ಮಾಡಬೇಕಾಗಿಲ್ಲ. ನಾನು ಕೂಡ ಹಿಂದೂ...
ಹುಬ್ಬಳ್ಳಿಯಲ್ಲಿ ನಿನ್ನೆ ಸಾಧನ ಸಮಾವೇಶದಲ್ಲಿ ಜನರೆಡೆಗೆ ಕೈ ಬೀಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಹುಬ್ಬಳ್ಳಿಯಲ್ಲಿ ನಿನ್ನೆ ಸಾಧನ ಸಮಾವೇಶದಲ್ಲಿ ಜನರೆಡೆಗೆ ಕೈ ಬೀಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Updated on
ಹುಬ್ಬಳ್ಳಿ: ನಾನು ಈ ಮಣ್ಣಿನ ಮಗ. ಹೊರ ರಾಜ್ಯದವರು ನನಗೆ ಈ ಮಣ್ಣಿನ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಬೋಧನೆ ಮಾಡಬೇಕಾಗಿಲ್ಲ. ನಾನು ಕೂಡ ಹಿಂದೂ. ನನ್ನ ಹೆಸರಿನಲ್ಲಿ ಕೂಡ ರಾಮ ಇದೆ. ಬಿಜೆಪಿ ನಾಯಕರು ನನ್ನನ್ನು ಹಿಂದೂ ವಿರೋಧಿ ಎಂದು ಕರೆಯುವುದನ್ನು ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 
ಸಿಎಂ ಸಿದ್ದರಾಮಯ್ಯ ಹಿಂದೂ ವಿರೋಧಿ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಮತ್ತೊಮ್ಮೆ ಗುಡಿಗಿರುವ ಮುಖ್ಯಮಂತ್ರಿ,  ಬಿಜೆಪಿಯವರು ಮಾತ್ರವೇ ಹಿಂದೂಗಳಲ್ಲ, ನಾನೂ ಕೂಡ ಹಿಂದೂ. ನನ್ನ ಹೆಸರು ಸಿದ್ದರಾಮಯ್ಯ, ನನ್ನ ಹೆಸರಿನಲ್ಲಿ ರಾಮನ ಹೆಸರಿದೆ, ಹೀಗಾಗಿ ನಾನು ಹಿಂದೂ, ಬಿಜೆಪಿಯವರಷ್ಟೇ ಹಿಂದೂಗಳಲ್ಲ ಎಂದು ಹೇಳಿದ್ದಾರೆ. 
ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದಲ್ಲಿ ನಿನ್ನೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಹುಬ್ಬಳ್ಳಿ ಧಾರವಾಡ ಮಹಾ ನಗರ ಪಾಲಿಕೆಗೆ ಬಾರಿ ಇರುವ 130 ಕೋಟಿ ರೂಪಾಯಿ ಪಿಂಚಣಿ ಮೊತ್ತವನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಬಾಕಿ ಮೊತ್ತವನ್ನು ಆದಷ್ಟು ಶೀಘ್ರವೇ ಬಿಡುಗಡೆ ಮಾಡುವಂತೆ ಹಣಕಾಸು ಇಲಾಖೆ ಕಾರ್ಯದರ್ಶಿಗಳಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.
ಈ ವಿಷಯವನ್ನು ರಾಜಕೀಯ ಮಾಡಲು ಹೊರಟ ಬಿಜೆಪಿ ನಾಯಕರಿಗೆ ಸರ್ಕಾರ ದೊಡ್ಡ ಏಟು ನೀಡುತ್ತಿದೆ. ಜನರ ಗಮನ ಸೆಳೆಯಲು ಯತ್ನಿಸುತ್ತಿದ್ದ ಬಿಜೆಪಿ ನಾಯಕರಿಗೆ ಇದು ಖಂಡಿತಾ ನಿರಾಸೆಯಾಗುತ್ತದೆ. ವಿರೋಧ ಪಕ್ಷಗಳ ಜೊತೆ ಹೋರಾಡಲು ನಾನು ಸಿದ್ದ ಎಂದು ಹೇಳಿದರು.
ಹುಬ್ಬಳ್ಳಿಯ ಗಂಗಾಧರನಗರದಲ್ಲಿ ಹಾಕಿ ಕ್ರೀಡಾಂಗಣವನ್ನು ಮೇಲ್ದರ್ಜೆಗೇರಿಸಲು ಮುಖ್ಯಮತ್ರಿ 2 ಕೋಟಿ ರೂಪಾಯಿಗಳನ್ನು ಇದೇ ಸಂದರ್ಭದಲ್ಲಿ ಘೋಷಿಸಿದರು. ಅಲ್ಲದೆ ಹುಬ್ಬಳ್ಳಿ ನಗರದಲ್ಲಿ 2 ಸಾವಿರ ಆಶ್ರಯ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಪ್ರಕಟಿಸಿದರು.
ಕುಂಡಗೋಳದಿಂದ ಸಿ.ಎಸ್.ಶಿವಳ್ಳಿ ಮತ್ತು ಹುಬ್ಬಳ್ಳಿ-ಧಾರವಾಡ ಪೂರ್ವ ಭಾಗದಿಂದ ಪ್ರಸಾದ್ ಅಬ್ಬಯ್ಯ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು ಜನರು ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿಕೊಂಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com