ಗುಂಡ್ಲುಪೇಟೆ ವಿಧಾನಸಭೆ ಉಪಚುನಾವಣೆ: ಗೀತಾ ಮಹದೇವ ಪ್ರಸಾದ್ ಕಾಂಗ್ರೆಸ್ ಅಭ್ಯರ್ಥಿ?

ಸಚಿವ ಎಚ್ ಎಸ್ ಮಹಾದೇವ್ ಪ್ರಸಾದ್ ಅವರ ನಿಧನದಿಂದ ತೆರವಾಗಿರುವ ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರಕ್ಕೆ ಗೀತಾ ಮಹಾದೇವ್ ಪ್ರಸಾದ್ ...
ಮಹದೇವ ಪ್ರಸಾದ್
ಮಹದೇವ ಪ್ರಸಾದ್

ಮೈಸೂರು: ಸಚಿವ  ಎಚ್ ಎಸ್ ಮಹಾದೇವ್ ಪ್ರಸಾದ್ ಅವರ ನಿಧನದಿಂದ ತೆರವಾಗಿರುವ ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರಕ್ಕೆ ಗೀತಾ ಮಹಾದೇವ್ ಪ್ರಸಾದ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಸಂಪುಟ ಸಚಿವರು ನಿನ್ನೆ  ಗುಂಡ್ಲಪೇಟೆಯಲ್ಲಿ ನಡೆದ ದಿವಂಗತ ಮಹಾದೇವ್ ಪ್ರಸಾದ್ ಅವರ 1 ನೇ ತಿಂಗಳ ಪುಣ್ಯತಿಥಿಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಶ್ರದ್ದಾಂಜಲಿ ಸಲ್ಲಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜನರ ಆಶಯದಂತೆ ಗುಂಡ್ಲಪೇಟೆ ವಿಧಾನ ಸಭೆ ಉಪ ಚುನಾವಣೆಗೆ ಗೀತಾ ಮಹದೇವ್ ಪ್ರಸಾದ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಿದ್ದಾರೆ.

ನಿಮ್ಮ ನಾಯಕ ಮಹಾಹೇವ್ ಪ್ರಸಾದ್ ಅವರಿಗೆ ನೀವು ನಿಮ್ಮ ನಾಯಕನಿಗೆ ಗೌರವ ಸೂಚಿಸಬೇಕಾದರೆ ಉಪ ಚುನಾವಣೆಯಲ್ಲಿ ನೀವು ಗೀತಾ ಅವರನ್ನು ಬೆಂಬಲಿಸಬೇಕೆಂದು ಸಿದ್ದರಾಮಯ್ಯ ಹೇಳಿದ್ದಾರೆ, ಈ ವೇಳೆ ಎದ್ದು ನಿಂತ ಗೀತಾ ನೆರೆದಿದ್ದ ಜನ ಸಮೂಹಕ್ಕೆ ಕೈಮುಗಿದು ನಮನ ಸಲ್ಲಿಸಿದರು. ಜೆಎಸ್ ಎಸ್ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿ ಮತ್ತಿತ್ತರ ಸ್ವಾಮೀಜಿಗಳು ಹಾಜರಿದ್ದರು.

ಉಪ ಚುನಾವಣೆಗೂ ಮೊದಲು ಗೀತಾ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಹಿರಿಯ ವೀರಶೈವ ಮುಖಂಡ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com