ಶೀಘ್ರವೇ ಕಾಂಗ್ರೆಸ್ ಗೆ ಸತೀಶ್ ಜಾರಕಿಹೊಳಿ ಗುಡ್ ಬೈ?

ಮಾಜಿ ಸಚಿವ ಸತೀಶ್ ಜಾರಕಿಹೊಳಿ ಶೀಘ್ರವೇ ಕಾಂಗ್ರೆಸ್ ತೊರೆದು ಬೇರೆ ಪಕ್ಷಕ್ಕೆ ಸೇರಲಿದ್ದಾರೆ ಎನ್ನಲಾಗಿದೆ. ಬೆಳಗಾವಿ ಎಪಿಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್ ...
ಸತೀಶ್ ಜಾರಕಿಹೊಳಿ, ಲಕ್ಷ್ಮಿ ಮತ್ತು ರಮೇಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ, ಲಕ್ಷ್ಮಿ ಮತ್ತು ರಮೇಶ್ ಜಾರಕಿಹೊಳಿ
Updated on: 

ಬೆಳಗಾವಿ: ಮಾಜಿ ಸಚಿವ ಸತೀಶ್ ಜಾರಕಿಹೊಳಿ ಶೀಘ್ರವೇ ಕಾಂಗ್ರೆಸ್ ತೊರೆದು ಬೇರೆ ಪಕ್ಷಕ್ಕೆ ಸೇರಲಿದ್ದಾರೆ ಎನ್ನಲಾಗಿದೆ. ಬೆಳಗಾವಿ ಎಪಿಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಜಾರಕಿಹೊಳಿ ಪರೋಕ್ಷ ಕಾರಣವಾಗಿದ್ದರು.

ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲಿ 2013 ರ ಚುನಾವಣೆಯಲ್ಲಿ ಸೋಲನುಭವಿಸಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತೆ ಅದೇ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ. ಎಪಿಎಂಸಿ ಚುನಾವಣೆಯಲ್ಲಿ ಆರು ಕಾಂಗ್ರೆಸ್ ಸದಸ್ಯರ ಗೆಲುವಿಗೆ ಲಕ್ಷ್ಮಿ ಕಾರಣರಾಗಿದ್ದರು.

ಇತ್ತೀಚೆಗೆ ಸಚಿವ ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್  ಮನೆ ಮೇಲೆ ನಡೆದ ಆದಾಯ ತೆರಿಗೆ ದಾಳಿ, ಸತೀಶ್ ಜಾರಕಿಹೊಳಿ ಜೊತೆಗಿನ ರಾಜಕೀಯ ಸಂಬಂಧ ಹಳಸಲು ಕಾರಣವಾಯಿತು.

ಎಪಿಎಂಸಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕೇವಲ ಮೂರು ಹೆಚ್ಚುವರಿ ವೋಟುಗಳ ಬೇಕಿತ್ತು. ಲಕ್ಷ್ಮಿ ಮತ್ತು ರಮೇಶ್ ತಮ್ಮ ಬೆಂಬಲಿಗ ಅಭ್ಯರ್ಥಿಗಳಿಗೆ ಅಧಿಕಾರ ಸಿಗಲಿದೆ ಎಂಬ ವಿಶ್ವಾಸದಲ್ಲಿದ್ದರು. ಆದರೆ ಸತೀಶ್ ಜಾರಕಿಹೊಳಿ ಎಂಇಎಸ್ ಶಾಸಕ ಸಂಜಯ್ ಪಾಟೀಲ್ ಮತ್ತು ಮಾಜಿ ಮೇಯರ್ ಸುಂಟ್ಕರ್ ಅವರ ಜೊತೆ ಕೈ ಜೋಡಿಸಿದ ಕಾರಣ, ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿತ ಅಭ್ಯರ್ಥಿ ಸೋಲನುಭವಿಸಿದರು.

ಸತೀಶ್ ಜಾರಕಿಹೊಳಿ ಈ ನಡೆ ಕಾಂಗ್ರೆಸ್ ಮತ್ತು ಬಿಜೆಪಿಗಳಿಗೆ ಆಘಾತ ತಂದಿತು. ಒಂದು ವೇಳೆ ಪಕ್ಷ ತೊರೆದು ಸತೀಶ್ ಜಾರಕಿಹೊಳಿ ಜೆಡಿಎಸ್ ಸೇರಿದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಅವನತಿಯ ಹಾದಿ ಹಿಡಿಯುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com