ವಿಶೇಷ ವಿಮಾನದಲ್ಲಿ ಹೈಕಮಾಂಡ್ ಗೆ ಹಣ ರವಾನೆ: ಕುಮಾರಸ್ವಾಮಿ

ಹೈಕಮಾಂಡ್‌ಗೆ ಹಣ ತಲುಪಿಸಲು ಕಾಂಗ್ರೆಸ್‌ನವರು ನವದೆಹಲಿಗೆ ವಿಶೇಷ ವಿಮಾನದಲ್ಲೇ ಪ್ರಯಾಣ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ...
ಎಚ್.ಡಿ ಕುಮಾರ ಸ್ವಾಮಿ
ಎಚ್.ಡಿ ಕುಮಾರ ಸ್ವಾಮಿ

ಬೆಂಗಳೂರು: ಹೈಕಮಾಂಡ್‌ಗೆ ಹಣ ತಲುಪಿಸಲು  ಕಾಂಗ್ರೆಸ್‌ನವರು ನವದೆಹಲಿಗೆ ವಿಶೇಷ ವಿಮಾನದಲ್ಲೇ ಪ್ರಯಾಣ ಮಾಡುತ್ತಾರೆ ಎಂದು  ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಪಕ್ಷದ ಕೋರ್ ಕಮಿಟಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳಿಗೆ ಕರ್ನಾಟಕ ಮೇವಿನ ಮೈದಾನವಾಗಿದೆ. ಜನರ ತೆರಿಗೆ ಹಣದಲ್ಲಿ ಯೋಜನೆ ರೂಪಿಸಿ ಅದನ್ನು ಲೂಟಿ ಹೊಡೆಯುವ ಕೆಲಸ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಕರ್ನಾಟಕ ಅಭಿವೃದ್ಧಿ ಹೊಂದುತ್ತಿದೆ ಎಂದು ಹಣಕಾಸು ಸಚಿವ ಜೈಟ್ಲಿ ಹೇಳಿರುವುದು ರಾಜ್ಯದಲ್ಲಿ ಹಣ ಇದೆ ಎಂಬ ಅರ್ಥದಲ್ಲಿ ಎಂದು ಕುಮಾರಸ್ವಾಮಿ ಟೀಕಿಸಿದರು. ಹೋದ ಕಡೆಯಲ್ಲೆಲ್ಲ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಪ್ರಧಾನಿ ಮೋದಿ ಕರ್ನಾಟಕದ ಸ್ಥಿತಿಯನ್ನು ಖುದ್ದು ನೋಡಿದರೆ ಎರಡೂ ಪಕ್ಷಗಳನ್ನು ಬಿಟ್ಟು ಜೆಡಿಎಸ್‌ಗೆ ಮತ ನೀಡಿ ಎಂದು ಕೇಳಬಹುದು ಎಂದರು.

ಎರಡು ಪಕ್ಷಗಳು ರಾಜ್ಯವನ್ನು ಹಾಳು ಮಾಡಿವೆ .ನಿತ್ಯ ಸಾಕಷ್ಟು ವಿಮಾನಗಳು ದೆಹಲಿಗೆ ಹೋಗುತ್ತವೆ. ಆ ವಿಮಾನಗಳಲ್ಲಿ ಹಣ ಸಾಗಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ  ವಿಶೇಷ ವಿಮಾನದಲ್ಲಿ ಪ್ರಯಾಣಿಸುತ್ತಾರೆ. ಪ್ರತಿ ಬಾರಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಆಯ್ದ ಕೆಲವರು ಮಾತ್ರ ಹೋಗುತ್ತಾರೆ ಎಂದು ಆರೋಪಿಸಿದ್ದಾರೆ. ವ್ಯಾಪಾರಿಗಳಿಗೆ ಮಾತ್ರ ಕಾಂಗ್ರೆಸ್‌ನಲ್ಲಿ ಮಣೆ ಹಾಕಲಾಗುತ್ತದೆ ಎಂದು  ರಮೇಶ್‌ಕುಮಾರ್ ಅವರು ಮಂತ್ರಿ ಆಗುವ ಮುನ್ನ ಹೇಳಿಕೆ ನೀಡಿದ್ದರು. ಸೂಟ್‌ಕೇಸ್ ಇದ್ದವರಿಗೆ ಮಾತ್ರ ಮಂತ್ರಿ ಸ್ಥಾನ ಎಂಬ ಮಾತುಗಳು ನಿಜವಾಗುತ್ತಿವೆ ಎಂದು ಆಪಾದಿಸಿರುವ ಕುಮಾರಸ್ವಾಮಿ

ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ನ ಹಾಲಿ 33 ಶಾಸಕರಿಗೂ ಟಿಕೆಟ್ ನೀಡಲಾಗುವುದು. ಮಾರ್ಚ್ 15ರಂದು ಜೆಡಿಎಸ್‌ ಹೊಸ ಕಚೇರಿ ಉದ್ಘಾಟನೆಯಾಗಲಿದೆ, ಅಂದು ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com