ಪಕ್ಷದಲ್ಲಿ ಇರುವ ಒಬ್ಬ ಬ್ರಾಹ್ಮಣನನ್ನು ಕೈಬಿಟ್ಟು ನಾನೇನು ಮಾಡ್ಲಿ: ದೇವೇಗೌಡ

'ಪಕ್ಷದಲ್ಲಿ ಇರುವ ಒಬ್ಬ ಬ್ರಾಹ್ಮಣನನ್ನು ಕೈಬಿಟ್ಟು ನಾನೇನು ಮಾಡಲಿ' ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ...
ಎಚ್.ಡಿ.ದೇವೇಗೌಡ
ಎಚ್.ಡಿ.ದೇವೇಗೌಡ
ಗದಗ: 'ಪಕ್ಷದಲ್ಲಿ ಇರುವ ಒಬ್ಬ ಬ್ರಾಹ್ಮಣನನ್ನು ಕೈಬಿಟ್ಟು ನಾನೇನು ಮಾಡಲಿ' ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಶುಕ್ರವಾರ ವರದಿಗಾರರನ್ನೇ ಪ್ರಶ್ನಿಸಿದ್ದಾರೆ.
ಇಂದು ಗದಗದಲ್ಲಿ ವರದಿಗಾರರು ಮುಂದಿನ ಚುನಾವಣೆಯಲ್ಲಿ ಕಡೂರು ಶಾಸಕ ವೈ.ಎಸ್‌.ವಿ.ದತ್ತಾ ಅವರಿಗೆ ಟಿಕೇಟ್‌ ನೀಡುವುದಿಲ್ಲವಂತೆ ಎಂದು ಪ್ರಶ್ನಿಸಿದಾಗ ದೇವೇಗೌಡರು ಹೀಗೆ ಪ್ರತಿಕ್ರಿಯಿಸಿದ್ದು, ಅವರಿಗೂ ಟಿಕೇಟ್‌ ನೀಡುತ್ತೇವೆ, ಯಾವುದೇ ಕಾರಣಕ್ಕೂ ಅವರನ್ನು ಕೈಬಿಡುವುದಿಲ್ಲ ಎಂದರು. 
ಇದೇ ವೇಳೆ ರಾಜ್ಯ ಸರ್ಕಾರ ಕಪ್ಪತಗುಡ್ಡ ಖನಿಜ ಸಂಪತ್ತು ತೆಗೆಯಲು ಅನುಮತಿ ನೀಡಿರುವುದು ಸರಿಯಲ್ಲ. ಇದರ ವಿರುದ್ಧ ಹೋರಾಟದ ನೇತೃತ್ವ ವಹಿಸಿರುವ ತೋಂಟದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳಿಗೆ ಜೆಡಿಎಸ್‌ನ ಸಂಪೂರ್ಣ ಬೆಂಬಲ ಇದೆ. ಹೋರಾಟಕ್ಕೂ ಪಕ್ಷ ಸಿದ್ದವಾಗಿದೆ ಎಂದು ಮಾಜಿ ಪ್ರಧಾನಿ ತಿಳಿಸಿದರು.
ಕಳಸಾ ಬಂಡೂರಿ ಹೋರಾಟಗಾರರ ಗಡಿಪಾರು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಹೀಗೆ ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com