ಹಳೆಯ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಗಿಲ್ಲ ವಿಶ್ವಾಸಾರ್ಹ ವೀರಶೈವ ಮುಖಂಡ

ಹಿರಿಯ ಸಚಿವ ಎಚ್ಎಸ್ ಮಹಾದೇವ ಪ್ರಸಾಗ್ ಅವರ ಅಕಾಲಿಕ ಮರಣದಿಂದಾಗಿ ಹಳೆಯ ಮೈಸೂರು ಭಾಗದಲ್ಲಿ ಪ್ರಬಲ ವೀರಶೈವ ಮುಖಂಡರು...
ಎಚ್. ಎಸ್ ಮಹಾದೇವ ಪ್ರಸಾದ್
ಎಚ್. ಎಸ್ ಮಹಾದೇವ ಪ್ರಸಾದ್
Updated on

ಮೈಸೂರು: ಹಿರಿಯ ಸಚಿವ ಎಚ್ಎಸ್ ಮಹಾದೇವ ಪ್ರಸಾಗ್ ಅವರ ಅಕಾಲಿಕ ಮರಣದಿಂದಾಗಿ ಹಳೆಯ ಮೈಸೂರು ಭಾಗದಲ್ಲಿ ಪ್ರಬಲ ವೀರಶೈವ ಮುಖಂಡರು ಇಲ್ಲದಂತ ಪರಿಸ್ಥಿತಿ  ಕಾಂಗ್ರೆಸ್ ಗೆ ನಿರ್ಮಾಣವಾಗಿದೆ.

ಹಿರಿಯ ನಾಯಕ ವಿ. ಶ್ರೀನಿವಾಸ ಪ್ರಸಾದ್‌ ಅವರ ಪಕ್ಷಾಂತರದ ಬೆನ್ನಲ್ಲೇ ಸಹಕಾರ ಸಚಿವ ಎಚ್‌.ಎಸ್‌. ಮಹದೇವ ಪ್ರಸಾದ್‌ ಅಕಾಲಿಕ ನಿಧನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಆಘಾತ ತಂದಿದೆ. ಚಾಮರಾಜನಗರ ಜಿಲ್ಲೆ ಪ್ರಬಲ ವೀರಶೈವ ನಾಯಕರ ಕೊರತೆಯನ್ನು ಎದುರಿಸಬೇಕಾಗಿದೆ.

ವೀರಶೈವ ಮುಖಂಡರಾಗಿದ್ದ ವಿ. ಸೋಮಣ್ಣ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಂತರ ಕೋಲಾರ, ಹಾಸನ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಪ್ರಬಲ ವೀರಶೇವ ನಾಯಕರೇ ಇಲ್ಲದಂತಾಗಿದೆ.

ಐದು ಬಾರಿ ಶಾಸಕರಾಗಿದ್ದ ಅಜಾತ ಶತ್ರು ಮಹಾದೇವ ಪ್ರಸಾದ್, ತಮ್ಮ ಸ್ವಕ್ಷೇತ್ರ  ಗುಂಡ್ಲುಪೇಟೆ ಜನರ ವಿಧೇಯ ನಾಯಕರಾಗಿದ್ದರು. ಕಾಂಗ್ರೆಸ್ ಸರ್ಕಾರ ಮತ್ತು ವೀರಶೈವ ಮಠಗಳ ನಡುವಿನ ಸೇತುವೆಯಂತೆ ಕೆಲಸ ಮಾಡುತ್ತಿದ್ದರು. ಹಿರಿಯ ವೀರಶೈವ ಮುಖಂಡರಾಗಿದ್ದ ಎಂ ವಿ ರಾಜಶೇಖರ ಮೂರ್ತಿ ಮತ್ತು ಎಂ ಮಹದೇವ ಅವರು ಕಾಂಗ್ರೆಸ್ ತೊರೆದ ನಂತರ, ಅವರ ಸ್ಥಾನವನ್ನು ಮಹದೇವ ಪ್ರಸಾದ್ ತುಂಬಿದ್ದರು.

ಹಿರಿಯ ಮುಖಂಡ ಗುರುಪಾದಸ್ವಾಮಿ ಸಕ್ರಿಯ ರಾಜಕಾರಣದಿಂದ ದೂರ ಉಳಿದದ್ದು, ಮಹಾದೇವ ಪ್ರಸಾದ್ ಈ ಭಾಗದ ವೀರಶೈವ ಮುಖಂಡರಾಗಿ ಬೆಳೆಯಲು  ಸಹಾಯವಾಯಿತು.

ಅತಿ ಕಿರಿಯ ವಯಸ್ಸಿನಲ್ಲೆ ರಾಜಕೀಯ ಪ್ರವೇಶ ಮಾಡಿದ ಮಹಾದೇವ ಪ್ರಸಾದ್, ಎರಡು ಬಾರಿ ಜನತಾ ಪಾರ್ಟಿಯಿಂದ ಸ್ಪರ್ಧಿಸಿದ್ದರು. ಒಂದು ಬಾರಿ ಕಾಂಗ್ರೆಸ್ ನ ನಾಗರತ್ನಮ್ಮ ಅವರ ವಿರುದ್ಧ ಪರಾಜಯಗೊಂಡರು. 1994 ರಲ್ಲಿ ಜೆಡಿಯು ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು.

ಉತ್ತಮ ಸಂಘಟನಾ ಚಾತುರ್ಯ ಹೊಂದಿದ್ದ ಮಹಾದೇವ ಪ್ರಸಾದ್ ಕಾಂಗ್ರೆಸ್ ನ ಪ್ರಬಲ ನಾಯಕರು ಆಗಿದ್ದರು. ನಂಜನಗೂಡು ವಿಧಾನ ಸಭೆ ಉಪಚುನಾವಣೆಯಲ್ಲಿ ಪಕ್ಷವನ್ನು ಸಂಘಟಿಸಲು ಉತ್ತಮ ಹಾಗೂ ಸಮುದಾಯದ ಜನ ಮೊನವೊಲಿಸುವ ನಾಯಕರಾಗಿದ್ದರು.

ಮಹಾದೇವ ಪ್ರಸಾದ್ ಅವರ ನಿಧನ ಕಾಂಗ್ರೆಸ್ ಗೆ ಬಲು ದೊಡ್ಡ ಆಘಾತ ನೀಡಿದೆ, ಲಿಂಗಾಯತ ನಾಯಕ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರಿಗೆ ಪ್ರಸಾದ್ ಪ್ರತಿಸ್ಫರ್ದಿಯಾಗಿದ್ದರು. ಚಾಮರಾಜನಗರ, ಮೈಸೂರು, ಹಾಸನ , ಮಂಡ್ಯ, ಚಿಕ್ಕಮಗಳೂರು ಜಿಲ್ಲೆಗಳ ಲಿಂಗಾಯತ ಸಮುದಾಯದ ನೆಚ್ಚಿನ ನಾಯಕರಾಗಿದ್ದರು.

ಚಾಮರಾಜನಗರದಲ್ಲಿ ನೀರಾವರಿ, ಕೈಗಾರಿಕೆ, ಶಿಕ್ಷಣ, ನಗರಾಭಿವೃದ್ಧಿ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ಹಲವು ಜನಹಿತ ಕಾರ್ಯಗಳನ್ನು ಕೈಗೊಂಡಿದ್ದ ಮಹಾದೇವ ಪ್ರಸಾದ್ ಜನಾನುರಾಗಿಯಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com