ಬಿಜೆಪಿ ಆರೋಪಗಳಿಗೆ ಸೂಕ್ತವಾಗಿ ಪ್ರತಿಕ್ರಯಿಸದ ರಾಜ್ಯ ಕಾಂಗ್ರೆಸ್ ಗೆ ಹಿನ್ನಡೆ ಸಾಧ್ಯತೆ: ರಾಜಕೀಯ ವಿಶ್ಲೇಷಣೆ

ಕಾಂಗ್ರೆಸ್ ಹೈಕಮಾಂಡ್ ಗೆ ಕಿಕ್ ಬ್ಯಾಕ್ ಹಾಗೂ ಸ್ಟೀಲ್ ಬ್ರಿಡ್ಜ್ ಗಾಗಿ ಸಿಎಂ ಕುಟುಂಬಕ್ಕೆ 65 ಕೋಟಿ ರು ಕಪ್ಪ ನೀಡಿರುವ ಆರೋಪ ಆಡಳಿತಾರೂಢ ಪಕ್ಷದ ...
ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ
ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ

ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಗೆ ಕಿಕ್ ಬ್ಯಾಕ್ ಹಾಗೂ ಸ್ಟೀಲ್ ಬ್ರಿಡ್ಜ್ ಗಾಗಿ ಸಿಎಂ ಕುಟುಂಬಕ್ಕೆ 65 ಕೋಟಿ ರು ಕಪ್ಪ ನೀಡಿರುವ ಆರೋಪ ಆಡಳಿತಾರೂಢ ಪಕ್ಷದ ನಿದ್ದೆಗೆಡಿಸಿದ್ದು, ಕಾಂಗ್ರೆಸ್ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಟಿವಿ ಚಾನೆಲ್ ಗಳಲ್ಲಿ ಯಾವಾಗಲೋ ಒಮ್ಮೆ ಸಿಎಂ ಹೇಳಿಕೆ, ಬಿಜೆಪಿ ನಾಯಕರುಗಳಾದ ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ನಡುವಿನ ಸಂಭಾಷಣೆ ಮತ್ತು ಲೆಹರ್ ಸಿಂಗ್ ಸಿರೋಯ ಡೈರಿಯ ವಿಚಾರಗಳ ಸಂಬಂಧ ಬಿಜೆಪಿ ವಿರುದ್ಧ ತಂತ್ರ ರೂಪಿಸಲು ಕಾಂಗ್ರೆಸ್  ಹಿಂದೆ ಬಿದ್ದಿದೆ. ಬಿಜೆಪಿ ನಾಯಕರುಗಳ ಆರೋಪಗಳ ಸುರಿಮಳೆಗೆ ಕಾಂಗ್ರೆಸ್ ನಾಯಕರು ಮಂಕಾಗಿದ್ದಾರೆ.

ಐಟಿ ಅಧಿಕಾರಿಗಳ ತನಿಖೆ ತಡೆದವರು ಯಾರು? ಡೈರಿಯಲ್ಲಿ ಅಂಥ ವಿಷಯಗಳ ಬಗ್ಗೆ ನಮೂದಾಗಿದ್ದರೇ ಯಾಕೆ ಕ್ರಮ ಕೈಗೊಳ್ಳಲಿಲ್ಲ. ನಮ್ಮ ಸರ್ಕಾರದ ಒಳ್ಳೆಯ ಕೆಲಸಗಳ ಬಗ್ಗೆ ಜನರನ್ನು ವಿಮುಖ ಗೊಳಿಸಲು ಬಿಜೆಪಿ ಈ ತಂತ್ರ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ಇತ್ತೀಚೆಗೆ ನಡೆದ ಕಾಂಗ್ರೆಸ್ ಪಕ್ಷದ ಸಮನ್ವಯ ಸಮಿತಿ ಸಭೆಯಲ್ಲಿ, ಬರ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳಿಗೆ ಒತ್ತು ನೀಡುವಂತೆ ಪಕ್ಷದ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಬಿಜೆಪಿ ವಿರುದ್ಧ ಪ್ರಚಾರ ಮಾಡಲು ಬ್ಲಾಕ್ ಮಟ್ಟದಲ್ಲಿ ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ.

