ಗುಜರಾತ್ ಶಾಸಕರಿಗೆ ಕರ್ನಾಟಕ ದರ್ಶನ ಭಾಗ್ಯ!

ಐಷಾರಾಮಿ ರೆಸಾರ್ಟ್ ನಲ್ಲಿ ಕೂತು ಕಾಲ ಕಳೆಯಲು ಬೇಸರ ವ್ಯಕ್ತ ಪಡಿಸಿರುವ ಬೆಂಗಳೂರು ಹೊರವಲಯದಲ್ಲಿ ವಾಸ್ತವ್ಯ ಹೂಡಿರುವ ಗುಜರಾತ್ ಶಾಸಕರು, ..
ಬಿಡದಿಯ ಈಗಲ್ ಟನ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿರುವ ಗುಜರಾತ್ ಶಾಸಕರು
ಬಿಡದಿಯ ಈಗಲ್ ಟನ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿರುವ ಗುಜರಾತ್ ಶಾಸಕರು
ಬೆಂಗಳೂರು: ಐಷಾರಾಮಿ ರೆಸಾರ್ಟ್ ನಲ್ಲಿ ಕೂತು ಕಾಲ ಕಳೆಯಲು ಬೇಸರ ವ್ಯಕ್ತ ಪಡಿಸಿರುವ ಬೆಂಗಳೂರು ಹೊರವಲಯದಲ್ಲಿ ವಾಸ್ತವ್ಯ ಹೂಡಿರುವ ಗುಜರಾತ್ ಶಾಸಕರು, ಮುಂದಿನ ದಿನಗಳಲ್ಲಿ  ಕರ್ನಾಟಕದ ವಿಶೇಷ ಆತಿಥ್ಯ ಸವಿಯಲು ಮುಂದಾಗಿದ್ದಾರೆ. 
ಮುಂದಿನ ದಿನಗಳಲ್ಲಿ ಶಾಸಕನ್ನು ರಾಜ್ಯದಲ್ಲಿರುವ ಪ್ರಸಿದ್ಧ ದೇವಾಲಯಗಳು ಮತ್ತು ಪ್ರವಾಸಿ ಸ್ಥಳಗಳಿಗೆ ಕರೆದೊಯ್ಯಲಾಗುವುದು ಎಂದು ಗುಜಾರಾತ್ ಶಾಸಕರು ಉಸ್ತುವಾರಿ ಹೊಣೆಗಾರಿಕೆ ವಹಿಸಿಕೊಂಡಿರುವ ಇಂಧನ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಐಡಿ-ಬಿಟಿ ಸ್ಥಳಗಳಿಗೆ  ಶಾಸಕರು ಈಗಾಗಲೇ ಭೇಟಿ ನೀಡಿದ್ದು ತಾವು ಮೋಜಿಗಾಗಿ ಇಲ್ಲಿಗೆ ಬಂದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಆದರೆ ಐಟಿ ಮತ್ತು ಬಿಟಿ ವಿಭಾಗದಲ್ಲಿ ಕರ್ನಾಟಕದ ಯಶಸ್ಸಿನ ಕಥೆಯ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ.
ಡಿ.ಕೆ ಶಿವಕುಮಾರ್ ಭಾನುವಾರ ಗುಜರಾತ್ ಶಾಸಕರೊಡನೆ ದಿನವಿಡೀ ಕಾಲ ಕಳೆದಿದ್ದಾರೆ. ಗುಜರಾತ್ ಶಾಸಕರನ್ನು ಸೆಳೆಯಲು ಬಿಜೆಪಿ ಹಲವು ತಂತ್ರಗಳನ್ನು ನಡೆಸುತ್ತಿದೆ. ಹೀಗಾಗಿ ಶಾಸಕರ ಹೊಣೆಗಾರಿಕೆಯನ್ನು ಕರ್ನಾಟಕ ಕಾಂಗ್ರೆಸ್ ಗೆ ನೀಡಿದ್ದು, ಈ ಟಾಸ್ಕ್ ನಲ್ಲಿ ತಾವು ಯಶಸ್ವಿಯಾಗುವುದಾಗಿ ಶಿವುಕುಮಾರ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಶಾಸಕರನ್ನು ಗೃಹ ಬಂಘನದಲ್ಲಿರಿಸಲಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ಶಿವಕುಮಾರ್, ಶಾಸಕರನ್ನು ವಿವಿಧ ಪ್ರವಾಸಿ ಹಾಗೂ ಯಾತ್ರಾ ಸ್ಥಳಗಳಿಗೆ ಕರೆದೊಯ್ಯಲಾಗುವುದು ಎಂದು ಹೇಳಿದ್ದಾರೆ.
ಶಾಸಕರು ವಾಪಸ್ ತೆರಳುವಂತೆ ಆಗ್ರಹಿಸಿ ಪ್ರತಿಭಟನೆ
ರಾಜ್ಯದಲ್ಲಿ ಗುಜರಾತ್ ಶಾಸಕರು ವಾಸ್ತವ್ಯ ಹೂಡಿರುವ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿರುವ ಹಲವು ಗುಜರಾತಿಗಳು ಮತ್ತು ಸಿಟಿಜನ್ ಆಫ್ ಡೆಮಾಕ್ರಸಿ ಸಂಘದ ಸದಸ್ಯರು ನಗರದ ಮೌರ್ಯ ಸರ್ಕಲ್ ನಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ, ಕೂಡಲೇ ಶಾಸಕರು ತಮ್ಮ ವಿಧಾನಸಭೆ ಕ್ಷೇತ್ರಗಳಿಗೆ ವಾಪಸ್ ತೆರಳುವಂತೆ ಆಗ್ರಹಿಸಿದ್ದಾರೆ.
ಗುಜರಾತ್ ನಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದ ಹಲವು ಮಂದಿ ತಮ್ಮ ಜೀವ ಕಳೆದುಕೊಂಡಿದ್ದಾರೆ. ಕೂಡಲೇ ಶಾಸಕಕರು ಅಲ್ಲಿಗೆ ತೆರಳಿ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com