ಬಿಜೆಪಿಯಿಂದಲೂ ಹೈಕಮಾಂಡ್ ಗೆ ಕಪ್ಪ: ಲೆಹರ್ ಸಿಂಗ್ ಮನೇಲಿ ಸಿಕ್ಕ ಡೈರಿ ಬಹಿರಂಗಪಡಿಸಿದ 'ಕೈ' ನಾಯಕರು

ರಾಜ್ಯ ಸರ್ಕಾರದ ಸಚಿವರು ಕಾಂಗ್ರೆಸ್ ಹೈಕಮಾಂಡ್ ಗೆ ಕಪ್ಪ ನೀಡಿದ ಡೈರಿ ಬಹಿರಂಗಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕರು 2013ರಲ್ಲಿ....
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್
ಬೆಂಗಳೂರು: ರಾಜ್ಯ ಸರ್ಕಾರದ ಸಚಿವರು ಕಾಂಗ್ರೆಸ್ ಹೈಕಮಾಂಡ್ ಗೆ ಕಪ್ಪ ನೀಡಿದ ಡೈರಿ ಬಹಿರಂಗಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕರು 2013ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಆಪ್ತ ಲೆಹರ್ ಸಿಂಗ್ ಮನೆ ಮೇಲೆ ನಡೆದಿ ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ಸಿಕ್ಕಿದೆ ಎನ್ನಲಾದ ಡೈರಿಯನ್ನು ಶನಿವಾರ ಬಿಡುಗಡೆ ಮಾಡಿದ್ದಾರೆ. 
ಇಂದು ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಎಚ್.ಎಂ.ರೇವಣ್ಣ, ರಾಜ್ಯ ಬಿಜೆಪಿ ನಾಯಕರಿಂದಲೂ ಹೈಕಮಾಂಡ್ ಗೆ ಕಪ್ಪ ಕಾಣಿಕೆ ಸಲ್ಲಿಕೆಯಾಗಿದೆ ಎಂದು ಆರೋಪಿಸಿದರು. ಬಿಜೆಪಿ ಹೈಕಮಾಂಡ್ ಕೂಡ 391 ಕೋಟಿ ಕಪ್ಪ ಕಾಣಿಕೆ ಸ್ವೀಕರಿಸಿರುವ ಡೈರಿ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದಾಗಿ ತಿಳಿಸಿದರು,
2013ರಲ್ಲಿ ಯಡಿಯೂರಪ್ಪ ಆಪ್ತ ಲೆಹರ್ ಸಿಂಗ್ ಮನೆ ಮೇಲೆ ಐಟಿ ದಾಳಿ ನಡೆಸಿದಿದ್ದಾಗ ಈ ಡೈರಿ ಸಿಕ್ಕಿತ್ತು ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿರುವ ಮಾಹಿತಿ ಪ್ರಕಾರ, ಕೋಟ್ಯಂತರ ರುಪಾಯಿ ಬಿಜೆಪಿ ಹೈಕಮಾಂಡ್ ಗೆ ಸಂದಾಯವಾಗಿದೆ ಎಂಬ ಅಂಕಿ, ಅಂಶ ಇದೆ. ಡೈರಿ ಮಾಹಿತಿ ಪ್ರಕಾರ ಬಿಎಸ್ ವೈಗೂ 69 ಕೋಟಿ ರುಪಾಯಿ ಸಂದಾಯವಾಗಿರುವ ಬಗ್ಗೆ ಉಲ್ಲೇಖವಿದೆ ಎಂದರು.
ಬಿಎಸ್ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಿನಾಮೆ ಕೇಳುವ ನೈತಿಕತೆ ಇಲ್ಲ. ಕಳೆದ ಡಿಸೆಂಬರ್ ನಿಂದಲೇ ಯಡಿಯೂರಪ್ಪ ಇದೇ ಆರೋಪ ಮಾಡುತ್ತ ಬಂದಿದ್ದರು. ಐಟಿ ದಾಳಿ ವೇಳೆ ಸಿಕ್ಕಿದ್ದ ಮಾಹಿತಿ ಗೌಪ್ಯವಾಗಿರಬೇಕೆಂದು ಇದೆ. ಆದರೆ ಆ ಮಾಹಿತಿ ಸೋರಿಕೆಯಾಗಿದ್ದು ಹೇಗೆ ಎಂದು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com