ಸಿಎಂ ಸಿದ್ದರಾಮಯ್ಯ ಅವರನ್ನೇ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಯುತ್ತಿದೆ. ಬರ ಪರಿಹಾರ ಕಾಮಗಾರಿ ಕೈಗೊಳ್ಳಲು ಸರ್ಕಾರದ ವೈಫಲ್ಯತೆ ಹಾಗೂ ರಾಜಕೀಯ ತಂತ್ರಗಾರಿಕೆಗಳನ್ನು ಬಳಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಬಜೆಟ್ ಸೆಷನ್ ನಂತರ ಕಾಂಗ್ರೆಸ್ ನಾಯಕರು ಬ್ಲಾಕ್ ಮಟ್ಟದಲ್ಲಿ ಗುಂಪುಗೂಡಿ ಕಾಂಗೆಸ್ ಸರ್ಕಾರದ ಯಶಸ್ವಿ ಯೋಜನೆಗಳ ಬಗ್ಗೆ  ಚರ್ಚಿಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್ ಎಸ್ ಬೋಸೆರಾಜು ಹೇಳಿದ್ದಾರೆ.

ಡೈರಿಯ ಬಗ್ಗೆ ಆರೋಪಗಳ ಬಗ್ಗೆ ಸ್ವಲ್ಪ ಸಮಯ ವ್ಯಯಿಸಿ, ಸರ್ಕಾರದ ಜನಪ್ರಿಯ ಯೋಜನೆಗಳು ಹಾಗೂ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಲು ಹೆಚ್ಚು ಸಮಯ ಕೆಲಸ ಮಾಡಬೇಕು ಎನ್ನಲಾಗಿದೆ. ಬಿಜೆಪಿ ವಿರುದ್ಧ ಆಕ್ರಮಣಕಾರಿ ಯಾಗಿ  ವಾಗ್ದಾಳಿ ನಡೆಸಬೇಕಾದರೇ ನಮ್ಮ ಯೋಜನೆಗಳನ್ನು ಪ್ರಮೋಟ್ ಮಾಡುವಲ್ಲಿ ನಾವು ಹುರುಪಿನಿಂದ ಕೆಲಸ ಮಾಡಬೇಕು ಎಂದು ಅವರು ವಿವರಿಸಿದ್ದಾರೆ.

ಕಾಂಗ್ರೆಸ್ ನಾಯಕರು ಬರ ಹಾಗೂ ಅದರ ನಿರ್ವಹಣೆ ಮತ್ತು ಯೋಜನೆಗಳ ಬಗ್ಗೆ ಚರ್ಚಿಸಲು ನಿರತರಾಗಿದ್ದ ಕಾರಣ ಬಿಜೆಪಿ ವಿರುದ್ಧ ಪರಿಣಾಮಕಾರಿಯಾಗ ಪ್ರತ್ಯಾರೋಪ ಮಾಡಲು ಕಾಂಗ್ರೆಸ್ ವಿಫಲವಾಯಿತು ಎಂದು ತಿಳಿಸಿದ್ದಾರೆ.

ನಾವು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇವೆ, ಡೈರಿ ಗೋವಿಂದರಾಜು ಅವರಿಗೆ ಸೇರಿದ್ದಲ್ಲ, ನಾವು ಮೊದಲಿಗೆ ಸಿಡಿ ನಂತರ ಡೈರಿ ಬಿಡುಗಡೆ ಮಾಡಿದ್ದೇವೆ, ಅದಕ್ಕಿಂತಲೂ ಹೆಚ್ಚಿಗೆ ಮತ್ತೇನು ನಾವು ಮಾಡಬಹುದು ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com