
ಬೆಂಗಳೂರು: ರಾಜ್ಯದ ಆಡಳಿತರೂಢ ಕಾಂಗ್ರೆಸ್ ಸರ್ಕಾರ ಇನ್ನು ಏಳೆಂಟು ತಿಂಗಳಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಎಂಬ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಸಿಎಂ ಧನಂಜಯ, ಕುಮಾರಸ್ವಾಮಿಯವರನ್ನು 'ಹುಚ್ಚುಚ್ಚಾಗಿ ಎಗರಾಡುವ ಗೂಳಿ'ಗೆ ಹೋಲಿಸಿದ್ದಾರೆ.
ಹುಚ್ಚುಚ್ಚಾಗಿ ಎಗರಾಡುತ್ತಿರುವ ಗೂಳಿಯನ್ನು ಪಳಗಿಸುವುದು ಹೇಗೆಂದು ಕಾಂಗ್ರೆಸ್ ಗೆ ಗೊತ್ತಿದೆ. ಅವರ ಹೇಳಿಕೆಗಳು ಆಧಾರರಹಿತ ಎಂದು ಧನಂಜಯ ಪ್ರತಿಕ್ರಯಿಸಿದ್ದಾರೆ.
ಸ್ವತಃ ಜೆಡಿಎಸ್ ಪಕ್ಷವೇ ಇಬ್ಭಾಗವಾಗುವ ಅಪಾಯ ಸ್ಥಿತಿಯಲ್ಲಿದೆ. ಅವರದೇ ಪಕ್ಷದ ವಿಧಾನ ಪರಿಷತ್ ಸದಸ್ಯರೊಬ್ಬರು ಮಾಜಿ ಉಪ ಮುಖ್ಯಮಂತ್ರಿಯಿಂದ ಹಣವನ್ನು ಪಡೆದು ಈಗ ಬಿಜೆಪಿಗೆ ಪ್ರಚಾರ ಮಾಡುತ್ತಿದ್ದಾರೆ. ಕುಮಾರಸ್ವಾಮಿಯವರು ತಮ್ಮ ಪಕ್ಷವನ್ನು ಮೊದಲು ನೋಡಿಕೊಳ್ಳಲಿ ಎಂದು ಧನಂಜಯ ಹೇಳಿದರು.
Advertisement